ಮಂಗಳವಾರ, ಜುಲೈ 15, 2014

ಪಂಕಜ್​ ಪ್ರವರ

ಪ್ರತಿ ಯಶಸ್ವಿ ಮನುಷ್ಯನ ಹಿಂದೆ ಒಂದು ನೋವಿನ ಕಥೆಯಿರುತ್ತೆ. ಸಂಕಷ್ಟಗಳನ್ನೆಲ್ಲಾ ಮೀರಿ ಬೆಳೆದರೆ ಮಾತ್ರ ಸಾಧನೆ ಸಾಧ್ಯ. ಇಂತಹ ಸಂಕಷ್ಟಗಳನ್ನೆಲ್ಲಾ ಮೀರಿದರೆ ಮಾತ್ರ ಸಾಧಕನ್ನಾಗಲು ಸಾಧ್ಯ. ಸ್ನೂಕರ್​ ವಿಶ್ವ ಚಾಂಪಿಯನ್​ ಪಂಕಜ್​ ಅಡ್ವಾಣಿ ಕೂಡ ಇದಕ್ಕೆ ಹೊರತಾಗಿಲ್ಲ. ಪಂಕಜ್​ ಇಂದು ಈ ಮಟ್ಟಕ್ಕೆ ಬೆಳೆಯಬೇಕಾದ್ರೆ ಒಂದು ನೋವಿನ ಕಥೆಯಿದೆ...

ಪಂಕಜ್​ ಅಡ್ವಾಣಿ ಚಿಕ್ಕವಯಸ್ಸಿನಲ್ಲೆ ತಮ್ಮ ತಂದೆಯನ್ನು ಕಳೆದುಕೊಂಡ್ರು. ಅಣ್ಣನ ಜೊತೆ ರಾಜ್ಯ ಬಿಲಿಯರ್ಡ್ಸ್​ ಸಂಸ್ಥೆಯಲ್ಲಿ ಬಂದು ಆಗಾಗ ಅಭ್ಯಾಸ ಮಾಡುತ್ತಿದ್ರು. ಆಗ 10 ವರ್ಷದ ಈ ಪೋರ, ಆಗಿನ ಬಿಲಿಯರ್ಡ್ಸ್​ ಸಂಸ್ಥೆ ಅಧ್ಯಕ್ಷ ಅರವಿಂದ್​ ಸಾವುರ್​ ಕಣ್ಣಿಗೆ ಬಿದ್ದ. ಆದಾಗ್ಲೇ ಹುಡುಗನ ಆಟ ನೋಡಿ  ಅವರನ್ನು ಸ್ನೂಕರ್​ ಆಡುವಂತೆ ಆ ಹುಡುಗಣ ಅಣ್ಣನ್ನು ಕೇಳಿಕೊಂಡ್ರು. ತಾಯಿಯ ಅನುಮತಿ ಕೇಳುವಂತೆ ಪಂಕಜ್​ ಮತ್ತು ಶ್ರೀ ಅಡ್ವಾಣಿ ತಿಳಿಸಿದ್ರು.. ಅಷ್ಟೇ ಪಂಕಜ್​ ಬದುಕಿಗೆ ಹೊಸ ತಿರುವು ಸಿಕ್ಕಿಬಿಡ್ತು...

ಪಂಕಜ್​ ತಾಯಿಯ ಪರವಾನಿಗೆ ಕೇಳಲು ಸ್ವತಃ ಅರವಿಂದ್​ ಸಾವುರ್​ ಅವರ ಮನೆಗೆ ಹೋದ್ರು. ಪಂಕಜ್​ ತಾಯಿ ಮೊದಲಿಗೆ ಅವರ ಮಾತಿಗೆ ಸಹಕರಿಸಲಿಲ್ಲ. ಅವನ್ನೊಬ್ಬ ಮಹಾನ್ ಪ್ರತಿಭೆ. ಅವನನ್ನು  ಮಹಾನ್​ ಆಟಗಾರನ್ನಾಗಿ ಮಾಡುವ ಜವಾಬ್ದಾರಿ ನನ್ನದು ನೀವು ಯಾವುದೇ ಹಣ ಕೊಡುವುದು ಬೇಡ. ನಾನೇ ಅವನನ್ನು ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತೇನೆ ಎನ್ನುವ ಮೂಲಕ ಪಂಕಜ್​ ಅಮ್ಮನ್ನನ್ನು ಒಪ್ಪಿಸಿದ್ರು...

 12ನೇ ವರ್ಷದಲ್ಲೇ ಪಂಕಜ್​ ಕಿರಿಯರ ವಿಭಾಗದಲ್ಲಿ ಮಿಂಚಿದ್ರು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. 17ನೇ ವರ್ಷದಲ್ಲಿ ವಿಶ್ವಚಾಂಪಿಯನ್ನಾದ್ರು. 9 ವಿಶ್ವ ಟೈಟಲ್​ ತಮ್ಮದಾಗಿಸಿಕೊಂಡಿರುವ ಅವರು ಸದ್ಯ ವಿಶ್ವದ ಸ್ಟಾರ್​ ಕ್ಯೂ ಆಟಗಾರ. 25 ವರ್ಷದವರೆಗೂ ಒಂದು ಪಾರ್ಟಿಯಲ್ಲೂ ಅವರು ಭಾಗವಹಿಸಿಲ್ಲ. ಕೆಟ್ಟ ಅಭ್ಯಾಸಗಳಂತೂ ಅವರಿಗೆ ಗೊತ್ತೆಯಿಲ್ಲ. ಅವರ ಆಟ, ಗುರು, ಮನೆ ಬಿಟ್ರೇ ಏನು ಗೊತ್ತಿಲ್ಲ. ಇಂದಿಗೂ ಅರವಿಂದ್​ ಸಾವುರ್​ ಅವರ ನೆಚ್ಚಿನ ಶಿಷ್ಯ ಪಂಕಜ್​ ಅಡ್ವಾಣಿ...

 ಪಂಕಜ್​ಗೆ ಅರವಿಂದ್​ ಸಾವುರ್​ ಕೇವಲ ಗುರು ಮಾತ್ರವಲ್ಲ. ಅವರ ತಂದೆಯಂತೆ ಬೆಳೆಸಿದ್ದಾರೆ. ಇಂದಿಗೂ ಪಂಕಜ್​ ಹೆದರುವುದು ಮತ್ತು ಬೈಯಿಸಿಕೊಳ್ಳುವುದು ಅವರ ಕೋಚ್​ ಹತ್ತಿರ. ಇಂದಿಗೂ ಪಂಕಜ್​ ಸೋತಾಗೊಮ್ಮೆ ತಿದ್ದಿ ಬುದ್ದಿ ಹೇಳುವವರು ಅರವಿಂದದ ಸಾವುರ್​. ತಮ್ಮ ಮಗಳಂತೆ, ಪಂಕಜ್​ರನ್ನು ಅವರು ಬೆಳೆಸಿದ್ದಾರೆ. ಪಂಕಜ್​ ಇವತ್ತಿಗೂ ತಮ್ಮ ಕುಟುಂಬದಂತೆ ಸಾವುರ್​ ಅವರ ಕುಟುಂಬದ ಜೊತೆ ಬೆರೆತ್ತಿದ್ದಾರೆ.

 ಅಡ್ವಾಣಿಗೆ ಮೆಂಟರ್​, ಕೋಚ್​​ ಎಲ್ಲವೂ ಅರವಿಂದ್​ ಸಾವುರ್​. ಪಂಕಜ್​ ವಿಶ್ವದ ಅನೇಕ ಶ್ರೇಷ್ಠ ಕೋಚ್​ಗಳನ್ನು ನೋಡಿದ್ದಾರೆ. ಆದರೆ ಅವಱರು ಸಾವುರ್​ಗೆ ಸಮವಲ್ಲ ಎನ್ನುತ್ತಾರೆ. ಪ್ರತಿ ಹುಡುಗರನ್ನು ತಮ್ಮ ಮಕ್ಕಳಂತೆ ಕಾಳಜಿ ಮಾಡುವ ಅದ್ಭುತ ಕೋಚ್​ ಅವರು. ಗುರಿ ತೋರಿದ ಗುರು. ಒಂದ್​ವೇಳೆ ಅರವಿಂದ್​ ಸಾವುರ್​ ಇಲ್ಲದಿದ್ರೇ ಪಂಕಜ್​ ಅಡ್ವಾಣಿಯೆಂಬ ಈ ಮಹಾನ್​ ಪ್ರತಿಭೆ ಸ್ನೂಕರ್​ ಮತ್ತು ಬಿಲಿಯರ್ಡ್ಸ್ ಲೋಕದ ಅನಭಿಷಕ್ತ ದೊರೆಯಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ...

 ಅರವಿಂದ್​ ಸಾವುರ್​ ಹೇಳುವ ಪ್ರಕಾರ ನನ್ನ ಶ್ರಮಕ್ಕಿಂತ ಪಂಕಜ್​ ನಿಷ್ಠೆ, ಶ್ರದ್ಧೆ ಅವರೊಬ್ಬ ಮಹಾನ್​ ಆಟಗಾರನ್ನಾಗಿ ಮಿಂಚಲು ಕಾರಣವಾಯ್ತು. ಪಂಕಜ್​ನಂತಹ ಅದ್ಭುತ ಶಿಷ್ಯ ಸಿಕ್ಕರೆ ಏನು ಬೇಕಾದ್ರು ಮಾಡಬಹುದು, ಅಂತಹ ಶಿಷ್ಯ ಎಲ್ಲರಿಗೂ ಸಿಗುವುದಿಲ್ಲ ಎಂತಾರೆ ಸಾವುರ್​. ಈ ಗುರು -ಶಿಷ್ಯರ ಶ್ರಮ-ಪ್ರೇಮ ಇಂದು ವಿಶ್ವವೇ ಮೆಚ್ಚುವಂತಾಗಿದೆ. ಏನೇ ಆಗಲಿ ಶಿಲೆಯನ್ನು ಮೂರ್ತಿಯಾಗಿ ಕೆತ್ತಿದ ಕಲೆಗಾರ ಅರವಿಂದ್​ ಸಾವುರ್​ ಅವರ ಶ್ರಮಕ್ಕೆ ಒಂದು ಹ್ಯಾಟ್ಸ್​ ಅಫ್​ ಹೇಳಲೆಬೇಕು...


ರವಿ.ಎಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ