ಮಂಗಳವಾರ, ಜುಲೈ 29, 2014

ಸಾಮ್ಯತೆಯ ಲಾರ್ಡ್ಸ್ ಟೆಸ್ಟ್

ಲಾರ್ಡ್ಸ್​ನಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಗೆದ್ದಿದ್ದು ಹಲವು ರೋಚಕಗಳಿಗೆ ಕಾರಣವಾಗಿದೆ. ಕಪಿಲ್​ ದೇವ್​ ನಂತರ ಇಂತಹ ಸಾಹಸ ಮಾಡಿದ್ದು ಮಹಿ. ಈ ಮೂಲಕ ಹಲವು ಅಚ್ಚರಿಯ ಘಟನೆಗಳಿಗೆ ಕಾರಣರಾಗಿದ್ದಾರೆ. ಈ ದಾಖಲೆಯಲ್ಲಿ ಟೀಮ್​ನ ಅನೇಕ ಸದಸ್ಯರು ಪಾತ್ರರಾಗಿದ್ದು. ಹಲವು ರೀತಿಯಲ್ಲಿ ಈ ಗೆಲುವು ಭಾರತೀಯರಿಗೆ ರೋಮಾಂಚನವುಂಟು ಮಾಡುವಲ್ಲಿ ಯಶಸ್ವಿಯಾಗಿದೆ....

ಭಾರತ ತಂಡ ಐತಿಹಾಸಿಕ ಲಾರ್ಡ್ಸ್​ ಟೆಸ್ಟ್​ ಗೆದ್ದಿರುವುದು ಈಗ ಹೊಸ ಸಂತಸಕ್ಕೆ ಕಾರಣವಾಗಿದೆ. ಅದು ಗೆಲುವಿನ ಖುಷಿಯಿಂದಷ್ಟೆ ಅಲ್ಲ. ಎರಡು ಪಂದ್ಯಗಳಿಗಿರುವ ಸಾಮ್ಯತೆಯಿಂದಾಗಿ. 1986ರ ಪಂದ್ಯಕ್ಕೂ 2014ರ ಪಂದ್ಯಕ್ಕೂ ಅನೇಕ ಸಾಮ್ಯತೆಗಳನ್ನು ನಾವು ಕಾಣಬಹುದು. ಹೀಗಾಗಿ ಈ ಪಂದ್ಯ ಕಪಿಲ್​ ಡೆವಿಲ್ಸ್ ಮತ್ತು ಧೋನಿ ಬ್ರಿಗೇಡ್​ಗೆ ವಿಶೇಷ ಟೆಸ್ಟ್​ ಆಗಿದೆ.

ವಿಶ್ವಕಪ್​ ಗೆದ್ದ ನಾಯಕರು ಕಪಿಲ್​-ಧೋನಿ

1986 ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಗೆದ್ದ ನಾಯಕ ಕಪಿಲ್​ದೇವ್​. ವಿಶೇಷ ಎಂದರೆ ಕಪಿಲ್​ ಭಾರತಕ್ಕೆ ಮೊದಲ ವಿಶ್ವಕಪ್​ ಗೆದ್ದ ನಾಯಕ. 2014ರಲ್ಲಿ ಮಹಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ನಾಯಕ ಎಂದೆನಿಸಿಕೊಂಡ್ರು ವಿಶೇಷ ಎಂದರೆ ಧೋನಿ ಕೂಡ ವಿಶ್ವಕಪ್​ ಗೆದ್ದಿರುವ ಭಾರತದ ಎರಡನೇ ನಾಯಕ. ಸೋಜಿಗ ಅಂದರೆ ಇಬ್ಬರು ವಿಶ್ವಕಪ್​ ಗೆದ್ದ ಮೂರು ವರ್ಷದ ನಂತರ ಲಾರ್ಡ್ಸ್​ನಲ್ಲಿ ಟೆಸ್ಟ್​ ಜಯದ ರುಚಿ ಅನುಭವಿಸಿದ್ರು.

ಮೊದಲ ಇನ್ನಿಂಗ್ಸ್​ 9 ರನ್​ ಗಳಿಸಿದ ಬಿನ್ನಿ

ಈ ಟೆಸ್ಟ್​ನಲ್ಲಿ ಇನ್ನೊಂದು ಸಾಮ್ಯತೆಯಂದರೆ, ರೋಜರ್​ ಬಿನ್ನಿ-ಸ್ಟುವರ್ಟ್​ ಬಿನ್ನಿ ಅಪ್ಪ ಮಕ್ಕಳ ಆಟ. 1986ರಲ್ಲಿ ಲಾರ್ಡ್ಸ್​ನಲ್ಲಿ ಚೊಚ್ಚಲ ಟೆಸ್ಟ್​ ಆಡಿದ ರೋಜರ್​ ಬಿನ್ನಿ, ಮೊದಲ ಇನ್ನಿಂಗ್ಸ್​​​ನಲ್ಲಿ 19 ಬಾಲ್​ಗೆ 9 ರನ್​ಗಳಿಸಿದ್ರು. ಲಾರ್ಡ್ಸ್​ನಲ್ಲಿ ಮೊದಲ ಪಂದ್ಯವಾಡಿದ ಬಿನ್ನಿ ಕೂಡ ಪ್ರಥಮ ಇನ್ನಿಂಗ್ಸ್​ನಲ್ಲಿ 19 ಬಾಲ್​ಗೆ 9 ರನ್​ಗಳಿಸುವ ಮೂಲಕ ಅಚ್ಚರಿಗೆ ಕಾರಣರಾದ್ರು. ಅಪ್ಪನ ಹಾದಿಯಲ್ಲೇ ಮಗ ಸಾಗಿದ್ರು.

ಲಾರ್ಡ್ಸ್​ನಲ್ಲಿ ಮುಂಬೈ ಆಟಗಾರರ ಶತಕ

ಲಾರ್ಡ್ಸ್​ನಲ್ಲಿ ನಡೆದ  1986ರ ಟೆಸ್ಟ್​ ಹಾಗೂ 2014ರ ಟೆಸ್ಟ್​ನಲ್ಲಿ  ಶತಕ ದಾಖಲಿಸಿದ ಇಬ್ಬರು ಆಟಗಾರರು ಮುಂಬೈನವರು. 86ರಲ್ಲಿ ದಿಲೀಪ್​ ವೆಂಗ್​​ಸರ್ಕಾರ್​ ಶತಕ ದಾಖಲಿಸಿದ್ರೆ, 2014ರಲ್ಲಿ ಅಜಿಂಕ್ಯ ರಹಾನೆ ಶತಕ ದಾಖಲಿಸಿದ್ರು. ವಿಶೇಷವೆಂದ್ರೆ ಎರಡು ಶತಕ ಮೊದಲ ಇನ್ನಿಂಗ್ಸ್​ನಲ್ಲಿ ದಾಖಲಾಗಿದ್ವು.

5 ವಿಕೆಟ್​ ಪಡೆದ ‘ಶರ್ಮಾ’

V/O: ಅಷ್ಟೇ ಅಲ್ಲ 2014ರಲ್ಲಿ  ಇಶಾಂತ್​ ಶರ್ಮಾ ಐದು ಪ್ಲಸ್​ ವಿಕೆಟ್​ ಪಡೆದು ಭಾರತದ ಜಯದ ರೂವಾರಿಯಾದ್ರು. 86ರಲ್ಲಿ ಚೇತನ್​ ಶರ್ಮಾ ಐದು ವಿಕೆಟ್​ ಉರುಳಿಸಿ  ಇಂಗ್ಲೆಂಡ್​ ಗೆಲುವಿಗೆ ಅಡ್ಡಿಯಾಗಿದ್ರು. ವಿಶೇಷ ಎಂದರೆ ಇಬ್ಬರ  ಸರ್​ ನೇಮ್​  ಶರ್ಮಾ.

 86ರ ಫಿಫಾ ಫೈನಲ್​ನಲ್ಲಿ ಸೆಣಸಿದ್ದ ಜರ್ಮನಿ-ಅರ್ಜೆಂಟೀನಾ
ಎಲ್ಲದಕ್ಕಿಂತ ಸೋಜಿಗದ ಸಂಗತಿಯೆಂದರೆ, 1986ರಲ್ಲಿ ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಸೆಣಸಿದ್ದು ಇದೇ ಜರ್ಮನಿ-ಅರ್ಜೆಂಟೀನಾ, ಈ ಸಲ ಫಿಫಾ ಫೈನಲ್​ನಲ್ಲಿ ಸೆಣಸಿದ ಟೀಮ್​ ಕೂಡ ಇವೇ ಆಗಿದ್ವು. ವಿಶೇಷ ಎಂದರೆ ಎರಡು ಸಲ ಭಾರತ ಲಾರ್ಡ್ಸ್​ ಟೆಸ್ಟ್​ ಗೆಲ್ಲುವ ಮೊದಲೇ ಫಿಫಾ ವಿಶ್ವಕಪ್​ ಮುಗಿದು ಹೋಗಿತ್ತು.

ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಭಾರತದ ಗೆಲುವು ಅದ್ಭುತ ಎಂದೆನಿಸಲು ಕೇವಲ ಗೆಲುವೊಂದೇ ಕಾರಣವಲ್ಲ. ಗೆದ್ದ ಸಮಯದಲ್ಲಿ ಅನೇಕ ಸಂಗತಿ, ಸನ್ನಿವೇಶಗಳು ಒಂದೇ ರೀತಿಯಾಗಿದ್ವು. ಕಾಲವು ಕೂಡ ಭಾರತದ ಜೊತೆಗಿತ್ತು ಎಂಬುವುದು ಅಷ್ಟೇ ಸತ್ಯ.

ರವಿ.ಎಸ್​, ಸ್ಪೋರ್ಟ್ಸ್​ ಬ್ಯೂರೋ ಸುವರ್ಣ ನ್ಯೂಸ್​

ಮಂಗಳವಾರ, ಜುಲೈ 22, 2014

ಆಂಗ್ಲರಿಗೆ ಓವಲ್​ ಪಿಚ್ ಶಾಪ

ವಿಶ್ವದ ಎಲ್ಲ ಕ್ರಿಕೆಟಿಗರು ಪಿಚ್​ ಎಂದರೆ ಗರ್ಭಗುಡಿಯಂತೆ ಪೂಜಿಸುತ್ತಾರೆ. ಅನೇಕ ಆಟಗಾರರು ಬ್ಯಾಟಿಂಗ್​ ಮುನ್ನ ಪಿಚ್​ನ ನಮಸ್ಕರಿಸುತ್ತಾರೆ. ಯಶಸ್ಸಿನ ನಂತರ ಪಿಚ್​ನ ಸ್ಪರ್ಶಿಸಿ ಥ್ಯಾಂಕ್ಸ್​ ಹೇಳುವ ಪರಿಪಾಟ ಎಲ್ಲೆಡೆ ಕಾಣಬಹುದು. ಆದರೆ ಇಂಗ್ಲೆಂಡ್​ ಆಟಗಾರರು ಮಾಡಿದ ಒಂದು ತಪ್ಪು ಅವರಿಗೆ ಮಾರಕವಾಗಿದೆ. ಪಿಚ್​ಗೆ ಅವಮಾನಿಸಿದ ಇಂಗ್ಲೆಂಡ್​ ಲಾರ್ಡ್ಸ್​ ಟೆಸ್ಟ್​ ಸೋತಿದೆ.......

ಕಳೆದ  9 ಟೆಸ್ಟ್​ಗಳಿಗಿಂತ ಮುಂಚೆ ಇಂಗ್ಲೆಂಡ್​ ತಂಡ ವಿಶ್ವ ಟೆಸ್ಟ್​ ಱಂಕಿಂಗ್​ನಲ್ಲಿ ನಂಬರ್​ ವನ್​ ಸ್ಥಾನದಲ್ಲಿತ್ತು. ಯಾವಾಗ ಇಂಗ್ಲೆಂಡ್​ ಆಟಗಾರರು ದಿ ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೋ ಅಲ್ಲಿಂದ ಅವರ ಹಣಬರಹವೇ ಬದಲಾಗಿ ಹೋಯ್ತು. ಅಗ್ರಸ್ಥಾನದಲ್ಲಿದ್ದ ತಂಡ, ಆ ಘಟನೆ ನಂತರ ಒಂದು ಜಯ ದಾಖಲಿಸಿಲ್ಲ. ಈಗ್ಲೂ ಗೆಲುವು ಎಂಬುವುದು ಆಂಗ್ಲರಿಗೆ ಗಗನ ಕುಸುಮವಾಗಿದೆ.

 ವಿಶ್ವದ ಯಾವುದೇ ಶ್ರೇಷ್ಠ ಆಟಗಾರನಿರಲಿ, ಅವರಿಗೆ ಕೋಚ್ ಕಲಿಸುವ ಮೊದಲ ಪಾಠ, ಪಿಚ್​ನ ಗೌರವಿಸುವುದು. ಇಂತಹ ವಿಷಯದಲ್ಲಿ ಏಷ್ಯಾ ಉಪಮಹಾದ್ವೀಪದ ಎಲ್ಲ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರು ಪಿಚ್​ನ ದೇವರಂತೆ ಪೂಜಿಸುತ್ತಾರೆ. ಭಾರತೀಯರು, ಲಂಕನ್ನರು, ಆಡುವ ಮುಂಚೆ ಪಿಚ್​ನ ನಮಸ್ಕರಿಸಿದ್ರೆ, ಬಾಂಗ್ಲಾ ಮತ್ತು ಪಾಕ್​ ಆಟಗಾರರು ಪಿಚ್​ನಲ್ಲಿ ನಮಾಜ್​ ಬಿದ್ದು ಮುತ್ತಿಕ್ಕಿ ಖುಷಿ ಪಡ್ತಾರೆ.

 ಸನತ್​ ಜಯಸೂರ್ಯ, ರಾಹುಲ್​ ದ್ರಾವಿಡ್​, ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ಶೇನ್​ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್​ ಎಲ್ಲ ಆಟಗಾರರು ಪಿಚ್​ನ ದೇವರಂತೆ ಪೂಜಿಸಿದವರು. ಪಾಕ್​ನ ಆಟಗಾರರು ಇದಕ್ಕೆ ಹೊರತಾಗಿಲ್ಲ. ವಿದೇಶಿ ಆಟಗಾರರು ಕೂಡ ಅಷ್ಟೇ ಪ್ರತಿ ಯಶಸ್ಸಿನ ನಂತರ ಪಿಚ್​ಗೆ ಅವರದೇಯಾದ ರೀತಿಯಲ್ಲಿ ಒಂದು ಥ್ಯಾಂಕ್ಸ್​ ಹೇಳುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಅದು ಆಟಗಾರರು ಪಿಚ್​ಗೆ ತೂರುವ ಗೌರವ. ಇದು  ಸಭ್ಯರ ಆಟದ ಸಭ್ಯತೆ ಕೂಡ ಹೌದು.

 ಸಚಿನ್​ ತಮ್ಮ ವಿದಾಯದ ಟೆಸ್ಟ್​ನ ಆರಂಭದಲ್ಲಿ ಪಿಚ್​ ಮುಟ್ಟಿ ನಮಸ್ಕರಿಸಿದ್ರು. ಭಾರತ ಗೆದ್ದ ಕೂಡಲೇ ಅದೇ ಪಿಚ್​ನಲ್ಲಿ ಅಡ್ಡ ಬಿದ್ದು ನಮಸ್ಕರಿಸಿದ್ರು. ನಾನು ಈ ಪರಿ ಬೆಳೆಯುವುದಕ್ಕೆ ಕಾರಣ ಈ ಪಿಚ್​ಗಳು. ಪಿಚ್ ನನ್ನ ಮೇಲೆ ಹೆಚ್ಚು ಹಾರೈಸಿದವು, ಕೃಪೆ ತೋರಿದ್ವು. ಹಾಗಾಗಿ ನಾನು ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ಸಹಕಾರಿ ಆಯ್ತು. ಎನ್ನುವ ಮೂಲಕ ಪಿಚ್​ಗಳ ಬಗ್ಗೆ ಅವರಿಗಿರುವ ಗೌರವವನ್ನು ಹೊರಹಾಕಿದ್ರು.

2013ರ ತವರಿನಲ್ಲಿ ನಡೆದ ಆ್ಯಶಸ್​ ಸರಣಿಯನ್ನು ಇಂಗ್ಲೆಂಡ್​  3-0ಯಿಂದ ಗೆದ್ದು ಕೊಳ್ತು. ಆಂಗ್ಲರು ಓವಲ್​ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ರು. ಟೆಸ್ಟ್​​ನ ನಂಬರ್​ ವನ್​ ತಂಡವಾಗಿ ಮೆರೆದ್ರು. ಅದೇ ಹುಮ್ಮಸ್ಸಿನಲ್ಲಿ ಆಟಗಾರರು ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಂಭ್ರಮಿಸಿದ್ರು. ಅದೇ ಕೊನೆ ಆದಾದ ನಂತರ ಇಂಗ್ಲೆಂಡ್​ ತಂಡ ಇದುವರೆಗೂ ಒಂದು ಟೆಸ್ಟ್​ ಗೆಲಲ್ಲು ಸಾಧ್ಯವಾಗಿಲ್ಲ.

 ಓವಲ್​ ಘಟನೆಯ ನಂತರ ಇಂಗ್ಲೆಂಡ್​ ಪ್ರದರ್ಶನ ತುಂಬಾ ಕೆಟ್ಟದಾಗಿದೆ. ಆಡಿದ 9 ಟೆಸ್ಟ್​ನಲ್ಲಿ ಆಂಗ್ಲರು ಒಂದರಲ್ಲೂ ಗೆದ್ದಿಲ್ಲ. ಏಳರಲ್ಲಿ ಸೋತಿದ್ದು, 2 ಡ್ರಾ ಮಾಡಿಕೊಂಡಿದೆ.

 ಕಳೆದ ವರ್ಷ ಟೆಸ್ಟ್​ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್,​ ಇಂದು ಐದನೇ ಸ್ಥಾನ್ಕಕೆ ಕುಸಿದಿದೆ. ಇದು ಓವಲ್​ ಪಿಚ್​ನ ಶಾಪ ಅನ್ನೋದು ಕೆಲವರ ವಾದ. ಆದರೆ ಒಂದಂತೂ ಸತ್ಯ ಯಾರು ಪಿಚ್​ನ ಗೌರವಿಸುವುದಿಲ್ಲವೋ ಅವರಿಗೆ ಶ್ರೇಯ ದೊರೆಯುವುದಿಲ್ಲ. ಪಿಚ್​ ಒಲುಮೆಯಿಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂಬ ಮಾತು ಇಂಗ್ಲೆಂಡ್​ನ ಸದ್ಯದ ಪರಿಸ್ಥಿತಿಯಿಂದ ತಿಳಿಯುತ್ತೆ. ಇದು ಲಾಜಿಕ್ಕೋ, ಮ್ಯಾಜಿಕ್ಕೋ ಗೊತ್ತಿಲ್ಲ. ಆದರೆ ಆಂಗ್ಲರಿಗೆ ಮಾತ್ರ ಆಘಾತ ಆಗುವಂತ ಶಾಪ ಇದಾಗಿದೆ.

ರವಿ.ಎಸ್​

ಮಂಗಳವಾರ, ಜುಲೈ 15, 2014

ಫುಟ್ಬಾಲ್​ ಲೋಕದ ವಿಭಿನ್ನ ಪಯಣಿಗ ಮೆಸ್ಸಿ

ಪ್ರತಿಯೊಬ್ಬ ಸಾಧಕನ ಹಿಂದೆ, ಒಂದು ನೋವಿನ ಕಥೆಯಿರುತ್ತೆ. ಯಶಸ್ಸು ಎಂಬುದು ಶ್ರಮ, ಶ್ರದ್ಧೆಗೆ ಸಿಗುವ ಪ್ರತಿಫಲ. ಫುಟ್ಬಾಲ್​ ಆಟಗಾರರು ಇದಕ್ಕೆ ಹೊರತಾಗಿಲ್ಲ. ಅರ್ಜೆಂಟೀನಾ ತಂಡದ ಸ್ಟಾರ್​ ಆಟಗಾರ ಬೆಂಕಿಯಲ್ಲಿ ಆರಳಿದ ಹೂ ಲಿಯೊನೆಲ್​ ಮೆಸ್ಸಿ. ದುರ್ಬಲ ದೇಹವನ್ನು ಮೆಟ್ಟಿ ನಿಂತ ಗಟ್ಟಿ ಮನಸ್ಸು ಮೆಸ್ಸಿ. ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲಿ. ಅವೆಲ್ಲ ಮೆಟ್ಟಿನಿಂತ ಕಾರಣವೇ ಇಂದು ವಿಶ್ವಶ್ರೇಷ್ಠ ಆಟಗಾರ ಎಂದೆನಿಸಿಕೊಳ್ಳಲ್ಲು ಸಾಧ್ಯವಾಗಿದ್ದು...

ಲಿಯೊನೆಲ್​ ಮೆಸ್ಸಿ ಕುಟುಂಬಸ್ಥರು ಮೂಲತಃ ಇಟಲಿಯವರು. 1880ರಲ್ಲಿ ಇವರ ಪೂರ್ವಜರು ಇಟಲಿಯಿಂದ ಅರ್ಜೆಂಟೀನಾಗೆ ಗುಳೆ ಬಂದವರು. ಮೆಸ್ಸಿ ತಂದೆ ಜಾರ್ಜ್​ ಮೆಸ್ಸಿ ಸ್ಟೀಲ್​ ಕಂಪನಿಯ ನೌಕರ, ತಾಯಿ ಪಾರ್ಟ್​ ಟೈಮ್​ ಮೆನೆಗೆಲಸ ಮಾಡಿಕೊಂಡು ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದವರು.. ಮೆಸ್ಸಿ ಮೊದಲಿನಿಂದಲೂ ಡೀಗೊ ಮೆರಡೋನಾ ಅವರ ಡೈ ಹಾರ್ಡ್​ ಫ್ಯಾನ್​, ಅವರಂತೆ ಆಗಬೇಕೆಂದು ಫುಟ್ಬಾಲ್​ಗೆ ಬಂದವರು. ಮೆರಡೋನಾ ಕನವರಿಸುತ್ತಾ, ಕಣ್ತುಂಬಿಕೊಂಡು ಆಡಿದವ ಮೆಸ್ಸಿ..

ಐದು ವರ್ಷದಿಂದಲೇ ಮಸ್ಸಿ ಫುಟ್ಬಾಲ್​ ಆಡಲು ಶುರುಮಾಡಿದ್ರು. ಮೆಸ್ಸಿಗೆ ಅವರ ತಂದೆ ಜಾರ್ಜ್ ಮೊದಲ ಕೋಚ್​. ಮೆಸ್ಸಿ ಅದ್ಭುತ ಆಟದಿಂದ ಅವರನ್ನು ‘ದ ಮಿಶಿನ್​ 87’ ಎಂದು ಕರೆಯಲಾಗುತ್ತಿತ್ತು. ಬಾಲ್​ ಅವರ ಹತ್ತಿರ ಬಂದರೆ ಸಾಕು ಗೋಲ್​ ಆಗುವ ತನಕ ಮೆಸ್ಸಿ ಬಾಲ್​ ಬೇರೆಯವರಿಗೆ ಕೊಡುತ್ತಿರಲಿಲ್ಲ. ವನ್​ಮ್ಯಾನ್​ ಆರ್ಮಿಯಂತೆ ಅವರು ಆಡುತ್ತಿದ್ರು... ಇಂತಹ ಮಹಾನ್​ ಆಟಗಾರನ ಲೈಫ್​ಗೆ ಅಡ್ಡಿಯಾಗಿದ್ದು ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿ ಎಂಬ ಕಾಯಿಲೆ...

ಹನ್ನೊಂದನೆ ವಯಸ್ಸಿನಲ್ಲೇ ಮೆಸ್ಸಿ ‘ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿ’  ಕಾಯಿಲೆಗೆ ತುತ್ತಾದ್ರು. ಈ ಕಾಯಿಲೆಯಿಂದ ಮೆಸ್ಸಿ ಬೆಳವಣಿಗೆ ಸಂಪೂರ್ಣವಾಗಿ ನಿಂತುಹೋಯ್ತು. ತಿರುಗಾಡಲಿಕ್ಕು ಅವರಿಂದ ಅಸಾಧ್ಯವಾಗಿತ್ತು. ಇದರ ಚಿಕಿತ್ಸೆ ಕೂಡ ಅತ್ಯಂತ ದುಭಾರಿಯಾಗಿತ್ತು. ಆಗಿನ ಕಾಲದಲ್ಲೇ ತಿಂಗಳಿಗೆ 900 ಡಾಲರ್​ ಖರ್ಚು ಮಾಡಬೇಕಿತ್ತು. ಬಡ ತಂದೆಗೆ ಇದು ಸಾಧ್ಯವಿರಲಿಲ್ಲ. ಆಗ ಮೆಸ್ಸಿ ನೆರವಿಗೆ ಬಂದಿದ್ದು, ಬಾರ್ಸಿಲೋನಾ ಕ್ಲಬ್​ನ ನಿರ್ದೇಶಕ ಕಾರ್ಲ್​ಸ್ ರೆಕ್ಸಾಚ್​. ಮೆಸ್ಸಿ ಚಿಕಿತ್ಸೆ ಕೂಡಿಸುವ ಜವಾಬ್ದಾರಿ ಹೊತ್ತಿಕೊಳ್ಳುವ ಮೂಲಕ ಕ್ಲಬ್​​ ಅವರಿಗೆ ಕ್ಲಬ್​ ಸದಸ್ಯತ್ವ ನೀಡಿದ್ರು. ಆದರೆ ಅದಕ್ಕೊಂದು ಷರತ್ತು ಕೂಡ ಇಟ್ಟಿದ್ರು. ಅವರ ಸಂಪೂರ್ಣ ಕುಟುಂಬ ಸ್ಪೇನ್​ಗೆ ಸ್ಥಳಾಂತರಗೊಳ್ಳಬೇಕೆಂದು. ಮಗನ ಚಿಕಿತ್ಸೆ ಆಗುತ್ತೆ ಎಂಬ ಒಂದೆ ಕಾರಣಕ್ಕೆ ಅವರ ತಂದೆ ತಾಯಿ ಸ್ಪೇನ್​ಗೆ ಸ್ಥಳಾಂತರಗೊಂಡ್ರು..

ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿಯಿಂದ ಮೆಸ್ಸಿ ಬೆಳವಣಿಗೆ ಸಂಪೂರ್ಣ ನಿಂತು ಹೊಗಿತ್ತು.  15 ದಿನ ಬಲಗಾಲಲ್ಲಿ, 15 ದಿನ ಎಡಗಳಲ್ಲಿ ಮೆಸ್ಸಿ ತಿರುಗಾಡಬೇಕಿತು. ಅಷ್ಟು ತೀವ್ರತರವಾದ ಖಾಯಿಲೆ ಇದಾಗಿತ್ತು. ಚಿಕಿತ್ಸೆ ಸಿಗುತ್ತಿದ್ರು ಮೆಸ್ಸಿ ಓಂಟಿಗಾಲಲ್ಲಿ ನಿಲ್ಲುವಂತ ಪರಿಸ್ಥಿತಿ ಇತ್ತು. ಕೊನೆಗೆ ಕಠಿಣ ವ್ಯಾಯಾಮ ನಡೆಸುವ ಮೂಲಕ ಅವರು ಸಾಮಾನ್ಯರಂತೆ ಫುಟ್ಬಾಲ್​ ಆಡಲು ಶುರುಮಾಡಿದ್ರು.. ಬಾರ್ಸಿಲೋನ ಕಿರಿಯರ ಎ. ಬಿ ತಂಡದಲ್ಲಿ ಮಿಂಚಿದ್ರು..

 14ನೇ ವರ್ಷದಲ್ಲಿ ಮೆಸ್ಸಿ ಮುಂದೆ ಮತ್ತೊಂದು ದೊಡ್ಡ ಸವಾಲು ಎದುರಾಯ್ತು. ಕ್ಲಬ್​ಗೆ ಆಡುವುದೋ ಅಥವಾ ದೇಶಕ್ಕೆ ಮರಳುವುದೋ ಎಂದು ಗೊದಲದಲ್ಲಿದ್ರು.. ಆದರೆ ಮೆಸ್ಸಿ ಇಷ್ಟೇಲ್ಲಾ ಮಾಡಿದ ತಮ್ಮ ಕ್ಲಬ್​ಗೆ, ಚೀರಋನಿಯಾಗಿರಬೇಕು. ಕ್ಲಬ್​ನ ಋಣ ತೀರಿಸಲು  ಸೂಕ್ತ ಸಮವಿದು ಎಂಬ ನಿರ್ಧಾರದೊಂದಿಗೆ ಕ್ಲಬ್​ಗೆ ಆಡಿದ್ರು....

ಮೆಸ್ಸಿ ಕುಳ್ಳ ಎಂಬ ಕಾರಣ ಅವರಿಗೆ, ತಂಡದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿರಲಿಲ್ಲ. ಅವರು ಫಾಸ್ಟ್​ ಆಟಗಾರನಾಗಿದ್ರು, ಕುಳ್ಳ ಹೆಡರ್​ ಎಲ್ಲ ಅವರಿಂದ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗುತ್ತಿತ್ತು. ಸಿಕ್ಕ ಅವಕಾಶಗಳಲ್ಲಿ ಮೆಸ್ಸಿ ತಮ್ಮ ಸಾಮರ್ಥ್ಯ ಸಾಭಿತು ಪಡಿಸುವಲ್ಲಿ ವಿಫಲವಾದ್ರು. ಆದರೆ ಮಹತ್ವದ ಪಂದ್ಯದಲ್ಲಿ ಲಿಯೊನಲ್​ಗೆ ಆಡುವ ಅವಕಾಶ ಸಿಕ್ತು. ದುರದೃಷ್ಟವಶಾತ್​ ಅಂದು ಮೆಸ್ಸಿ ತಮ್ಮನ್ನು ತಾವು ಬಚ್ಚಲುಮನೆಯಲ್ಲಿ ಲಾಕ್​ ಮಾಡಿಕೊಂಡಿದ್ರು. ಹಾಫ್​ ಟೈಮ್​ ಆಗುವದೊರಳಗೆ ಅವರ ತಂಡ 0-1ರಿಂದ ಹಿನ್ನಡೆ ಅನುಭವಿಸಿತು. ಕೊನೆಗೆ ಕಿಟಕಿ ಹೊಡೆದು ಬಂದ ಮೆಸ್ಸಿ ಮೈದಾನಕ್ಕಿಳಿದ್ರು, ಅವರ ತಂಡ 3-1 ಗೋಲ್​ನಿಂದ ಜಯ ದಾಖಲಿಸಿತು. ಆ ಪಂದ್ಯದಲ್ಲಿ ಆ ಮೂರು ಗೋಲ್​ ಮೆಸ್ಸಿ ಹೊಡೆದಿದ್ರು...

2004ರಲ್ಲಿ ಮೆಸ್ಸಿ ಮತ್ತೊಂದು ದಾಖಲೆ ಬರೆದ್ರು, ಲಾ ಲೀಗ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಅವರ ಪಾಲಾಯ್ತು. ಸ್ಪೇನ್​ ಪರ ಆಡುವಂತೆ ಮೆಸ್ಸಿಗೆ ಅವಕಾಶ ಜೊತೆಗೆ ಒತ್ತಡ ಕೂಡ ಹೆಚ್ಚಿತು. ಆದರೆ ಲಿಯೊನೆಲ್​ ತಮ್ಮ ರಾಷ್ಟ್ರಕ್ಕೆ ಆಡುವುದಾಗಿ ಸ್ಪಷ್ಟಪಡಿಸಿದ್ರು. ಅರ್ಜೆಂಟೀನಾ ಪರವೇ ಆಡಿದ್ರು. ಜೂನಿಯರ್​ ಫಿಫಾ ವಿಶ್ವಕಪ್​ನಲ್ಲಿ ಗೋಲ್ಡನ್​ ಬೂಟ್​ ಸಹ ಪಡೆದ್ರು. ಅಲ್ಲಿಂದ ಮೆಸ್ಸಿ ತಿರುಗಿ ನೋಡಿದ್ದೇ ಇಲ್ಲ. ಇವತ್ತು ಜಗತ್ತು ಕಂಡ ಅದ್ಭುತ ಆಟಗಾರನಾಗಿ ಮಿಂಚಿದ್ರು...

ಬರ್ಸಿಲೋನಾ ಫುಟ್ಬಾಲ್​ ಕ್ಲಬ್​ ಸಾವಿರಾರು ಆಟಗಾರರಿಗೆ ಆಸರೆಯಾಗಿರಬಹುದು. ಆದರೆ ಇಂದು ಮೆಸ್ಸಿ ಎಂದರೆ ಬಾರ್ಸಿಲೋನಾ ಕ್ಲಬ್​ ಎನ್ನುವಷ್ಟು ಎತ್ತರಕ್ಕೆ ಮೆಸ್ಸಿ ಬೆಳೆದಿದ್ದಾರೆ. ತಮ್ಮ  ವೀಕ್ನೆಸ್​ ಅನ್ನು ತಮ್ಮ ಶಕ್ತಿಯಾಗಿ ಬಳಸಿಕೊಂಡ ಅವರು,  ಶ್ರದ್ಧೆ, ಶ್ರಮದಿಂದ ಇಂದು ಫುಟ್ಬಾಲ್​ ಲೋಕದ ಅನಭಿಷಕ್ತ ದೊರೆಯಾಗಿ ಮೆರೆಯುತ್ತಿದ್ದಾರೆ. ಅಂದು ಖಾಯಿಲೆ ಚಿಕಿತ್ಸೆಗೂ ಹಣವಿಲ್ಲದೆ ಪರಿತಪಿಸುತ್ತಿದ್ದ ಬಾಲಕ, ಇಂದು ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್​ ಆಟಗಾರನ್ನಾಗಿರುವುದು ಮೆಸ್ಸಿ
ಯಶೋಗಾಥೆಯನ್ನು ಹೇಳುತ್ತದೆ...

ರವಿ.ಎಸ್​

Costly ಮ್ಯಾನೇಜರ್ಸ್

ಫಿಫಾ ವಿಶ್ವಕಪ್​ ಹಲವು ರೋಚಕ ಸಂಗತಿಗಳಿಗೆ ಕಾರಣವಾಗಿದೆ. ಫುಟ್ಬಾಲ್​ನ ಮಹಾನ್​ ಹಬ್ಬದಲ್ಲಿ ನಿಮ್ಮಗೆ ತಿಳಿದಿರದ ಅನೇಕ ಅಚ್ಚರಿಯ ಕಥೆಗಳಿವೆ. ಅತಿಹೆಚ್ಚು ಸಂಭಾವನೆ ಪಡೆಯುವ ಮ್ಯಾನೇಜರ್​ ಹೊಂದಿರುವ ಟಾಪ್​-3 ತಂಡಗಳು ವಿಶ್ವಕಪ್​ನಿಂದ ನಿರ್ಗಮಿಸಿವೆ. ಆ ತಂಡಗಳು ಯಾವು ಅಂತೀರಾ ಇಲ್ಲಿದೆ ನೋಡಿ ಆ ರೋಚಕ ವರದಿ....

ವಿಶ್ವಕಪ್​ನಲ್ಲಿ ಎಲ್ಲವೂ ಅದ್ಧೂರಿಯಾಗಿರುತ್ತೆ. ಹಾಗಾಗಿ ಇಲ್ಲಿ ಕೆಲಸ ಮಾಡುವ ಸಹ ಸಿಬ್ಬಂದಿಗಳಿಗೂ ಕೋಟಿ-ಕೋಟಿ ಹಣ ನೀಡುತ್ತಾರೆ. ಪ್ರತಿ ತಂಡದಲ್ಲೂ ಹೆಚ್ಚು ಆದ್ಯತೆ ನೀಡುವುದು ಮ್ಯಾನೇಜರ್​ಗಳಿಗೆ. ಭಾರತದಲ್ಲಿ ಒಬ್ಬ ಸ್ಟಾರ್​ ಕ್ರಿಕೆಟರ್​ಗೆ ನೀಡುವ ಸಂಭಾವನೆಗಿಂತ,  ನಾಲ್ಕೈದು ಪಟ್ಟು ಹೆಚ್ಚು ಹಣವನ್ನು  ಫುಟ್ಬಾಲ್​ ತಂಡದ ಮ್ಯಾನೇಜರ್​ಗಳು ಪಡೆಯುತ್ತಿದ್ದಾರೆ.....

ಅಯ್ಯೋ ಇದೇನಪ್ಪ ಭಾರತದ ಸ್ಟಾರ್​ ಕ್ರಿಕೆಟರ್​ಗಳಿಗಿಂತ ಫುಟ್ಬಾಲ್​ ತಂಡದ ಮ್ಯಾನೇಜರ್​​ಗಳಿಗೆ ಅಧಿಕ ಸಂಭಾವನೆ ಸಿಗುತ್ತೆ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸುವವರಿದ್ದಾರೆ. ಆದರೆ ಈ ಮಾತು ಸತ್ಯ. ಈ ವಿಶ್ವಕಪ್​ ಟಾಪ್​-3   ಕಾಸ್ಟ್ಲೀ ಮ್ಯಾನೇಜರ್​ಗಳಲ್ಲಿ ಅಗ್ರಸ್ಥಾನದಲ್ಲಿರುವುದು ರಷ್ಯಾದ ಮ್ಯಾನೇಜರ್​​. ಮೂಲತ ಇಟಲಿಯವರಾಗಿರುವ ಫ್ಯಾಬಿಯೋ ಕ್ಯಾಪೆಲ್ಲೊ, ರಷ್ಯಾ ರಾಷ್ಟ್ರೀಯ ಫುಟ್ಬಾಲ್​ ತಂಡದ ಕೋಚ್​. ಸದ್ಯ ಒಂದು ವರ್ಷಕ್ಕೆ ಇವರು 64 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ... ಫುಟ್ಬಾಲ್​ ಇತಿಹಾಸದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಮ್ಯಾನೇಜರ್​ ಎಂಬ ದಾಖಲೆ ಇವರ ಹೆಸರಲ್ಲಿದೆ...
 ಇನ್ನೂ ಅತಿಹೆಚ್ಚು ಸಂಭಾವನೆ ಪಡೆಯುವ ಎರಡನೇ ಮ್ಯಾನೇಜರ್​ ಇಂಗ್ಲೆಂಡ್​ ತಂಡದವರು. ರಾಯ್​​ ಹಾಡ್ಜ್​ಸನ್​ ಮೂಲತಃ ಇಂಗ್ಲೆಂಡ್​ನವರು. ಇಂಗ್ಲೆಂಡ್​ನ ಮ್ಯಾನೇಜರ್​ ಆಗಿರುವ ಇವರು ಒಂದು ವರ್ಷಕ್ಕೆ  36 ಕೋಟಿ ರೂಪಾಯಿ ಸಂಭಾವನೆ  ಪಡೆಯುತ್ತಾರೆ...

ಇಟಲಿಯ ಮಾಜಿ ಮಿಡ್​ ಫೀಲ್ಡರ್​ ಸೆಸಾರೆ ಪ್ರಾಂಡೇಲಿ ಸದ್ಯ ಇಟಲಿ ತಂಡದ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮ್ಯಾನೇಜರ್​ ಆಗಿರುವುದಕ್ಕೆ ಪ್ರತಿ ವರ್ಷಕ್ಕೆ ಇಟಲಿ ತಂಡ ಇವರಿಗೆ 26 ಕೋಟಿ ರೂಪಾಯಿ ಸಂಭಾವಣೆ ನೀಡುತ್ತದೆ.. ಫಿಫಾ ವಿಶ್ವಕಪ್​ನಲ್ಲಿ ಹೆಚ್ಚು ಹಣ ಪಡೆಯುವ ಮೂರನೇದುಭಾರಿ  ಮ್ಯಾನೇಜರ್​ ಇವರಾಗಿದ್ದಾರೆ...

 ಐಪಿಎಲ್​ನಲ್ಲಿ ಸ್ಟಾರ್​ ಕ್ರಿಕೆಟರ್​ ಪಡೆಯುವ ಸಂಭಾವನೆಗಿಂತ ಹೆಚ್ಚು ಮೂರು ತಂಡದ ಮ್ಯಾನೇಜರ್​​ಗಳು ಪಡೆಯುತ್ತಾರೆ. ಫಿಫಾ ವಿಶ್ವಕಪ್​ನ ಅತ್ಯಂತ ದುಭಾರಿ ಮ್ಯಾನೇಜರ್​ಗಳು ಇವರು. ಇಷ್ಟಾದ್ರು ಈ ಮೂರು ತಂಡಗಳು ಪ್ರಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆಯುವಲ್ಲಿ ವಿಫಲವಾದ್ವು. ಅನ್ನೋದು ಅಷ್ಟೇ ಗಮನಾರ್ಹ..
ಇನ್ನೂ ಈ ವಿಶ್ವಕಪ್​ನಲ್ಲಿ ಅತಿ ಕಮ್ಮಿ ಸಂಭಾವನೆ ಪಡೆಯುವ ಮ್ಯಾನೇಜರ್​ ಮೆಕ್ಸಿಕೊ ತಂಡದವರು. ಫಿಫಾ ವಿಶ್ವಕಪ್​ನಲ್ಲಿ ಅತಿಹೆಚ್ಚು ಆಕ್ಟಿವ್​ ಆಗಿರುವ ಮಿಗ್ವುಲ್​ ಹೆರೆರಾ, ಮೆಕ್ಸಿಕೊ ತಂಡದ ಮ್ಯಾನೇಜರ್​ ಆಗಿರುವುದಕ್ಕೆ ಅವರು ಪಡೆಯುವ ಸಂಭಾವನೆ, ವರ್ಷಕ್ಕೆ 1 ಕೋಟಿ 20 ಲಕ್ಷ. ಸದ್ಯ ವಿಶ್ವಕಪ್​ನಲ್ಲಿ ಭಾಗವಹಿಸಿರುವ 32 ತಂಡಗಳಲ್ಲಿ, ಅತಿಕಡಿಮೆ ಸಂಭಾವನೆ ಪಡೆಯುವ ಮ್ಯಾನೇಜರ್​ ಇವರಾಗಿದ್ದಾರೆ...
ತಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಆಯಾ ರಾಷ್ಟ್ರಗಳು ಕೋಟಿ-ಕೋಟಿ ಕೊಟ್ಟು ಮ್ಯಾನೇಜರ್​ಗಳನ್ನು ನೇಮಿಸಿದ್ರು. ಆ ತಂಡಗಳು 16ರ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿವೆ. ಕಡಿಮೆ ಸಂಭಾವನೆ ಪಡೆಯುವ ಮ್ಯಾನೇಜರ್​ಗಳನ್ನು ಹೊಂದಿರುವ  ತಂಡಗಳು ಪ್ರಿ ಕ್ವಾರ್ಟರ್​ಗೆ ಪ್ರವೇಶ ಪಡೆಯುವ ಮೂಲಕ ಈ ವಿಶ್ವಕಪ್​ನಲ್ಲಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿವೆ...

ರವಿ.ಎಸ್​
ಈ ಐಪಿಎಲ್​ನಲ್ಲಿ ಹಲವು ಅದ್ಭುತ ಪ್ರದರ್ಶನಗಳು ಮೂಡಿ ಬಂದಿವೆ. ಆದರೆ ಆದರಲ್ಲಿ ಕೆಲವೆ ಕೆಲವು ಕೊನೆತನಕ ನೆನಪಿಡಲು ಸಾಧ್ಯ. ಅಂತಹದ್ರಲ್ಲಿ ಹೆಚ್ಚು ಗಮನೆಸೆಳೆಯುವವು ಯುವರಾಜ್​ ಸಿಂಗ್​, ಎಬಿ ಡಿವಿಲಿಯರ್ಸ್​ ಮತ್ತು ಕೋರೆ ಅಂಡರಸ್​ನ್​ ಎಂದಿಗೂ ಮರೆಯಲು ಸಾಧ್ಯವಿಲ್ಲ...

 ಹೌದು ಈ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಆರ್​ಸಿಬಿ ತಂಡ ವಿಫಲವಾಗಿದೆ. ಆದರೆ ಆರ್​ಸಿಬಿ ತಂಡದ ಇಬ್ಬರು ಬ್ಯಾಟ್ಸ್​ಮನ್​ಗಳು ಅಬ್ಬರದ ಆಟವಾಡುವ ಮೂಲಕ ತಂಡದ ಗೆಲುವಿಗೆ ಕಾರಣವಾದ್ರು. ಸೋಲಿನ ಸುಳಿಯಲ್ಲಿದ್ದ ಆರ್​ಸಿಬಿಗೆ ಗೆಲುವಿನ ರುಚಿ ತೋರಿಸುವಲ್ಲಿ ಈ ಬೆಸ್ಟ್​ ಇನ್ನಿಂಗ್ಸ್​ ಸಹಾಯವಾಯ್ತು...

 ಸನ್​ರೈಸರ್ಸ್​ ವಿರುದ್ಧ ಎಬಿ ಡಿವಿಲಿಯರ್ಸ್ ಶೈನ್
ಹೈದ್ರಾಬಾದ್​ ತಂಡದ ವಿರುದ್ಧ ಡಿವಿಲಿಯರ್ಸ್​ ಆಟ ಈ ಐಪಿಎಲ್​ನ ಅತ್ಯಂತ ಬೆಸ್ಟ್​ ಇ್ನನಿಂಗ್ಸ್​ಗಳಲ್ಲೊಂದು. ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಸನ್​ರೈಸರ್ಸ್​, ಆರ್​ಸಿಬಿಗೆ 155 ರನ್​ ಟಾರ್ಗೆಟ್​ ನೀಡ್ತು. ಆರ್​ಸಿಬಿ ಆರಂಭದಲ್ಲೇ ಮುಗ್ಗರಿಸಿತು. 59 ರನ್​ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಆರ್​ಸಿಬಿ ಪಾಲಿಗೆ ಆಶಾಕಿರಣವಾಗಿ ಬಂದದ್ದು ಎಬಿಡಿ...
ಸಂಪೂರ್ಣ ತಂಡದಲ್ಲಿದ್ದ ಪ್ರಮುಖ ಆಟಗಾರರೆಲ್ಲ ಪೇವಿಲಿಯನ್​ ಸೇರಿದ್ರು. ಆದರೆ ಎಬಿಡಿ ಮಾತ್ರ ಒಂದೇಡೆ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಹೈದ್ರಾಬಾದ್​ಗೆ ಶಾಕ್​ ನೀಡಿದ್ರು. ಡೇಲ್​ ಸ್ಟೈನ್​ ಒಂದೇ ಓವರ್​ನಲ್ಲಿ 24 ರನ್​ಗಳಿಸುವ ಮೂಲಕ ಸನ್​​ರೈಸರ್ಸ್ ಗೆಲುವಿನ ಕನಸಿಗೆ ಬ್ರೇಕ್​ ಹಾಕಿದ್ರು.. ಸೋಲಿನ ಸುಳಿಯಲ್ಲಿದ್ದ ಆರ್​ಸಿಬಿ ಭರ್ಜರಿ ಜಯ ತಂದುಕೊಟ್ರು...

 ಅಮೋಘ ಆಟವಾಡಿದ ಎಬಿಡಿ ಅಜೇಯ 89 ರನ್​ಗಳಿಸುವ ಮೂಲಕ ಮಿಂಚಿದ್ರು. 217 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜೊತೆ-ಜೊತೆಗೆ ಒಂದು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ನೀಡಿದ್ರು....

ದೆಹಲಿ ವಿರುದ್ಧ ಯುವರಾಜ್​ ಘರ್ಜನೆ

 ಬೆಂಗಳೂರಿನಲ್ಲಿ ನಡೆದ ದೆಹಲಿ ಡೇರ್​ಡೇವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದು ಬ್ಯಾಟಿಂಗ್​ ಆರಿಸಿಕೊಳ್ತು. ಆದರೆಸ ಅಂದುಕೊಂಡಂತೆ ಆರ್​ಸಿಬಿ ಆಟಗಾರರು ಸಿಡಿಯಲಿಲ್ಲ. 107ರನ್​ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿ ಸಿಲುಕಿತು. ನಿಧಾನ ರನ್​ಗತಿಯಲ್ಲಿ ಆಟಸಾಗಿತ್ತು. ಮಂದಗತಿಯಿಂದ ಸಾಗುತ್ತಿದ ಆರ್​ಸಿಬಿಗೆ ಭರ್ಜರಿ ಆಟದ ಝಲಕ್​ ತೋರಿಸಿದ್ದೆ ಯುವರಾಜ್​ ಸಿಂಗ್​.
ಬೃಹತ್​ ಟಾರ್ಗೆಟ್​ ನೀಡುವ ಪ್ರಯತ್ನದಲ್ಲಿದ ಆರ್​ಸಿಬಿಗೆ ಆಸರೆಯಾದವರು ಯುವರಾಜ್​ ಸಿಂಗ್​. ಸಿಡಿಲಬ್ಬರದ ಆಟವಾಡಿದ ಅವರು ಮೈದಾನದ ತುಂಬೆಲ್ಲಾ ಅಮೋಘ ಹೊಡೆತಗಳಿಂದ ಮಿಂಚಿದ್ರು. ಕೇವಲ 29 ಬೌಲ್​ನಲ್ಲಿ ಅಜೇಯ 68 ರನ್​ ದಾಖಲಿಸಿದ ಯುವರಾಜ್​ ಸಿಂಗ್​ ಕೊನೆಯ ಓವರ್​ಗಳಲ್ಲಿ ಪ್ರತಿ ಓವರ್​ಗೆ 16ರ ರನರೇಟ್​ನಲ್ಲಿ ರನ್​ ದಾಖಲಿಸಿದ್ರು. ಆರ್​ಸಿಬಿ 4 ವಿಕೆಟ್​ ನಷ್ಟಕ್ಕೆ 186 ರನ್​ಗಳಿಸುವಲ್ಲಿ  ಸಹಾಯವಾದ್ರು. ಆರ್​ಸಿಬಿ 16 ರನ್​ಗಳಿಂದ  ಆ ಪಂದ್ಯವನ್ನು ಗೆಲ್ಲಲ್ಲು ಯುವಿ ಬ್ಯಾಟಿಂಗ್​ ಕಾರಣವಾಯ್ತು...

 ರಾಜಸ್ಥಾನ್​ ವಿರುದ್ಧ ರಾಯಲ್​ ಆಟವಾಡಿದ ಅಂಡರ್​ಸನ್​

ಈ ಐಪಿಎಲ್​ನ ಅತ್ಯಂತ ಕುತೂಹಲ ಕೆರಳಿಸಿದ ಆಟಗಾರ ನ್ಯೂಜಿಲೆಂಡ್​ನ ಆಲ್​ ರೌಂಡರ್​ ಕೋರೆ ಅಂಡರಸನ್​. ನಾಲ್ಕುವರೆ ಕೋಟಿಗೆ ಮುಂಬೈ ತಂಡದ ಪಾಲಾದ ಅಂಡರ್​ಸನ್​ ತಮ್ಮ ನಿಜವಾದ ಆಟವನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದ್ರು. ಸಂಪೂರ್ಣ ಲೀಗ್​ ಪಂದ್ಯಗಳಲ್ಲಿ ಅಂಡರಸನ್​ ಆಟ ಹೇಳಿಕೊಳ್ಳುವಂತಿರಲಿಲ್ಲ. ಅವರ ಸಾಮರ್ಥ್ಯ ತಕ್ಕಂತೆ ಅಬ್ಬರಿಸುವಲ್ಲಿ ವಿಫಲವಾಗಿದ್ದ ಅವರು, ರಾಜಸ್ಥಾನ್ ವಿರುದ್ದ ತಮ್ಮ ನೈಜ ಆಟ ಪ್ರದರ್ಶಿಸುವ ಮೂಲಕ, ತಾವೊಬ್ಬ ಮ್ಯಾಚ್​ವಿನ್ನರ್​ ಎಂಬುವುದನ್ನು ತೋರಿಸಿಕೊಟ್ರು...
ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್​ ರಾಯಲ್ಸ್ 190 ರನ್​ಗಳ ಟಾರ್ಗೆಟ್​ ನೀಡಿತ್ತು. ವಿಶೇಷ ಎಂದರೆ ಈ ಎಲಿಮಿನೇಟರ್​ ರೌಂಡ್​ನಿಂದ ಕ್ವಾಲಿಫೈಯರ್​ಗ ಅರ್ಹತೆ ಪಡೆಯಬೇಕಾದ್ರೆ,  ಮುಂಬೈ ಕೇವಲ 14.3 ಓವರ್​ನಲ್ಲಿ 190 ರನ್​ಗಳಿಸಬೇಕಿತ್ತು. ಅಸಾಧ್ಯವಾದ ಗುರಿಯ್ನು ಬೆನ್ನತ್ತಿದ್ದ ಮುಂಬೈ 61 ರನ್​ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಆದರೆ ಒಂದೇಡೆ ಅಬ್ಬರದ ಆಟವಾಡುತ್ತಿದ್ದ ಅಂಡರ್​ಸನ್​ ಮುಂಬೈ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ರು...
 ರಾಜಸ್ಥಾನ್​ ರಾಯಲ್ಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಅಂಡರ್​ಸನ್ ತಮ್ಮ ಅತ್ಯದ್ಭುತ ಆಟದಿಂದ ಎಲ್ಲರ ಗಮನಸೆಳೆದ್ರು. ರಾಜಸ್ಥಾನ್​ ರಾಯಲ್ಸ್ ಬೌಲರ್​ಗಳ ಪಾಲಿಗೆ ಯಮನಂತೆ ಕಾಡಿದ್ರು. ಮೈದಾನದ ತುಂಬೆಲ್ಲಾ ಬೌಂಡರಿಗಳ ಸುರಿಮಳೆಗೈದ್ರು. ಕೇವಲ 44 ಬೌಲ್​ಗಳಲ್ಲಿ ಆಕರ್ಷಕ ಅಜೇಯ 95 ರನ್​ಗಳಿಸುವ ಮೂಲಕ ಮುಂಬೈಗೆ ಜಯ ತಂದು ಕೊಟ್ರು.. ರಾಜಸ್ಥಾನ್​​ ಕ್ವಾಲಿಫೈಯರ್​ ಆಸೆಗೆ ತಣ್ಣಿರು ಹಾಕಿದ್ರು.. ನಿರ್ಣಾಯಕ ಪಂದ್ಯವನ್ನು ಗೆಲ್ಲಿಸಿಕೊಡುವ ಮೂಲಕ, ಮುಂಬೈ ತಂಡದ ಕ್ವಾಲಿಫೈಯರ್​ಗೆ ಏರುವ ಹಗಲುಗನಸನ್ನು ನನಸಾಗಿಸಿದ್ರು...

ಕ್ರಿಕೆಟ್​ನಲ್ಲಿ ಯಾವುದು ಅಸಾಧ್ಯವಲ್ಲ ಎಂಬುದನ್ನು ಕೋರೆ ಅಂಡರಸನ್​ ತಮ್ಮ ಬ್ಯಾಟಿಂಗ್​ನಿಂದ ತೋರಿಸಿಕೊಟ್ರು. ಮನಮೋಹಕ ಆಟ, ಗೆಲ್ಲುವ ವಿಶ್ವಾಸದಿಂದಲೇ ಮೈದಾನಕ್ಕೀಳಿದ ಅವರು, ಗೆಲುವು ತಂದುಕೊಡುವಲ್ಲಿ ಸಫಲವಾದ್ರು. ಮುಂಬೈ ಅವರನ್ನು ಖರೀದಿಸಿದ್ದು ಉತ್ತಮ ನಿರ್ಧಾರ ಎಂಬುದನ್ನು ಅವರ ಆಟ ಸಾಭಿತುಗೊಳಿಸಿತು..

ಕೆಲ ಅತ್ಯದ್ಭುತ ಇನ್ನಿಂಗ್ಸ್​ಗಳಿಂದ  ತಮ್ಮ ತಂಡಗಳಿಗೆ ಅಮೋಘ ಜಯ ತಂದು ಕೊಟ್ಟ ಪ್ರಮುಖ ಬೆಸ್ಟ್​ ಇನ್ನಿಂಗ್ಸ್​ಗಳಿವು. ಬೆಸ್ಟ್ ಇನ್ನಿಂಗ್ಸ್​ ಗುಡ್​ ಮ್ಯಾಚ್​​ ಫಿನಿಶರ್​ ಎಂದು ಖ್ಯಾತಿಗಳಿಸಿರುವ ಈ ಆಟಗಾರರು ತಮ್ಮ ಮನಮೋಹಕ ಆಟದಿಂದ ಅಸಾಧ್ಯವಾದದನ್ನು ಸಾಧ್ಯವಾಗಿಸಿ ತೋರಿಸಿದ ಕೆಲ ಉದಾಹರಣೆಗಳು ಬೆಸ್ಟ್ ಇನ್ನಿಂಗ್ಸ್​ಗಳು ಇವಾಗಿವೆ...

ರವಿ.ಎಸ್​

ವಿಶ್ವಕಪ್​ನಲ್ಲಿ ಕ್ಲಬ್​ ಕಮಾಲ್​

ಫಿಫಾ ವಿಶ್ವಕಪ್​ನಲ್ಲಿ ಯಾವ್​ ದೇಶ ಗೆಲ್ಲಲ್ಲಿ ಬಿಡಲಿ ತಮ್ಮ ಕ್ಲಬ್​​ ಆಟಗಾರರು ಮಿಂಚಬೇಕೆಂದು ಎಲ್ಲ ಕ್ಲಬ್​ಗಳು ಬಯಸುತ್ತವೆ. ತಮ್ಮ ಕ್ಲಬ್​ ಆಟಗಾರರ ಗೋಲ್,​ ಸ್ಕಿಲ್​  ಪ್ರದರ್ಶನದ ಮೇಲೆ ಆಯಾ ಕ್ಲಬ್​ಗಳು ಮತ್ತಷ್ಟೂ ಜೋಶ್​ನಿಂದ ಅವರನ್ನು ಹುರಿದುಂಬಿಸುವದರೊಂದಿಗೆ. ಆಯಾ ಆಟಗಾರರಿಗೆ ಒಳ್ಳೆ ಸಂಭಾವನೆ ನೀಡುವ ಮೂಲಕ ಅವರನ್ನು ಸನ್ಮಾನಿಸುತ್ತವೆ. ಫಿಫಾ ವಿಶ್ವಕಪ್​ನ ಕೆಲ ಕ್ಲಬ್​ ರೋಚಕ ಲೆಕ್ಕಚಾರಗಳು ಇಲ್ಲಿವೆ ನೋಡಿ...

ಫುಟ್ಬಾಲ್​ ಆಟಗಾರರಿಗೆ ಹೆಚ್ಚು ಆದಾಯ ಬರುವುದು ಕ್ಲಬ್​ಗಳಿಂದ. ವರ್ಷದಲ್ಲಿ ದೇಶಕ್ಕಿಂತ ಹೆಚ್ಚು ಆಟಗಾರರು ಕ್ಲಬ್​ಗೆ ಆಡ್ತಾರೆ. ಎಷ್ಟೋ ಕ್ಲಬ್​ಗಳು ಅನೇ ಆಟಗಾರರನ್ನು ಸಣ್ಣ ವಯಸ್ಸಿನಿಂದಲೇ ತಮ್ಮ ಕ್ಲಬ್​ ಸದಸ್ಯತ್ವ ಕೊಟ್ಟು ಬೆಳಸುತ್ತವೆ. ಈಗ ಇದೆ ಕ್ಲಬ್​ಗಳು ತಮ್ಮ ಆಟಗಾರರು ವಿಶ್ವಕಪ್​ ಪ್ರದರ್ಶನದ ಲೆಕ್ಕಚಾರದಲ್ಲಿ ತೊಡಗಿದ್ದು, ಯಾವ ಕ್ಲಬ್​ ಬೆಸ್ಟ್ ಎಂಬ ಪ್ರಶ್ನೆಗೆ ಈ ಫಿಫಾ ವಿಶ್ವಕಪ್​ ಸಹ ಉತ್ತರವಾಗಲಿದೆ...

ಈ ಸಲ ವಿಶ್ವಕಪ್​ನಲ್ಲಿ ಹೆಚ್ಚು ಆಟಗಾರರು ಭಾಗವಹಿಸಿರುವುದು ಬೈರನ್​ ಮುನಿಚ್​ ಕ್ಲಬ್​ನ ಆಟಗಾರರು ಒಟ್ಟು 10 ಜನ ಆಟಗಾರರು ಈ ಕ್ಲಬ್​​ನವರು ಈ ಸಲ ವಿಶ್ವಕಪ್​ನಲ್ಲಿ ಭಾಗವಹಿಸಿದ್ದು, ಹೆಚ್ಚು ಕ್ಲಬ್​ ಆಟಗಾರರು ಈ ಸಲ ಫುಟ್ಬಾಲ್​ ಮಹಾ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ...

ಈ ವಿಶ್ವಕಪ್​ ಅತಿಹೆಚ್ಚು ಭಾವಹಿಸಿದ ಕ್ಲಬ್​ ಆಟಗಾರರು ಪಟ್ಟಿ ಹೀಗಿದೆ. ಬೈರನ್​ ಮುನಿಚ್​ ಕ್ಲಬ್​ನ 10 ಜನ ಆಟಗಾರರು ಭಾಗವಹಿಸಿದ್ರೆ. ಅರೆಸ್ನೆಲ್​​ ಕ್ಲಬ್​ ಏಳು ಜನ ಆಟಗಾರರು, ಚೆಲ್ಸಿಯಾ  ಮತ್ತು ಪ್ಯಾರಿಸ್​ ಸೇಂಟ್​​ ಜರ್ಮನ್​​ ಕ್ಲಬ್​ನ ತಲಾ ಆರು ಸದಸ್ಯರು ಮತ್ತು ರಿಯಲ್​ ಮ್ಯಾಡ್ರಿಡ್​ನ ಐದು ಜನ ಆಟಗಾರರು ಭಾಗವಹಿಸಿದ್ದಾರೆ...

ಇನ್ನು ಅತಿಹೆಚ್ಚು ಗೋಲ್​ ಹೊಡೆದಿರುವ ವಿಷದಲ್ಲೂ ಬೈರನ್​ ಮುನಿಚ್​ ತಂಡ ಅಗ್ರಸ್ಥಾನದಲ್ಲಿದೆ. ಒಟ್ಟು 14 ಗೋಲ್​ ಈ ಕ್ಲಬ್​ನ ಆಟಗಾರರಿಂದ ಬಂದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದ್ರೆ, ಮೆಸ್ಸಿ-ನೇಮರ್​ ಪ್ರತಿನಿಧಿಸುವ ಬಾರ್ಸಿಲೋನ ಕ್ಲಬ್​ನಿಂದ 10 ಗೋಲ್​ ದಾಖಲಾಗಿದ್ದು ಈ ಕ್ಲಬ್​ ಗೋಲ್​ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ....

 ಫಿಫಾ ವಿಶ್ವಕಪ್​ನಲ್ಲಿ ಕ್ಲಬ್​ಗಳಿಂದ ದಾಖಲಾದ ಗೋಲ್​ಗಳ ಸಂಖ್ಯೆ ಹೀಗಿದೆ. ಬೈರನ್​ ಮುನಿಚ್​ ಒಟ್ಟು14 ಗೋಲು, ಬಾರ್ಸಿಲೋನ ತಂಡ 10 ಗೋಲ್​, ಮ್ಯಾಂಚೆಸ್ಟರ್​ ಯುನೈಟೆಡ್​ 8, ರಿಯಲ್​ ಮ್ಯಾಡ್ರಿಡ್​ 6 ಮತ್ತು ಎ.ಎಸ್​ ಮೊನ್ಯಾಕೊ ಕ್ಲಬ್​ ಆಟಗಾರರಿಂದ ಒಟ್ಟು ಐದು ಗೋಲ್​ ದಾಖಲಾಗಿವೆ...

ಇಷ್ಟೇ ಅಲ್ಲ ಇನ್ನೂ ಗೋಲ್ ಮಾಡಲು ಹೆಚ್ಚು ಪಾಸ್​ ಕೊಟ್ಟ, ಸಹಕರಿಸಿದ ಆಟಗಾರರಿಗೂ ಹೆಚ್ಚು ಮಾನ್ಯತೆ ನೀಡಲಾಗುತ್ತೆ. ಫುಟ್ಬಾಲ್​ನಲ್ಲಿ ಗೋಲ್​ ಹೊಡೆಯುವವರಿಗಿಂತ, ಗೋಲ್​ ಮಾಡಲು ನೆರವಾದವರಿಗೆ ಹೆಚ್ಚು ಮಹತ್ವ ಇಂತಹ ಪಾಸಿಂಗ್​ನಲ್ಲಿ ಹೆಚ್ಚು ಸಹಕರಿಸಿದ ಆಟಗಾರರು ಕೂಡ ಬೈರನ್​ ಮುನಿಚ್​ ನವರಾಗಿದ್ದಾರೆ...


ಗೋಲ್​ಗೆ ಸಹಕರಿಸಿದ ಆಟಗಾರರು. ಈ ಸಲ ಹೆಚ್ಚು ಗೋಲ್​ ಹೊಡೆಯಲು ನೆರವಾದ ಆಟಗಾರರು ಸಹ ಬೈರನ್​ ಮುನಿಚ್​ ಕ್ಲಬ್​ಗೆ ಸೇರಿದವರು. ಒಟ್ಟು ಬೈರೆನ್​ ಮುನಿಚ್​ ಕ್ಲಬ್​ನ ಆಟಗಾರರು 14 ಗೋಲ್​ ಹೊಡೆಯಲು ನೆರವಾಗಿದ್ದಾರೆ. ವೂಲ್ಫ್​ಬರ್ಗ್​ ಕ್ಲಬ್​ನ ಆಟಗಾರರು 10 ಗೋಲ್​ಗೆ ನೇರವಾದ್ರೆ, ವೇಲೆನ್ಸಿಯಾ ಕ್ಲಬ್​ ಸದಸ್ಯರು 8 ಗೋಲ್​ಗೆ ಪಾಸ್​ ನೀಡಿದ್ದಾರೆ. ಬಾರ್ಸಿಲೋನಾ 6 ಮತ್ತು ಚೆಲ್ಸಿಯಾ ಕ್ಲಬ್​​ನವನರು 5 ಗೋಲ್​ಗೆ ನೇರವಾಗಿದ್ದಾರೆ...

ಅತಿಹೆಚ್ಚು ಸಮಯ ಆಟವಾಡುವಲ್ಲು ಬೈರನ್​ ಕ್ಲಬ್​ ಆಟಗಾರರು ಸಫಲವಾಗಿದ್ದಾರೆ. ಈ ಫುಟ್ಬಾಲ್​ ವಿಶ್ವಕಪ್​​ನಲ್ಲಿ ಹೆಚ್ಚು ಸಮಯ ಯಾವ ಕ್ಲಬ್​ ಆಟಗಾರರು ಆಡಿದ್ರು ಎಂಬ ಅಂಕಿಅಂಶ ಕೂಡ ಇಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತೆ. ಆದರೆ ಈ ಸಲ ವಿಶ್ವಕಪ್​ನಲ್ಲಿ ಇಂತಹವೊಂದು ಕೀರ್ತಿಗೆ ಭಾಜನವಾಗಿದ್ದು ಕೂಡ ಬೈರನ್​ ಕ್ಲಬ್​ನ ಆಟಗಾರರು...

 ಹೆಚ್ಚು ಕಾಲ ಆಡಿದ ಕ್ಲಬ್​ ಇಂತಿವೆ. ಬೈರನ್​ ಮುನಿಚ್​ ಕ್ಲಬ್​ನ ಆಟಗಾರರು ಒಟ್ಟು 3742 ನಿಮಿಷ ಚೆಂಡನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಜುವೆಂಟುಸ್​ ಕ್ಲಬ್​ನ ಸದದಸ್ಯರು 3207 ನಿಮಿಷ ಚೆಂಡನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ರು. ಬಾರ್ಸಿಲೋನ ಕ್ಲಬ್​ ಸದಸ್ಯರು ಒಟ್ಟು 3059 ನಿಮಿಷಗಳ ಕಾಲ ಚೆಂಡನ್ನು ಆಡುವ ಮೂಲಕ ಹೆಚ್ಚು ಕಾಲ ಚೆಂಡನ್ನು ತಮ್ಮ ಬಳಿಯಿಟ್ಟುಕೊಂಡ ಕೀರ್ತಿಗೆ ಪಾತ್ರರಾಗಿದ್ದಾರೆ...


 ಕೇವಲ ಉತ್ತಮ ಪ್ರದರ್ಶನ ಮಾತ್ರ ಇಲ್ಲಿ ಕೌಂಟ್​ ಆಗಲ್ಲ. ಯಾವ ಕ್ಲಬ್​​ನ ಆಟಗಾರರು ಹೆಚ್ಚು ಕಾರ್ಡ್​ ಪಾತ್ರರಾದ್ರು ಎಂಬುದು ಇಲ್ಲಿ ಲೆಕ್ಕಕ್ಕೆ ಬರುತ್ತೆ. ಈ ಮೂಲಕ ಆಯಾ ಫ್ರಾಂಚೈಸಿಗಳ ಮಾನ ಕೂಡ ಹೋಗುತ್ತೆ ಹಾಗಾಗಿ ಈ ಅಂಶವೂ ಕೂಡ ವಿಶ್ವಕಪ್​ನಲ್ಲಿ ಗಮನಸೆಳೆಯುತ್ತೆ, ರಿಯಲ್​ ಮ್ಯಾಡ್ರಿಡ್​ನ ಡಿಫೆಂಡರ್​ಗಳು ಸ್ವಲ್ಪ ಉದ್ರೇಕರಾಗಿರುವುದರಿಂದ, ಈ ಸಲ ವಿಶ್ವಕಪ್​ನಲ್ಲಿ ರಿಯಲ್​ ಮ್ಯಾಡ್ರಿಡ್​ನ ಆಟಗಾರರು ಹೆಚ್ಚು ಕಾರ್ಡ್​ಗೆ ಗುರಿಯಾಗುವ ಮೂಲಕ ಕುಖ್ಯಾತಿಗೆ ಕಾರಣರಾದ್ರು...

 ಹೆಚ್ಚು ಕಾರ್ಡ್​ಗಳಿಗೆ ಪಾತ್ರವಾದ ಕ್ಲಬ್​ ಆಟಗಾರರ ಪಟ್ಟಿಯಿಂತಿದೆ. ರಿಯಲ್​ ಮ್ಯಾಡ್ರಿಡ್​ ಕ್ಲಬ್​ 14 ಕಾರ್ಡ್​, ಮ್ಯಾಂಚೆಸ್ಟರ್​ ಯುನೈಟೆಡ್​​ ಆಟಗಾರರಿಗೆ 10 ಕಾರ್ಡ್ ಮತ್ತು ಎಸಿ ಮಿಲಾನ್​ ಕ್ಲಬ್​ನವರಿಗೆ ಒಟ್ಟು ಎಂಟು ಕಾರ್ಡ್​ ತೋರಿಸಲಾಗಿದೆ...

 ಇವು ಈ ವಿಶ್ವಕಪ್​ನ ಕೇಲ ಕ್ಲಬ್​ ಲೆಕ್ಕಚಾರಗಳು. ಅನೇಕ ಆಟಗಾರರ ಪ್ರದರ್ಶನ ಆಯಾ ಕ್ಲಬ್​ನ ಹಣೆಬರಹ ಮತ್ತು ಆಟಗಾರನ ಭವಿಷ್ಯ ನಿರ್ಧಸಿರುತ್ತದೆ ಹಾಗಾಗಿ ಯಾವ್​ ತಂಡ ವಿಶ್ವಕಪ್​ ಗೆಲ್ಲಲ್ಲಿ ಬಿಡಲಿ  ಆಯಾ ಕ್ಲಬ್​ಗಳ ಮಾತ್ರ ಇದರತ್ತ ಗಮನಹರಿಸುವುದಿಲ್ಲ. ತ್ಮಮ ಕ್ಲಬ್​ನವರು ಮಿಂಚಲಿ ಎಂದಷ್ಟೇ ಅವರು ಬಯಸುತ್ತಾರೆ....
ರವಿ,ಎಸ್​

ಫುಟ್ಬಾಲ್​ನ ಅಧ್ಬುತ ಆಟಗಾರರು

ಈ  ಸಲದ ಫುಟ್ಬಾಲ್​ ವಿಶ್ವಕಪ್​ನಲ್ಲಿ ಅತಿಹೆಚ್ಚು ಕಾಲ ಆಡಿದವರ ಲೆಕ್ಕಚಾರ ಶುರುವಾಗಿದೆ. ಇಲ್ಲಿವರೆಗೂ ಇಂತಹವೊಂದು ದಾಖಲೆಗೆ ಪಾತ್ರರಾಗಿರುವುದು ಹಾಲೆಂಡ್​ನ ಫಾರ್ವಡ್​ ಆಟಗಾರ ಅರ್ಜೆನ್​ ರಾಬೆನ್​. ಯಾವ ಆಟಗಾರರು ಎಷ್ಟು ಸಮಯ ಚೆಂಡನ್ನು ನಿಯಂತ್ರಿಸಿದ್ದಾರೆ, ಆ ಟಾಪ್​-5 ಆಟಗಾರರ ವಿವರ ಇಲ್ಲಿದೆ ನೊಡಿ...

ಫಿಫಾ ವಿಶ್ವಕಪ್​ನಲ್ಲಿ ಹೆಚ್ಚು ಕಾಲ ಚೆಂಡಿನೊಂದಿಗೆ ಆಡಿದ ಆಟಗಾರರು ಯಾರು ಎಂಬ ಲೆಕ್ಕಚಾರ ಈಗ ಶುರುವಾಗಿದೆ. ವಿಶ್ವಕಪ್​ ಫೈನಲ್​ ಹಂತಕ್ಕೆ ಬಂದು ನಿಂತಿದೆ. ಆದರೆ ಈ ಪಟ್ಟಿಯಲ್ಲಿ ಡಚ್ಚ ಆಟಗಾರರು ಮಾತ್ರ ಅಗ್ರಸ್ಥಾನದಲ್ಲಿ ಮಿಂಚುತ್ತಿದ್ದಾರೆ..
 ನೆದರ್​ಲ್ಯಾಂಡ್​ ತಂಡದ ಫಾರ್ವಡ್​ ಅಟಗಾರರ ಅರ್ಜೆನ್​ ರಾಬೆನ್​. ಈ ವಿಶ್ವಕಪ್​ನಲ್ಲಿ ಅತಿಹೆಚ್ಚು ಸಮಯ ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡ ಫುಟ್ಬಾಲ್​ ಪ್ಲೇಯರ್​. ಒಟ್ಟು 600 ನಿಮಿಷಗಳ ಕಾಲ ಇವರು ಚೆಂಡನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ರು. 10 ಗಂಟೆಗಳ ಕಾಲ ನಿಯಂತ್ರಣ ಹೊಂದುವ ಮೂಲಕ ಈ ಟೂರ್ನಿಯಲ್ಲಿ ಹೆಚ್ಚು ಸಮಯ ಚೆಂಡನ್ನು ನಿಯಂತ್ರಿಸಿದ, ಆಡಿದ ಆಟಗಾರನೇಂಬ ದಾಖಲೆಗೆ ಇವರು ಪಾತ್ರರಾಗಿದ್ದಾರೆ...

ಹೆಚ್ಚು ಸಮಯ ಕಾಲ ಚೆಂಡನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಹಾಲೆಂಡ್​ನ ಮತ್ತೊಬ್ಬ ಆಟಗಾರ ಸ್ಟೀಫನ್​ ಡೆ ವ್ರಿಜ್​. ಒಟ್ಟು 587 ನಿಮಿಷಗಳ ಇವರು ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ, ಅನೇಕ ಸ್ಟಾರ್​ ಆಟಗಾರರನ್ನು ಹಿಂದಿಕ್ಕಿದ್ದಾರೆ...

ಇಷ್ಟೇ ಅಲ್ಲ ಇನ್ನೂ ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸಿದ ಮೂರನೇ ಆಟಗಾರ ಕೂಡ ಹಾಲೆಂಡ್​ ತಂಡದವರು. ಡಚ್​ ತಂಡದ ವೆಸ್ಲೇ ಸ್ನೇಡ್ಜರ್​ ಒಟ್ಟು 585 ನಿಮಿಷಗಳ ಕಾಲ ಚೆಂಡು ನಿಯಂತ್ರಿಸಿದ್ದಾರೆ. ಈ ಎಲ ಆಟಗಾರರು ಒಟ್ಟು ಆರು ಪಂದ್ಯವಾಡಿದ್ದು ಟಾಪ್​-3 ಸ್ಥಾನದಲ್ಲಿ ಡಚ್​ ತಂಡದ ಆಟಗಾರರೇ ಇರುವುದು ಅತ್ಯಂತ ಗಮನಾರ್ಹ...
ಈ ವಿಶ್ವಕಪ್​ನ ಸ್ಟಾರ್​ ಆಟಗಾರ, ಆರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ. ಚೆಂಡು ನಿಯಂತ್ರಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕು ಗೋಲ್​ಗಳಿಸಿರುವ ಈ ಫುಟ್ಬಾಲ್​ ಮಾಂತ್ರಿಕ ಒಟ್ಟು 573 ನಿಮಿಷ ಚೆಂಡನ್ನು ತಮ್ಮ ತೆಕ್ಕೆಯಲ್ಲಿ ಇಟ್ಟಿಕೊಂಡಿದ್ದು ವಿಶೇಷ....
 570 ನಿಮಿಷಗಳ ಕಾಲ ಚೆಂಡನ್ನು ನಿಯಂತ್ರಿಸಿದ ಜರ್ಮನಿಯ ಟೂನಿ ಕ್ರೂಸ್​, ಮತ್ತು ಬ್ರೆಜಿಲ್​ನ ಡೇವಿಡ್ ಲ್ಯೂಜ್​ ಐದನೇ ಸ್ಥಾನದಲ್ಲಿದ್ದಾರೆ... ಇವರು ಕೇವಲ ಸಾಮಾನ್ಯ ಆಟಗಾರರಲ್ಲ ಆಯಾ ತಂಡದ ಟ್ರಂಪ್​ಕಾರ್ಡ್​ ಆಗಿದ್ದಾರೆ...

 ಈ ಟಾಪ್​-5 ಆಟಗಾರರು ಇಷ್ಟವಾಗೋದೆ ಇವರ ಆಟದಿಂದ. ವಿರೋಧಿ ತಂಡದವರಿಗೆ  ಹೆಚ್ಚು ಕಾಡುವವರು, ವಿರೋಧಿ ತಂಡದವರಿಗೆ ಬಾಲ್​ ಸಿಗದಂತೆ ನೋಡಿಕೊಳ್ಳುವ ಅದ್ಭುತ ಆಟಗಾರರಿವರು. ಹಾಗಾಗಿಯೇ ಈ ತಂಡಗಳು ಫೈನಲ್​ ಸೆಮಿಫೈನಲ್​ವರೆಗ ತಲುಪಲು ಕಾರಣವಾಯ್ತು. ಈ ಆಟಗಾರರ ಮನಮೋಹಕ ಆಟ ಇಂದು ಆಯಾ ತಂಡದ ಫಲಿತಾಂಶದಲ್ಲೂ ಹೆಚ್ಚಿನ ಪ್ರಭಾವ ಬೀರುವಲ್ಲಿ ಸಹಾಯವಾಗಿದೆ...
ರವಿ.ಎಸ್​

ಅಂಕಿಅಂಶ ಲೆಕ್ಕಚಾರ

ವಿಶ್ವಕಪ್​ ಗ್ರೂಪ್​ ಸ್ಟೇಜ್​ ಪಂದ್ಯ ಮುಗಿದ್ರು ಆ ನೆನಪುಗಳು ಇನ್ನೂ ಹಲವರ ಮನಸ್ಸಲ್ಲಿ ಮನೆಮಾಡಿವೆ. ಕೆಲ ಅಂಕಿಅಂಶಗಳ ಪ್ರಕಾರ ಕೆಲ ತಂಡಗಳು ಮಿಂಚುತ್ತಿವೆ. ನಾಕೌಟ್​ ಹಂತಕ್ಕೆ ಪ್ರವೇಶ ಪಡೆಯದ ಅನೇಕ ತಂಡಗಳು ಮಿಂಚಿವೆ. ಲೀಗ್​ ಹಂತದಲ್ಲಿ ದಾಖಲಾದ ಕೆಲ ರೋಚಕ ಅಂಕಿ ಅಂಶಗಳ ವಿವರ ಇಲ್ಲಿದೆ ನೋಡಿ..
ಫಿಫಾ ವಿಶ್ವಕಪ್​ ಲೀಗ್​ ಹಂತದ ಪಂದ್ಯಗಳಲ್ಲಿ ದಾಳಿ ನಡೆಸಿದ ಕುರಿತ ಅಂಕಿಅಂಶಗಳು ತುಂಬಾ ಅಚ್ಚರಿಕರವಾಗಿವೆ. ಬಲಿಷ್ಠ ತಂಡಗಳಿಗಿಂದ ಸಣ್ಣ-ಸಣ್ಣ ತಂಡಗಳೇ ಗಮನಸೆಳೆಯುವ ಪ್ರದರ್ಶನ ನೀಡಿವೆ. ಹೆಚ್ಚು ಅಕ್ರಮಣಕಾರಿ ಆಟವಾಡುವಲ್ಲಿ ಇವು ಯಶಸ್ವಿಯಾಗಿದೆ....

 ಲೀಗ್​ ಹಂತದ  ಅಟ್ಯಾಕಿಂಗ್​ ಅಂಕಿಅಂಶ ಈ ರೀತಿ ಇದೆ. ಒಟ್ಟು 1247 ಶಾಟ್​ಗಳು ಈ ಲೀಗ್​ನಲ್ಲಿ ಕಾಣಸಿಕ್ವು. ಅದರಲ್ಲಿ ಒಟ್ಟು 136 ಗೋಲ್​ಗಳು ದಾಖಲಾಗಿವೆ. 2.83 ಸರಾಸರಿಯಲ್ಲಿ ಗೋಲ್​ ದಾಖಲಾಗಿವೆ. ಇದರಲ್ಲಿ ಒಟ್ಟು ನಾಲ್ಕು ಸೆಲ್ಫ್​ ಗೋಲ್​ ದಾಖಲಾಗಿವೆ. ನಾಲ್ಕು ಗೋಲ್​ ಗಳಿಸುವ ಮೂಲಕ ಮೆಸ್ಸಿ, ನೇಯ್ಮರ್​ ಗೋಲ್ಡನ್​ ಬೂಟ್​ ರೇಸ್​ನಲ್ಲಿದ್ರು. ಇದರಲ್ಲಿ ಒಟ್ಟು 10 ಪೆನಾಲ್ಟಿ ಕಿಕ್​ ಸಿಕ್ಕಿದ್ದು, 9 ಗೋಲ್​​ ಆಗಿದ್ರೆ, 1 ಮಿಸ್​ ಆಗಿದೆ.. 62 ಶಾಟ್​ ಹೊಡೆಯುವ ಮೂಲಕ ಅತಿಹೆಚ್ಚು ಶಾಟ್ ಹೊಡೆದ ತಂಡ ಎಂಬ ಕೀರ್ತಿ ಫ್ರಾನ್ಸ್ಗೆ ಸಲ್ಲುತ್ತದೆ. ಅದೇ ಇರಾನ್​ ಅತಿ ಕಡಿಮೆ 2 ಶಾಟ್​ ಪ್ರಯತ್ನಿಸಿದೆ. 10 ಗೋಲ್​ ಹೊಡೆದಿರುವ ನೆದರ್​ಲ್ಯಾಂಡ್​ ಅತಿಹೆಚ್ಚು ಗೋಲ್​ ಹೊಡೆದ ತಂಡ ಎಂಬ ಕೀರ್ತಿಗೆ ಪಾತ್ರವಾಯ್ತು. ಮತ್ತೊಂದೆಡೆ ಒಂದು ಗೋಲ್​ ಗಳಿಸುವ ಮೂಲಕ ಲೀಗ್​ನಲ್ಲಿ ಕಡಿಮೆ ಗೋಲ್​ಗಳಿಸಿದ ತಂಡ ಎಂಬ ಕಾರಣಕ್ಕೆ ಇರಾಟ್​, ಹೊಂಡುರಾಸ್​ ಮತ್ತು ಕ್ಯಾಮರೂನ್​ ಕಾರಣವಾದ್ವು...

ಇನ್ನೂ ಗೌರವಯುತವಾಗಿ ಆಟವಾಡಿದ ತಂಡಗಳ ಸಾಲಿಗೆ ಹಲವು ಸಣ್ಣ-ಸಣ್ಣ ತಂಡಗಳೇ ಅಗ್ರಸ್ಥಾನದಲ್ಲಿವೆ. ಕಾರ್ಡ್​ ಪಡೆಯುವ ದೃಷ್ಟಿಯಲ್ಲಿ ಕೆಲ ರೋಚಕ ಮಾಹಿತಿ, ಈ ವಿಶ್ವಕಪ್​ನ್ನು ಮತ್ತಷ್ಟು ವಿಭಿನ್ನವಾಗಿಸುತ್ತದೆ...

 ಲೀಗ್​ ಹಂತದ  ಫೇರ್​  ಪ್ಲೇ ಆಟ ಈ ರೀತಿಯಿದೆ. ಪ್ರತಿ ಪಂದ್ಯದಲ್ಲಿ ಸರಾಸರಿ 0.19 ಪ್ರಮಾಣದಲ್ಲಿ ರೆಡ್​ ಕಾರ್ಡ್​ ತೋರಿಸಲಾಗಿದೆ. ಒಟ್ಟು 9 ಆಟಗಾರರಿಗೆ ರೆಡ್​ ಕಾರ್ಡ್​ ತೋರಿಸಲಾಯ್ತು. 128 ಸಲ ಹಳದಿ ಕಾರ್ಡ್​ ಬಳಸಲಾಗಿದ್ದು, ಸರಾಸರಿ ಪ್ರತಿ ಪಂದ್ಯಕ್ಕೆ 2.67 ಸಲ ಹಳದಿ ಕಾರ್ಡ್​ ಬಳಸಲಾಗಿದೆ. ವಿಶೇಷ ಎಂದರೆ ಫ್ರಾನ್ಸ್ ಮತ್ತು ಹೊಂಡುರಾಸ್​ ನಡುವಿನ ಪಂದ್ಯದಲ್ಲಿ 8 ಸಲ ಕಾರ್ಡ್​ಬಳಸಲಾಗಿದ್ದು, ಅತಿಹೆಚ್ಚು ಸಲ ಕಾರ್ಡ್​ ಬಳಸಿದ ಪಂದ್ಯ ಇದಾಗಿದೆ...

ಇನ್ನೂ ಲೀಗ್​ನಲ್ಲಿ ಅತ್ಯಂತ ರಕ್ಷಣಾತ್ಮವಾಗಿ ಆಟವಾಡಿದ ತಂಡ ಯಾವುದು ಎಂಬ ಕುತೂಹಲ ಎಲ್ಲರಲ್ಲಿರುತ್ತೆ. ಫಿಫಾ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ರಕ್ಷಣಾತ್ಮಕವಾಗಿ ಆಡಿದ ತಂಡ, ಚೆಂಡನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದವು ಮತ್ತು ಹೆಚ್ಚು ಗೋಲ್​ ತಡೆದ ಕೀರ್ತಿಗೆ ಪಾತ್ರವಾಗಿರುವುದು ಕೂಡ ಸಣ್ಣ ತಂಡಗಳು...
 ಫಿಫಾ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ರಕ್ಷಣಾತ್ಮಕ ಆಟದ ವಿವರ ಹೀಗಿದೆ. ಒಟ್ಟು 1561 ಸಲ ಚೆಂಡನ್ನು ಟ್ಯಾಕಲ್​ ಮಾಡಲಾಗಿದೆ. ಅದರಲ್ಲಿ ಅತಿಹೆಚ್ಚು 72 ಸಲ ಇರಾನ್​ ತಂಡ ಟ್ಯಾಕಲ್​ ಮಾಡಿದೆ. ಕಡಿಮೆ ಟ್ಯಾಕಲ್​ ಮಾಡಿರುವುದು ಬೆಲ್ಜಿಯಂ ತಂಡ. ಒಟ್ಟು 325 ಗೋಲ್​ ತಡೆಯಲಾಗಿದೆ. ಅದರಲ್ಲಿ 18 ಗೋಲ್​ಗಳನ್ನು ಈಕ್ವಾಡರ್​ ತಂಡವೊಂದೆ ರಕ್ಷಿಸಿದ್ದು ಹೆಚ್ಚು ಗೋಲ್​ ರಕ್ಷಿಸಿದ ಕೀರ್ತಿಗೆ ಪಾತ್ರವಾಗಿದೆ.  ಆದರೆ ಕಡಿಮೆ ಗೋಲ್​ ರಕ್ಷಿಸಿದ ತಂಡ ಬ್ರೆಜಿಲ್​,  ಮತ್ತು ಕ್ರೋಷಿಯಾ ಒಟ್ಟು 5 ಗೋಲ್​ಗಳನ್ನು ಈ ತಂಡಗಳು ರಕ್ಷಿಸಿವೆ...

 ಇವು ಈ ವಿಶ್ವಕಪ್​ ಲೀಗ್​ ಹಂತದ ಪಂದ್ಯಗಳಲ್ಲಿ ನೋಡ ಸಿಕ್ಕ ಕೆಲ ರೋಚಕ ಅಂಕಿ ಅಂಶಗಳು. ರಕ್ಷಣಾತ್ಮಕವಾಗಿ, ಫೇರ್​ ಪ್ಲೇ ಆಟವಾಡುವಲ್ಲಿ ಬಲಿಷ್ಠ ತಂಡಗಳು ವಿಫಲವಾದ್ವು. ಲೀಗ್​ ಹಂತದ ಕೆಲ ಸಣ್ಣ-ಸಣ್ಣ ತಂಡಗಳು ಹೊರಬಿದ್ರು. ಅವರ ವಿಶೇಷ ರಕ್ಷಣಾತ್ಮಕ ಆಟದಿಂದ ಗಮನಸೆಳೆದ್ವು...

ರವಿ.ಎಸ್​

ಜರ್ಮನಿ ಫೇವರಿಟ್​

ಫಿಫಾ ವಿಶ್ವಕಪ್​ನ  ಮಹಾಸಮರಕ್ಕೆ ಮರಕಾನ ಮೈದಾನ ಸಿದ್ಧವಾಗಿದೆ. ಒಂದೇಡೆ 1990ರ ವಿಶ್ವಕಪ್​ನ ಸೋಲಿನ ಸೇಡು ತಿರಿಸಿಕೊಳ್ಳಲ್ಲು ಮೆಸ್ಸಿ ಆತುರಯುತ್ತಿದ್ದಾರೆ. ಮತ್ತೊಂದೆಡೆ ನಾಲ್ಕನೇ ಸಲ  ಫುಟ್ಬಾಲ್​ ವಿಶ್ವಕಪ್​ ಎತ್ತಿಹಿಡಿಯಲು ಜರ್ಮನಿ ಸಿದ್ದವಾಗಿದೆ. ಉಭಯ ತಂಡಗಳು ಉತ್ತಮ ಫಾರ್ಮ್​ನಲ್ಲಿದ್ದು, ವಿಶ್ವಕಪ್​ನ ಹೈವೊಲ್ಟೇಜ್​ ಪಂದ್ಯಕ್ಕೆ ಸಿದ್ದವಾಗಿವೆ....

ಫುಟ್ಬಾಲ್​ ಜಾತ್ರೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ಫಿಫಾ ವಿಶ್ವಕಪ್​ನ 64ನೇ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದೆ. ಬಲಿಷ್ಠ ಜರ್ಮನಿ, ಸ್ಟಾರ್​ ಆಟಗಾರ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಎದುರಾಗಲಿವೆ. ಉಭಯ ತಂಡಗಳು ಗೆಲ್ಲುವ ವಿಶ್ವಾಸದಲ್ಲಿದ್ದು ಮದಗಜಗಳಂತೆ ಫೈನಲ್​ ಕದನದಲ್ಲಿ ಹೋರಾಡಲಿವೆ...

ಈ ವಿಶ್ವಕಪ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ ಜರ್ಮನಿ. ಅತ್ಯಂತ ಬೆಸ್ಟ್​ ಫಾರ್ವಡ್​ ಆಟಗಾರರು ಮತ್ತು ಉತ್ತಮ ಡಿಫೆನ್ಸ್ ತಂಡದ ಪ್ಲಸ್​ ಪಾಯಿಂಟ್​ ಆಗಿದೆ. ಫಿಲಿಪ್​ ಲ್ಹಾಮ್​ ಅವರ ಸಾರಥ್ಯದಲ್ಲಿ ಜರ್ಮನ್​ ತಂಡ ಇತಿಹಾಸ ಬರೆಯುವ ತವಕದಲ್ಲಿದೆ...

ಥಾಮಸ್​ ಮುಲ್ಲರ್​, ಮಿರೊಸ್ಲಾವ್​ ಕ್ಲೋಸ್​ ಜರ್ಮನಿ ತಂಡದ ಟ್ರಂಪ್​ ಕಾರ್ಡ್​. ಕ್ಲೋಸ್ ಅನುಭವ ಮತ್ತು ಮುಲ್ಲರ್​ ಆಕ್ರಮಣಕಾರಿ ಆಟ ಅರ್ಜೆಂಟೀನಾಕೆ ತಲೆನೋವಾಗಲಿದೆ. ಟೋನಿ ಕ್ರೂಸ್​ ಮತ್ತು  ಆ್ಯಂಡ್ರೆ ಶ್ರೂಲ್​​ ಕೂಡ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ  ಹೊಂದಿರುವುದು ಜರ್ಮನ್​ ಶಕ್ತಿ. ಗೋಲ್​ ಕೀಪರ್ ಮ್ಯಾನ್ಯೂಲ್​​ ನ್ಯೂರ್​ ಸಹ ಉತ್ತಮ ಫಾರ್ಮ್​ನಲ್ಲಿದ್ದು. ಫೈನಲ್​ ಪಂದ್ಯ ಗೆಲ್ಲಲು ಜರ್ಮನಿ ಸರ್ವ ರೀತಿಯಲ್ಲಿ ಸಿದ್ಧವಾಗಿದೆ. ಟೂರ್ನಿಯಲ್ಲಿ ಒಟ್ಟು 17 ಗೋಲ್​ಗಳಿಸಿರುವ ಜರ್ಮನಿ ತಂಡ ಈ ವಿಶ್ವಕಪ್​ನಲ್ಲಿ ಅತಿಹೆಚ್ಚು ಗೋಲ್​ಗಳಿಸಿರುವ ತಂಡವಾಗಿದೆ.  ಬ್ರೆಜಿಲ್​ ವಿರುದ್ಧ 7-1 ಗೋಲ್​ಗಳ ಜಯ, ಜರ್ಮನಿ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ...

ಅರ್ಜೆಂಟೀನಾ ತಂಡದ ಟ್ರಂಪ್​ಕಾರ್ಡ್​ ನಾಯಕ ಲಿಯೊನೆಲ್​ ಮೆಸ್ಸಿ. ತಂಡ ಸಂಕಷ್ಟದಲ್ಲಿದಾಗೊಮ್ಮೆ ತಂಡಕ್ಕೆ ಆಸರೆಯಾಗುತ್ತಿರುವ ಸ್ಟಾರ್​ ಆಟಗಾರ. ಹಲವು ಸಲ ಅರ್ಜೆಂಟೀನಾ ಜಯಕ್ಕೆ ಮೆಸ್ಸಿ ಆಟ ಕಾರಣವಾಗಿದೆ. ಅರ್ಜೆಂಟೀನಾ ರಕ್ಷಣಪಡೆ ಅದ್ಭುತವಾಗಿದೆ. ಉತ್ತಮ ಮಿಡ್​ ಫೀಲ್ಡರ್​, ಡಿಫೆಂಡರ್ ಹೊಂದಿರುವುದು ತಂಡದ ಶಕ್ತಿ. ಆದರೆ ಮೆಸ್ಸಿ ಬಿಟ್ಟರೆ ಬೇಱವ್​ ಆಟಗಾರ ಗೋಲ್​ಗಳಿಸುವಲ್ಲಿ ಹೆಚ್ಚಿನ ಸಫಲತೆ ಕಂಡಿಲ್ಲ...

 ಉತ್ತಮ ಯೋಜನಬದ್ಧವಾಗಿ ಆಟವಾಡುವುದು ಮೆಸ್ಸಿ ಪಡೆಯ ಪ್ಲಸ್​ಪಾಯಿಂಟ್​. ಗೋಲ್​ಕೀಪರ್​ ಸರ್ಜಿಯಾ ರೊಮೆರೊ ಉತ್ತಮ ಫಾರ್ಮ್​್ನಲ್ಲಿದ್ದಾರೆ. ಒಟ್ನಲ್ಲಿ ಅರ್ಜೆಂಟೀನಾ ಮಿಂಚಿನ ವೇಗದಲ್ಲಿ ಗೋಲ್​ಗಳಿಸದೆಯಿದ್ರು. ಉತ್ತಮ ರಕ್ಷಣಪಡೆಯನ್ನು ಹೊಂದಿರುವುದು ಅದರ ಶಕ್ತಿಯಾಗಿದೆ...

ಉಭಯ ತಂಡಗಳು ಉತ್ತಮ ಫಾರ್ಮ್​ನಲ್ಲಿವೆ. ಮೆಸ್ಸಿ 28 ವರ್ಷಗಳ ನಂತರ ಡಿಗೋ ಮರಡೋನರಂತೆ ವಿಶ್ವಕಪ್​ ಗೆದ್ದು ಮೂರನೇ ಸಲ ವಿಶ್ವಕಪ್​ ಎತ್ತಿಹಿಡಿಯುವ ವಿಶ್ವಾಸದಲ್ಲಿದ್ದಾರೆ. 1990ರ ವಿಶ್ವಕಪ್​ ಫೈನಲ್​ನಲ್ಲಿ ಜರ್ಮನಿ ವಿರುದ್ಧ ಸೋತ ಸೇಡನ್ನು ತಿರಿಸಿಕೊಳ್ಳುವ ಇರಾದೆಯಲ್ಲಿದೆ. ಆದ್ರೇ ಜರ್ಮನಿ ಮೆಸ್ಸಿ ಆಸೆ ಭಗ್ನಗೊಳಿಸಿ, ನಾಲ್ಕನೇ ಸಲ ವಿಶ್ವ ಚಾಂಪಿಯನ್ನಾಗಿ ಮೆರೆಯುವ ಭರವಸೆಯಲ್ಲಿದೆ. ಉಭಯ ತಂಡಗಳು ಫುಟ್ಬಾಲ್​ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ಬರೆಯುವ ಹಾದಿಯಲ್ಲಿವೆ...

ರವಿ.ಎಸ್

ಜರ್ಮನಿ ವಿಶ್ವಕಪ್​ ಗೆದ್ದಿದ್ದು ಈಗ ಹಳೆಯ ಸುದ್ದಿ. ಅದ್ಭುತ ಪ್ರದರ್ಶನದ ಮೂಲಕ ಜರ್ಮನ್ನರು ವಿಶ್ವ ಚಾಂಪಿಯನ್​ ಆದ್ರು. ಜರ್ಮನಿ ಚಾಂಪಿಯನ್ ಆಗಲು ಕಾರಣವಾದದ್ದು, ಲಕ್ಕಿ ನಂಬರ್​. ಹೌದು, ಜರ್ಮನಿಯ ಈ ಗೆಲುವಿನ ಲೆಕ್ಕಚಾರದಲ್ಲಿ ನಂಬರ್​ 7 ಲಕ್ಕಿಯಾಗಿ ಸಾಬೀತಾಯ್ತು.

 ಫಿಫಾ ವಿಶ್ವಕಪ್​ ಪೂರ್ತಿ ಜರ್ಮನಿಗೆ ಈ ಸಲ ನಂಬರ್​ 7ರ ಸಾಥ್​ ತುಂಬಾನೇ ಇತ್ತು. ಸಂಪೂರ್ಣ ಟೂರ್ನಿಯಲ್ಲಿ ಜರ್ಮನಿ ಆಡಿದ ಪ್ರತಿ ಪಂದ್ಯದಲ್ಲೂ, ಪ್ರತಿ ಕ್ಷಣದಲ್ಲೂ ಏಳರ ಸಾಥ್​ ಮಾತ್ರ ಜರ್ಮನಿಯ ಜೊತೆ ಬಿಡಲಿಲ್ಲ. ಹಾಗಾಗಿ ಜರ್ಮನಿ ವಿಶ್ವಚಾಂಪಿಯನ್​ ಆಗಲು ನಂಬರ್​ 7 ಲಕ್ಕಿಯಾಗಿ ಸಾಬೀತಾಯ್ತು.

 ಜರ್ಮನಿ ತಂಡದಲ್ಲಿ  ‘G’ ಫ್ಯಾಕ್ಟರ್

ಇಂಗ್ಲಿಷ್​ ವರ್ಣಮಾಲೆಯ ಪ್ರಕಾರ ‘ಜಿ’ ಅಕ್ಷರಕ್ಕೆ ಏಳನೇ ಸ್ಥಾನ ಸಿಗುತ್ತೆ. ಜರ್ಮನಿ ಎಂಬ ಹೆಸರು ಆರಂಭವಾಗುವುದು ‘ಜಿ’ಯಿಂದಲೇ.  ಈ ಸಲ ಜರ್ಮನಿ ತಂಡ ‘ಜಿ’ ಗ್ರೂಪ್​ನಲ್ಲಿ ಆಡಿತ್ತು ಎಂಬುವುದು ಮತ್ತೊಂದು ವಿಶೇಷ. ಇಲ್ಲೂ ಕೂಡ ಜರ್ಮನಿಗೆ 7 ಸಾಥ್​ ನೀಡ್ತು.

ಲೀಗ್​ನಲ್ಲಿ 7 ಗೋಲ್​ ಹೊಡೆದ ಜರ್ಮನಿ

 ಇನ್ನೂ ಗ್ರೂಪ್​ ಹಂತದಲ್ಲಿ ಜರ್ಮನಿ ಒಟ್ಟು 7 ಗೋಲ್​ ದಾಖಲಿಸಿತು. ಪೋರ್ಚುಗಲ್​ ವಿರುದ್ಧ 4, ಘಾನಾ ವಿರುದ್ಧ 2 ಗೋಲ್​ ಮತ್ತು ಯುಎಸ್​ಎ ವಿರುದ್ದ ಒಂದು ಗೋಲ್​ ದಾಖಲಿಸುವ ಮೂಲಕ ಲೀಗ್​​​ನಲ್ಲಿ ಒಟ್ಟು 7 ಗೋಲ್​ ಬಾರಿಸಿದ ಸಾಧನೆ ಮಾಡ್ತು.

 ಲೀಗ್​ನಲ್ಲಿ 7 ಅಂಕಗಳಿಸಿದ ಜರ್ಮನಿ

ವಿಶೇಷ ಎಂದರೆ ವಿಶ್ವಕಪ್​ನ ಲೀಗ್​​ನಲ್ಲಿ ಜರ್ಮನಿ ಎರಡು ಪಂದ್ಯದಲ್ಲಿ ಗೆಲುವು  ಮತ್ತು ಒಂದು ಪಂದ್ಯ ಡ್ರಾ ಮೂಲಕ ಒಟ್ಟು ಏಳು ಅಂಕಗಳಿಸಿತು. ಇದು ಕೂಡ ಜರ್ಮನಿಗೆ ಪ್ಲಸ್​ ಪಾಯಿಂಟ್​ ಆಯ್ತು.

 ಬ್ರೆಜಿಲ್​ ವಿರುದ್ದ 7 ಗೋಲ್

ಏಳರ ನಂಟು ಜರ್ಮನಿ ಜೊತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಬ್ರೆಜಿಲ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಜರ್ಮನಿ ದಾಖಲಿಸಿದ ಗೋಲಿನ ಸಂಖ್ಯೆ 7. ಇದು ಈ ವಿಶ್ವಕಪ್​ನ ಹೊಸ ಇತಿಹಾಸಕ್ಕೆ ಕಾರಣವಾದ ಪಂದ್ಯವಾಯ್ತು. ಆತಿಥೇಯ ಬ್ರೆಜಿಲ್​ ಅನ್ನು 7-1 ಗೋಲ್​ಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆಯಿತು. ವಿಶೇಷ ಎಂದರೆ ಬ್ರೆಜಿಲ್​ ವಿರುದ್ಧ ಜರ್ಮನಿ ಕೇವಲ 7 ನಿಮಿಷದಲ್ಲಿ 4 ಗೋಲ್​ ಹೊಡೆಯುವ ಮೂಲಕ ಬ್ರೆಜಿಲ್​ನ ಸೋಲಿಗೆ ಕಾರಣವಾಯ್ತು.

7ನೇ ತಿಂಗಳು ಮತ್ತು ಲಕ್ಕಿ ವರ್ಷ 2+0+1+4=7

ಹೌದು, ಜರ್ಮನಿ ವಿಶ್ವಕಪ್​ ಎತ್ತಿ ಹಿಡಿದಿದ್ದು ಜುಲೈ ತಿಂಗಳಲ್ಲಿ. ಇಂಗ್ಲೀಷ್​ ಕ್ಯಾಲೆಂಡರ್​ ಪ್ರಕಾರ ಜುಲೈ ಏಳನೇ ತಿಂಗಳು. ಇಷ್ಟೇ ಅಲ್ಲ 2014 ವರ್ಷ ಕೂಡ ಜರ್ಮನಿಗೆ ಲಕ್ಕಿ. 2+0+1+4 ಇವೆಲ್ಲವನ್ನು ಕೂಡಿದ್ರೆ ಬರುವ ಸಂಖ್ಯೆ ಏಳು. ಹಾಗಾಗಿ ಜರ್ಮನಿಗೆ ಈ ಸಂಖ್ಯೆ ಇನ್ನಿಲ್ಲದಂತೆ ಸಾಥ್​ ನೀಡ್ತು.

ವಿಶೇಷ ಎಂದರೆ ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಜರ್ಮನಿ ವಿನ್ನಿಂಗ್​ ಗೋಲ್​ ಗಳಿಸಿದ್ದು 113ನೇ ನಿಮಿಷದಲ್ಲಿ. ಹೆಚ್ಚುವರಿ ಸಮಯ ಮುಗಿಯುವ ಏಳು ನಿಮಿಷ ಮುಂಚೆ ಮಾರಿಯೋ ಗೋಟ್ಜ್​ ಗೋಲ್​ ದಾಖಲಿಸಿದ್ರು. ಒಟ್ಟಿನಲ್ಲಿ ಜರ್ಮನಿ ಪ್ರತಿ ಯಶಸ್ಸಿನಲ್ಲೂ ನಂಬರ್​-7 ಸಾಥ್​ ನೀಡ್ತು.

ರವಿ.ಎಸ್​

ಮಿರೊಸ್ಲಾವ್​ ಮ್ಯಾಜಿಕ್


ಫಿಫಾ  ವಿಶ್ವಕಪ್​ನಲ್ಲಿ ಎಂದು ಮರೆಯಲಾಗದ ಹೆಸರು ಜರ್ಮನಿಯ ಮಿರೊಸ್ಲಾವ್​ ಕ್ಲೋಸ್​. ಜರ್ಮನಿ ಪರವಾಗಿ ಅತಿಹೆಚ್ಚು ಗೋಲ್​ ಹೊಡೆದ, ಹೆಚ್ಚು ಸಲ ತಂಡದ ಗೆಲುವಿಗೆ ಕಾರಣವಾದ ಏಕೈಕ ಆಟಗಾರ. ವಿಶ್ವಕಪ್​ನಲ್ಲಿ ಅತಿಹೆಚ್ಚು ಗೋಲ್​ ಹೊಡೆದ ದಾಖಲೆ ಇವರ ಹೆಸರಲ್ಲಿದೆ. ಅಷ್ಟೇ ಅಲ್ಲ ವಿಶ್ವಕಪ್​ನಲ್ಲಿ ಅನೇಕ ರೋಚಕ ಸಂಗತಿಗಳಿಗೆ ಇವರು ಕಾರಣರಾಗಿದ್ದಾರೆ...

ಮಿರೊಸ್ಲಾವ್​ ಕ್ಲೋಸ್​ ದಿ ಗಾಡ್​ ಆಫ್​ ಹೆಡರ್​. ಫಿಫಾ ವಿಶ್ವಕಪ್​ನ ವಿಭಿನ್ನ ಪಯಣಿಗ.  ಇದುವರೆಗೂ ವರ್ಲ್ಡ್​ಕಪ್​ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರ ಕ್ಲೋಸ್​. ಫಿಫಾ ವಿಶ್ವಕಪ್​ ಗೆಲುವಿನೊಂದಿಗೆ ಕ್ಲೋಸ್​ ಫುಟ್ಬಾಲ್​ಗೆ ವಿದಾಯ ಹೇಳಿದ್ರು. ಅರ್ಥಪೂರ್ಣ ರೀತಿಯಲ್ಲಿ ತಮ್ಮ ಫುಟ್ಬಾಲ್ ಪಯಣಕ್ಕೆ  ಪೂರ್ಣ ವಿರಾಮವಿಟ್ರು.

 2002 ವಿಶ್ವಕಪ್​ನಿಂದಲೂ ಕ್ಲೋಸ್​ ಜರ್ಮನಿ ತಂಡದ ಅವಿಭಾಜ್ಯ ಅಂಗವಾಗಿದ್ರು. ಪ್ರತಿ ಟೂರ್ನಿಯಲ್ಲೂ ಗೋಲ್​ ಹೊಡೆದ ಆಟಗಾರ. 2002ರಲ್ಲಿ ಜರ್ಮನಿ ಫೈನಲ್​ವರೆಗೂ ಪ್ರಯಾಣ ಬೆಳೆಸಿತು. ಆದ್ರೆ ಫೈನಲ್​ನಲ್ಲಿ ಬ್ರೆಜಿಲ್​ ವಿರುದ್ಧ ಸೋಲುವ ಮೂಲಕ ವಿಶ್ವಕಪ್​ಗೆ ವಿದಾಯ ಹೇಳ್ತು. ಕೂದಲೆಳೆಯಲ್ಲಿ ವಿಶ್ವ ಚಾಂಪಿಯನ್​ ಆಗುವ ಪಟ್ಟ ಮಿಸ್​ ಮಾಡಿಕೊಳ್ತು. ಜರ್ಮನಿ ಸೋತ್ರು ಆಗ ಗಮನ ಸೆಳೆದಿದ್ದು ಮಾತ್ರ ಯುವ ಆಟಗಾರ ಕ್ಲೋಸ್​.

ಜರ್ಮನಿಗಾಗಿ ಕ್ಲೋಸ್​ 71 ಗೋಲ್​ ದಾಖಲಿಸಿದ್ದಾರೆ. ಇಷ್ಟೆ ಅಲ್ಲ ಫಿಫಾ ವಿಶ್ವಕಪ್​ನಲ್ಲಿ ಅವರು ಗೋಲ್​ ಹೊಡೆದ ಯಾವ ಪಂದ್ಯದಲ್ಲೂ ಜರ್ಮನಿ ಸೋತಿಲ್ಲ ಅನ್ನುವುದು ಅಷ್ಟೇ ವಿಶೇಷ. ವಿಶ್ವಕಪ್​ನನಲ್ಲಿ ಒಟ್ಟು 16 ಗೋಲ್​ ಹೊಡೆದಿರುವುದು ಕೂಡ ವಿಶ್ವ ದಾಖಲೆ. ಬ್ರೆಜಿಲ್​ ವಿರುದ್ಧ ಸೆಮಿಫೈನಲ್​ನಲ್ಲಿ ಒಂದು ಗೋಲ್​ ದಾಖಲಿಸುವ ಮೂಲಕ, ಬ್ರೆಜಿಲ್​ನ ರೊನಾಲ್ಡೊ ಹೆಸರಲ್ಲಿದ್ದ 15 ಗೋಲ್​ಗಳ ದಾಖಲೆಯನ್ನು ಮುರಿದ್ರು.

ವಿಶ್ವಕಪ್​ನಲ್ಲಿ ಅತಿಹೆಚ್ಚು ಜಯಕ್ಕೆ ಪಾತ್ರವಾದ ಏಕೈಕ ಆಟಗಾರ ಎಂಬ ಕೀರ್ತಿ ಇವರಿಗೆ ಸಲ್ಲುತ್ತೆ. ಒಟ್ಟು 17 ವಿಶ್ವಕಪ್​ ಪಂದ್ಯಗಳನ್ನು ಗೆದ್ದ ಸಮಯದಲ್ಲಿ ಕ್ಲೋಸ್​ ಜರ್ಮನಿ ತಂಡದ ಸದಸ್ಯರಾಗಿದ್ರು ಎಂಬುವುದು ಅಷ್ಟೇ ವಿಶೇಷ.

ಅದೇನೊ ಗೊತ್ತಿಲ್ಲ ಕಳೆದ ಮೂರು ವಿಶ್ವಕಪ್​ನಲ್ಲಿ ಅರ್ಜೆಂಟೀನಾ ತಂಡ ಜರ್ಮನಿಗೆ ಮಣಿದಿದೆ. ಅರ್ಜೆಂಟೀನಾ ಸೋತ ಮೂರು ಸನ್ನಿವೇಶದಲ್ಲೂ ಮಿರೊಸ್ಲಾವ್​ ಕ್ಲೋಸ್​ ಜರ್ಮನಿ ತಂಡದಲ್ಲಿದ್ರು. 2002, 2006ರಲ್ಲಿ ಅರ್ಜೆಂಟೀನಾವನ್ನು ಕ್ವಾರ್ಟರ್​ಫೈನಲ್​ನಲ್ಲಿ ಸೋಲಿಸಿದ್ರು. 2014ರಲ್ಲಿ ಫೈನಲ್​ನಲ್ಲಿ ಸೋಲಿನ ರುಚಿ ತೋರುವ ಮೂಲಕ, ಅರ್ಜೆಂಟೀನಾ ಗೆಲುವಿನ ಕನಸಿಗೆ ಬ್ರೇಕ್​ ಹಾಕಿದ್ರು.
ವಿಶ್ವಕಪ್​ ಫೈನಲ್​ ಪಂದ್ಯಕ್ಕೂ ಮುನ್ನ ಕ್ಲೋಸ್​ ತಾವು ವಿಶ್ವಕಪ್​ ವಿದಾಯ ಹೇಳುವುದಾಗಿ  ಘೋಷಣೆ ಮಾಡಿದ್ರು. ಹಾಗಾಗಿ ಅರ್ಜೆಂಟೀನಾ ವಿರುದ್ಧದ ಪಂದ್ಯ ಕ್ಲೋಸ್​​ ಅತ್ಯಂತ ಮುಖ್ಯವಾಗಿತ್ತು. ಜರ್ಮನಿ ಆಟಗಾರರು ಕೂಡ ಈ ಕಾಲ್ಚೆಂಡು ಮಾಂತ್ರಿಕನಿಗೆ ಅದ್ಧೂರಿ ಬಿಳ್ಕೊಡೆಗೆ ನೀಡುವ ಇರಾದೆಯಲ್ಲಿತ್ತು. ಹಲವು ಸಲ ಕೂದಲೆಳೆಯಲ್ಲಿ ಸೋತಿದ್ದ ಜರ್ಮನಿ ಈ ಸಲ ಗೆಲ್ಲುವ ವಿಶ್ವಾಸದಲ್ಲಿತ್ತು. ಆದ್ರೆ ಕ್ಲೋಸ್​, ಮುಲ್ಲರ್ ಎಷ್ಟೇ ಪ್ರಯತ್ನ ಪಟ್ರು ಗೋಲ್​ ದಾಖಲಿಸುವಲ್ಲಿ ವಿಫಲವಾದ್ರು. 88ನೇ ನಿಮಿಷದಲ್ಲಿ ಕ್ಲೋಸ್​ ಮೈದಾನ ಬಿಟ್ಟು ಹೊರ ಬರುವಾಗ ಇಡೀ ಕ್ರೀಡಾಂಗಣ ಎದ್ದು ನಿಂತು ಈ ಆಟಗಾರನಿಗೆ ಗೌರವ ಸೂಚಿಸಿತು. ಫುಟ್ಬಾಲ್​ ಲೋಕದಲ್ಲಿ ಹಲವರು ಜರ್ಮನಿ ತಂಡವನ್ನು ದ್ವೇಷಿಸಬಹುದು. ಆದರೆ ಕ್ಲೋಸ್​ ಆಟವನ್ನು ದ್ವೇಷಿಸುವರು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲ್ಲ ಅಷ್ಟೊಂದು ಅದ್ಭುತ ಆಟಗಾರ ಇವರು.

 88ನೇ ನಿಮಿಷದಲ್ಲಿ ವಿಶ್ವಕಪ್​ ದಾಖಲೆ ವೀರ ಮೈದಾನ ಬಿಟ್ಟು ಹೊರಬಂದಾಗ ಅವರ ಸ್ಥಾನದಲ್ಲಿ ಆಡಲು ಒಳಗೆ ಬಂದವರು 22 ವರ್ಷದ ಮಾರಿಯೊ ಗೋಯೆಟ್ಜ್​ . ಕ್ಲೋಸ್​ ಈ ಆಟಗಾರನಿಗೆ ಕೆಲ ಟಿಪ್ಸ್​ ನೀಡಿ ಕಳಿಸಿದ್ರು. ಕ್ಲೋಸ್​ ಜಾಗದಲ್ಲಿ ಆಡಿದ ಗೋಯೆಟ್ಜ್​ ಗೋಲ್​ ಹೊಡೆಯುವ ಮೂಲಕ ಜಯದ ರೂವಾರಿಯಾದ್ರು. ತಮ್ಮ ತಂಡದ ಅನುಭವಿ ಹಿರಿಯ ಆಟಗಾರನಿಗೆ ವಿಶ್ವಕಪ್​ ಟ್ರೋಫಿ ಮೂಲಕ ಬಿಳ್ಕೊಡುಗೆ ನೀಡಿದ್ರು. ವಿಶ್ವಕಪ್​ ದಾಖಲೆ ವೀರ ಕೊನೆಗೂ ವಿಶ್ವಕಪ್​ ಎತ್ತಿಹಿಡಿಯುವ ಮೂಲಕ ತಮ್ಮ ಅದ್ಭುತ ಫುಟ್ಬಾಲ್​ ಪ್ರಯಾಣಕ್ಕೆ ಪೂರ್ಣ ವಿರಾಮವಿಟ್ರು.


ರವಿ.ಎಸ್​

ಪಂಕಜ್​ ಪ್ರವರ

ಪ್ರತಿ ಯಶಸ್ವಿ ಮನುಷ್ಯನ ಹಿಂದೆ ಒಂದು ನೋವಿನ ಕಥೆಯಿರುತ್ತೆ. ಸಂಕಷ್ಟಗಳನ್ನೆಲ್ಲಾ ಮೀರಿ ಬೆಳೆದರೆ ಮಾತ್ರ ಸಾಧನೆ ಸಾಧ್ಯ. ಇಂತಹ ಸಂಕಷ್ಟಗಳನ್ನೆಲ್ಲಾ ಮೀರಿದರೆ ಮಾತ್ರ ಸಾಧಕನ್ನಾಗಲು ಸಾಧ್ಯ. ಸ್ನೂಕರ್​ ವಿಶ್ವ ಚಾಂಪಿಯನ್​ ಪಂಕಜ್​ ಅಡ್ವಾಣಿ ಕೂಡ ಇದಕ್ಕೆ ಹೊರತಾಗಿಲ್ಲ. ಪಂಕಜ್​ ಇಂದು ಈ ಮಟ್ಟಕ್ಕೆ ಬೆಳೆಯಬೇಕಾದ್ರೆ ಒಂದು ನೋವಿನ ಕಥೆಯಿದೆ...

ಪಂಕಜ್​ ಅಡ್ವಾಣಿ ಚಿಕ್ಕವಯಸ್ಸಿನಲ್ಲೆ ತಮ್ಮ ತಂದೆಯನ್ನು ಕಳೆದುಕೊಂಡ್ರು. ಅಣ್ಣನ ಜೊತೆ ರಾಜ್ಯ ಬಿಲಿಯರ್ಡ್ಸ್​ ಸಂಸ್ಥೆಯಲ್ಲಿ ಬಂದು ಆಗಾಗ ಅಭ್ಯಾಸ ಮಾಡುತ್ತಿದ್ರು. ಆಗ 10 ವರ್ಷದ ಈ ಪೋರ, ಆಗಿನ ಬಿಲಿಯರ್ಡ್ಸ್​ ಸಂಸ್ಥೆ ಅಧ್ಯಕ್ಷ ಅರವಿಂದ್​ ಸಾವುರ್​ ಕಣ್ಣಿಗೆ ಬಿದ್ದ. ಆದಾಗ್ಲೇ ಹುಡುಗನ ಆಟ ನೋಡಿ  ಅವರನ್ನು ಸ್ನೂಕರ್​ ಆಡುವಂತೆ ಆ ಹುಡುಗಣ ಅಣ್ಣನ್ನು ಕೇಳಿಕೊಂಡ್ರು. ತಾಯಿಯ ಅನುಮತಿ ಕೇಳುವಂತೆ ಪಂಕಜ್​ ಮತ್ತು ಶ್ರೀ ಅಡ್ವಾಣಿ ತಿಳಿಸಿದ್ರು.. ಅಷ್ಟೇ ಪಂಕಜ್​ ಬದುಕಿಗೆ ಹೊಸ ತಿರುವು ಸಿಕ್ಕಿಬಿಡ್ತು...

ಪಂಕಜ್​ ತಾಯಿಯ ಪರವಾನಿಗೆ ಕೇಳಲು ಸ್ವತಃ ಅರವಿಂದ್​ ಸಾವುರ್​ ಅವರ ಮನೆಗೆ ಹೋದ್ರು. ಪಂಕಜ್​ ತಾಯಿ ಮೊದಲಿಗೆ ಅವರ ಮಾತಿಗೆ ಸಹಕರಿಸಲಿಲ್ಲ. ಅವನ್ನೊಬ್ಬ ಮಹಾನ್ ಪ್ರತಿಭೆ. ಅವನನ್ನು  ಮಹಾನ್​ ಆಟಗಾರನ್ನಾಗಿ ಮಾಡುವ ಜವಾಬ್ದಾರಿ ನನ್ನದು ನೀವು ಯಾವುದೇ ಹಣ ಕೊಡುವುದು ಬೇಡ. ನಾನೇ ಅವನನ್ನು ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತೇನೆ ಎನ್ನುವ ಮೂಲಕ ಪಂಕಜ್​ ಅಮ್ಮನ್ನನ್ನು ಒಪ್ಪಿಸಿದ್ರು...

 12ನೇ ವರ್ಷದಲ್ಲೇ ಪಂಕಜ್​ ಕಿರಿಯರ ವಿಭಾಗದಲ್ಲಿ ಮಿಂಚಿದ್ರು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. 17ನೇ ವರ್ಷದಲ್ಲಿ ವಿಶ್ವಚಾಂಪಿಯನ್ನಾದ್ರು. 9 ವಿಶ್ವ ಟೈಟಲ್​ ತಮ್ಮದಾಗಿಸಿಕೊಂಡಿರುವ ಅವರು ಸದ್ಯ ವಿಶ್ವದ ಸ್ಟಾರ್​ ಕ್ಯೂ ಆಟಗಾರ. 25 ವರ್ಷದವರೆಗೂ ಒಂದು ಪಾರ್ಟಿಯಲ್ಲೂ ಅವರು ಭಾಗವಹಿಸಿಲ್ಲ. ಕೆಟ್ಟ ಅಭ್ಯಾಸಗಳಂತೂ ಅವರಿಗೆ ಗೊತ್ತೆಯಿಲ್ಲ. ಅವರ ಆಟ, ಗುರು, ಮನೆ ಬಿಟ್ರೇ ಏನು ಗೊತ್ತಿಲ್ಲ. ಇಂದಿಗೂ ಅರವಿಂದ್​ ಸಾವುರ್​ ಅವರ ನೆಚ್ಚಿನ ಶಿಷ್ಯ ಪಂಕಜ್​ ಅಡ್ವಾಣಿ...

 ಪಂಕಜ್​ಗೆ ಅರವಿಂದ್​ ಸಾವುರ್​ ಕೇವಲ ಗುರು ಮಾತ್ರವಲ್ಲ. ಅವರ ತಂದೆಯಂತೆ ಬೆಳೆಸಿದ್ದಾರೆ. ಇಂದಿಗೂ ಪಂಕಜ್​ ಹೆದರುವುದು ಮತ್ತು ಬೈಯಿಸಿಕೊಳ್ಳುವುದು ಅವರ ಕೋಚ್​ ಹತ್ತಿರ. ಇಂದಿಗೂ ಪಂಕಜ್​ ಸೋತಾಗೊಮ್ಮೆ ತಿದ್ದಿ ಬುದ್ದಿ ಹೇಳುವವರು ಅರವಿಂದದ ಸಾವುರ್​. ತಮ್ಮ ಮಗಳಂತೆ, ಪಂಕಜ್​ರನ್ನು ಅವರು ಬೆಳೆಸಿದ್ದಾರೆ. ಪಂಕಜ್​ ಇವತ್ತಿಗೂ ತಮ್ಮ ಕುಟುಂಬದಂತೆ ಸಾವುರ್​ ಅವರ ಕುಟುಂಬದ ಜೊತೆ ಬೆರೆತ್ತಿದ್ದಾರೆ.

 ಅಡ್ವಾಣಿಗೆ ಮೆಂಟರ್​, ಕೋಚ್​​ ಎಲ್ಲವೂ ಅರವಿಂದ್​ ಸಾವುರ್​. ಪಂಕಜ್​ ವಿಶ್ವದ ಅನೇಕ ಶ್ರೇಷ್ಠ ಕೋಚ್​ಗಳನ್ನು ನೋಡಿದ್ದಾರೆ. ಆದರೆ ಅವಱರು ಸಾವುರ್​ಗೆ ಸಮವಲ್ಲ ಎನ್ನುತ್ತಾರೆ. ಪ್ರತಿ ಹುಡುಗರನ್ನು ತಮ್ಮ ಮಕ್ಕಳಂತೆ ಕಾಳಜಿ ಮಾಡುವ ಅದ್ಭುತ ಕೋಚ್​ ಅವರು. ಗುರಿ ತೋರಿದ ಗುರು. ಒಂದ್​ವೇಳೆ ಅರವಿಂದ್​ ಸಾವುರ್​ ಇಲ್ಲದಿದ್ರೇ ಪಂಕಜ್​ ಅಡ್ವಾಣಿಯೆಂಬ ಈ ಮಹಾನ್​ ಪ್ರತಿಭೆ ಸ್ನೂಕರ್​ ಮತ್ತು ಬಿಲಿಯರ್ಡ್ಸ್ ಲೋಕದ ಅನಭಿಷಕ್ತ ದೊರೆಯಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ...

 ಅರವಿಂದ್​ ಸಾವುರ್​ ಹೇಳುವ ಪ್ರಕಾರ ನನ್ನ ಶ್ರಮಕ್ಕಿಂತ ಪಂಕಜ್​ ನಿಷ್ಠೆ, ಶ್ರದ್ಧೆ ಅವರೊಬ್ಬ ಮಹಾನ್​ ಆಟಗಾರನ್ನಾಗಿ ಮಿಂಚಲು ಕಾರಣವಾಯ್ತು. ಪಂಕಜ್​ನಂತಹ ಅದ್ಭುತ ಶಿಷ್ಯ ಸಿಕ್ಕರೆ ಏನು ಬೇಕಾದ್ರು ಮಾಡಬಹುದು, ಅಂತಹ ಶಿಷ್ಯ ಎಲ್ಲರಿಗೂ ಸಿಗುವುದಿಲ್ಲ ಎಂತಾರೆ ಸಾವುರ್​. ಈ ಗುರು -ಶಿಷ್ಯರ ಶ್ರಮ-ಪ್ರೇಮ ಇಂದು ವಿಶ್ವವೇ ಮೆಚ್ಚುವಂತಾಗಿದೆ. ಏನೇ ಆಗಲಿ ಶಿಲೆಯನ್ನು ಮೂರ್ತಿಯಾಗಿ ಕೆತ್ತಿದ ಕಲೆಗಾರ ಅರವಿಂದ್​ ಸಾವುರ್​ ಅವರ ಶ್ರಮಕ್ಕೆ ಒಂದು ಹ್ಯಾಟ್ಸ್​ ಅಫ್​ ಹೇಳಲೆಬೇಕು...


ರವಿ.ಎಸ್