ಫಿಫಾ ವಿಶ್ವಕಪ್ನ ಮಹಾಸಮರಕ್ಕೆ ಮರಕಾನ ಮೈದಾನ ಸಿದ್ಧವಾಗಿದೆ. ಒಂದೇಡೆ 1990ರ ವಿಶ್ವಕಪ್ನ ಸೋಲಿನ ಸೇಡು ತಿರಿಸಿಕೊಳ್ಳಲ್ಲು ಮೆಸ್ಸಿ ಆತುರಯುತ್ತಿದ್ದಾರೆ. ಮತ್ತೊಂದೆಡೆ ನಾಲ್ಕನೇ ಸಲ ಫುಟ್ಬಾಲ್ ವಿಶ್ವಕಪ್ ಎತ್ತಿಹಿಡಿಯಲು ಜರ್ಮನಿ ಸಿದ್ದವಾಗಿದೆ. ಉಭಯ ತಂಡಗಳು ಉತ್ತಮ ಫಾರ್ಮ್ನಲ್ಲಿದ್ದು, ವಿಶ್ವಕಪ್ನ ಹೈವೊಲ್ಟೇಜ್ ಪಂದ್ಯಕ್ಕೆ ಸಿದ್ದವಾಗಿವೆ....
ಫುಟ್ಬಾಲ್ ಜಾತ್ರೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ಫಿಫಾ ವಿಶ್ವಕಪ್ನ 64ನೇ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದೆ. ಬಲಿಷ್ಠ ಜರ್ಮನಿ, ಸ್ಟಾರ್ ಆಟಗಾರ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಎದುರಾಗಲಿವೆ. ಉಭಯ ತಂಡಗಳು ಗೆಲ್ಲುವ ವಿಶ್ವಾಸದಲ್ಲಿದ್ದು ಮದಗಜಗಳಂತೆ ಫೈನಲ್ ಕದನದಲ್ಲಿ ಹೋರಾಡಲಿವೆ...
ಈ ವಿಶ್ವಕಪ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ ಜರ್ಮನಿ. ಅತ್ಯಂತ ಬೆಸ್ಟ್ ಫಾರ್ವಡ್ ಆಟಗಾರರು ಮತ್ತು ಉತ್ತಮ ಡಿಫೆನ್ಸ್ ತಂಡದ ಪ್ಲಸ್ ಪಾಯಿಂಟ್ ಆಗಿದೆ. ಫಿಲಿಪ್ ಲ್ಹಾಮ್ ಅವರ ಸಾರಥ್ಯದಲ್ಲಿ ಜರ್ಮನ್ ತಂಡ ಇತಿಹಾಸ ಬರೆಯುವ ತವಕದಲ್ಲಿದೆ...
ಥಾಮಸ್ ಮುಲ್ಲರ್, ಮಿರೊಸ್ಲಾವ್ ಕ್ಲೋಸ್ ಜರ್ಮನಿ ತಂಡದ ಟ್ರಂಪ್ ಕಾರ್ಡ್. ಕ್ಲೋಸ್ ಅನುಭವ ಮತ್ತು ಮುಲ್ಲರ್ ಆಕ್ರಮಣಕಾರಿ ಆಟ ಅರ್ಜೆಂಟೀನಾಕೆ ತಲೆನೋವಾಗಲಿದೆ. ಟೋನಿ ಕ್ರೂಸ್ ಮತ್ತು ಆ್ಯಂಡ್ರೆ ಶ್ರೂಲ್ ಕೂಡ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದು ಜರ್ಮನ್ ಶಕ್ತಿ. ಗೋಲ್ ಕೀಪರ್ ಮ್ಯಾನ್ಯೂಲ್ ನ್ಯೂರ್ ಸಹ ಉತ್ತಮ ಫಾರ್ಮ್ನಲ್ಲಿದ್ದು. ಫೈನಲ್ ಪಂದ್ಯ ಗೆಲ್ಲಲು ಜರ್ಮನಿ ಸರ್ವ ರೀತಿಯಲ್ಲಿ ಸಿದ್ಧವಾಗಿದೆ. ಟೂರ್ನಿಯಲ್ಲಿ ಒಟ್ಟು 17 ಗೋಲ್ಗಳಿಸಿರುವ ಜರ್ಮನಿ ತಂಡ ಈ ವಿಶ್ವಕಪ್ನಲ್ಲಿ ಅತಿಹೆಚ್ಚು ಗೋಲ್ಗಳಿಸಿರುವ ತಂಡವಾಗಿದೆ. ಬ್ರೆಜಿಲ್ ವಿರುದ್ಧ 7-1 ಗೋಲ್ಗಳ ಜಯ, ಜರ್ಮನಿ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ...
ಅರ್ಜೆಂಟೀನಾ ತಂಡದ ಟ್ರಂಪ್ಕಾರ್ಡ್ ನಾಯಕ ಲಿಯೊನೆಲ್ ಮೆಸ್ಸಿ. ತಂಡ ಸಂಕಷ್ಟದಲ್ಲಿದಾಗೊಮ್ಮೆ ತಂಡಕ್ಕೆ ಆಸರೆಯಾಗುತ್ತಿರುವ ಸ್ಟಾರ್ ಆಟಗಾರ. ಹಲವು ಸಲ ಅರ್ಜೆಂಟೀನಾ ಜಯಕ್ಕೆ ಮೆಸ್ಸಿ ಆಟ ಕಾರಣವಾಗಿದೆ. ಅರ್ಜೆಂಟೀನಾ ರಕ್ಷಣಪಡೆ ಅದ್ಭುತವಾಗಿದೆ. ಉತ್ತಮ ಮಿಡ್ ಫೀಲ್ಡರ್, ಡಿಫೆಂಡರ್ ಹೊಂದಿರುವುದು ತಂಡದ ಶಕ್ತಿ. ಆದರೆ ಮೆಸ್ಸಿ ಬಿಟ್ಟರೆ ಬೇಱವ್ ಆಟಗಾರ ಗೋಲ್ಗಳಿಸುವಲ್ಲಿ ಹೆಚ್ಚಿನ ಸಫಲತೆ ಕಂಡಿಲ್ಲ...
ಉತ್ತಮ ಯೋಜನಬದ್ಧವಾಗಿ ಆಟವಾಡುವುದು ಮೆಸ್ಸಿ ಪಡೆಯ ಪ್ಲಸ್ಪಾಯಿಂಟ್. ಗೋಲ್ಕೀಪರ್ ಸರ್ಜಿಯಾ ರೊಮೆರೊ ಉತ್ತಮ ಫಾರ್ಮ್್ನಲ್ಲಿದ್ದಾರೆ. ಒಟ್ನಲ್ಲಿ ಅರ್ಜೆಂಟೀನಾ ಮಿಂಚಿನ ವೇಗದಲ್ಲಿ ಗೋಲ್ಗಳಿಸದೆಯಿದ್ರು. ಉತ್ತಮ ರಕ್ಷಣಪಡೆಯನ್ನು ಹೊಂದಿರುವುದು ಅದರ ಶಕ್ತಿಯಾಗಿದೆ...
ಉಭಯ ತಂಡಗಳು ಉತ್ತಮ ಫಾರ್ಮ್ನಲ್ಲಿವೆ. ಮೆಸ್ಸಿ 28 ವರ್ಷಗಳ ನಂತರ ಡಿಗೋ ಮರಡೋನರಂತೆ ವಿಶ್ವಕಪ್ ಗೆದ್ದು ಮೂರನೇ ಸಲ ವಿಶ್ವಕಪ್ ಎತ್ತಿಹಿಡಿಯುವ ವಿಶ್ವಾಸದಲ್ಲಿದ್ದಾರೆ. 1990ರ ವಿಶ್ವಕಪ್ ಫೈನಲ್ನಲ್ಲಿ ಜರ್ಮನಿ ವಿರುದ್ಧ ಸೋತ ಸೇಡನ್ನು ತಿರಿಸಿಕೊಳ್ಳುವ ಇರಾದೆಯಲ್ಲಿದೆ. ಆದ್ರೇ ಜರ್ಮನಿ ಮೆಸ್ಸಿ ಆಸೆ ಭಗ್ನಗೊಳಿಸಿ, ನಾಲ್ಕನೇ ಸಲ ವಿಶ್ವ ಚಾಂಪಿಯನ್ನಾಗಿ ಮೆರೆಯುವ ಭರವಸೆಯಲ್ಲಿದೆ. ಉಭಯ ತಂಡಗಳು ಫುಟ್ಬಾಲ್ ವಿಶ್ವಕಪ್ನಲ್ಲಿ ಹೊಸ ಇತಿಹಾಸ ಬರೆಯುವ ಹಾದಿಯಲ್ಲಿವೆ...
ರವಿ.ಎಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ