ಫಿಫಾ ವಿಶ್ವಕಪ್ನಲ್ಲಿ ಯಾವ್ ದೇಶ ಗೆಲ್ಲಲ್ಲಿ ಬಿಡಲಿ ತಮ್ಮ ಕ್ಲಬ್ ಆಟಗಾರರು ಮಿಂಚಬೇಕೆಂದು ಎಲ್ಲ ಕ್ಲಬ್ಗಳು ಬಯಸುತ್ತವೆ. ತಮ್ಮ ಕ್ಲಬ್ ಆಟಗಾರರ ಗೋಲ್, ಸ್ಕಿಲ್ ಪ್ರದರ್ಶನದ ಮೇಲೆ ಆಯಾ ಕ್ಲಬ್ಗಳು ಮತ್ತಷ್ಟೂ ಜೋಶ್ನಿಂದ ಅವರನ್ನು ಹುರಿದುಂಬಿಸುವದರೊಂದಿಗೆ. ಆಯಾ ಆಟಗಾರರಿಗೆ ಒಳ್ಳೆ ಸಂಭಾವನೆ ನೀಡುವ ಮೂಲಕ ಅವರನ್ನು ಸನ್ಮಾನಿಸುತ್ತವೆ. ಫಿಫಾ ವಿಶ್ವಕಪ್ನ ಕೆಲ ಕ್ಲಬ್ ರೋಚಕ ಲೆಕ್ಕಚಾರಗಳು ಇಲ್ಲಿವೆ ನೋಡಿ...
ಫುಟ್ಬಾಲ್ ಆಟಗಾರರಿಗೆ ಹೆಚ್ಚು ಆದಾಯ ಬರುವುದು ಕ್ಲಬ್ಗಳಿಂದ. ವರ್ಷದಲ್ಲಿ ದೇಶಕ್ಕಿಂತ ಹೆಚ್ಚು ಆಟಗಾರರು ಕ್ಲಬ್ಗೆ ಆಡ್ತಾರೆ. ಎಷ್ಟೋ ಕ್ಲಬ್ಗಳು ಅನೇ ಆಟಗಾರರನ್ನು ಸಣ್ಣ ವಯಸ್ಸಿನಿಂದಲೇ ತಮ್ಮ ಕ್ಲಬ್ ಸದಸ್ಯತ್ವ ಕೊಟ್ಟು ಬೆಳಸುತ್ತವೆ. ಈಗ ಇದೆ ಕ್ಲಬ್ಗಳು ತಮ್ಮ ಆಟಗಾರರು ವಿಶ್ವಕಪ್ ಪ್ರದರ್ಶನದ ಲೆಕ್ಕಚಾರದಲ್ಲಿ ತೊಡಗಿದ್ದು, ಯಾವ ಕ್ಲಬ್ ಬೆಸ್ಟ್ ಎಂಬ ಪ್ರಶ್ನೆಗೆ ಈ ಫಿಫಾ ವಿಶ್ವಕಪ್ ಸಹ ಉತ್ತರವಾಗಲಿದೆ...
ಈ ಸಲ ವಿಶ್ವಕಪ್ನಲ್ಲಿ ಹೆಚ್ಚು ಆಟಗಾರರು ಭಾಗವಹಿಸಿರುವುದು ಬೈರನ್ ಮುನಿಚ್ ಕ್ಲಬ್ನ ಆಟಗಾರರು ಒಟ್ಟು 10 ಜನ ಆಟಗಾರರು ಈ ಕ್ಲಬ್ನವರು ಈ ಸಲ ವಿಶ್ವಕಪ್ನಲ್ಲಿ ಭಾಗವಹಿಸಿದ್ದು, ಹೆಚ್ಚು ಕ್ಲಬ್ ಆಟಗಾರರು ಈ ಸಲ ಫುಟ್ಬಾಲ್ ಮಹಾ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ...
ಈ ವಿಶ್ವಕಪ್ ಅತಿಹೆಚ್ಚು ಭಾವಹಿಸಿದ ಕ್ಲಬ್ ಆಟಗಾರರು ಪಟ್ಟಿ ಹೀಗಿದೆ. ಬೈರನ್ ಮುನಿಚ್ ಕ್ಲಬ್ನ 10 ಜನ ಆಟಗಾರರು ಭಾಗವಹಿಸಿದ್ರೆ. ಅರೆಸ್ನೆಲ್ ಕ್ಲಬ್ ಏಳು ಜನ ಆಟಗಾರರು, ಚೆಲ್ಸಿಯಾ ಮತ್ತು ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್ನ ತಲಾ ಆರು ಸದಸ್ಯರು ಮತ್ತು ರಿಯಲ್ ಮ್ಯಾಡ್ರಿಡ್ನ ಐದು ಜನ ಆಟಗಾರರು ಭಾಗವಹಿಸಿದ್ದಾರೆ...
ಇನ್ನು ಅತಿಹೆಚ್ಚು ಗೋಲ್ ಹೊಡೆದಿರುವ ವಿಷದಲ್ಲೂ ಬೈರನ್ ಮುನಿಚ್ ತಂಡ ಅಗ್ರಸ್ಥಾನದಲ್ಲಿದೆ. ಒಟ್ಟು 14 ಗೋಲ್ ಈ ಕ್ಲಬ್ನ ಆಟಗಾರರಿಂದ ಬಂದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದ್ರೆ, ಮೆಸ್ಸಿ-ನೇಮರ್ ಪ್ರತಿನಿಧಿಸುವ ಬಾರ್ಸಿಲೋನ ಕ್ಲಬ್ನಿಂದ 10 ಗೋಲ್ ದಾಖಲಾಗಿದ್ದು ಈ ಕ್ಲಬ್ ಗೋಲ್ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ....
ಫಿಫಾ ವಿಶ್ವಕಪ್ನಲ್ಲಿ ಕ್ಲಬ್ಗಳಿಂದ ದಾಖಲಾದ ಗೋಲ್ಗಳ ಸಂಖ್ಯೆ ಹೀಗಿದೆ. ಬೈರನ್ ಮುನಿಚ್ ಒಟ್ಟು14 ಗೋಲು, ಬಾರ್ಸಿಲೋನ ತಂಡ 10 ಗೋಲ್, ಮ್ಯಾಂಚೆಸ್ಟರ್ ಯುನೈಟೆಡ್ 8, ರಿಯಲ್ ಮ್ಯಾಡ್ರಿಡ್ 6 ಮತ್ತು ಎ.ಎಸ್ ಮೊನ್ಯಾಕೊ ಕ್ಲಬ್ ಆಟಗಾರರಿಂದ ಒಟ್ಟು ಐದು ಗೋಲ್ ದಾಖಲಾಗಿವೆ...
ಇಷ್ಟೇ ಅಲ್ಲ ಇನ್ನೂ ಗೋಲ್ ಮಾಡಲು ಹೆಚ್ಚು ಪಾಸ್ ಕೊಟ್ಟ, ಸಹಕರಿಸಿದ ಆಟಗಾರರಿಗೂ ಹೆಚ್ಚು ಮಾನ್ಯತೆ ನೀಡಲಾಗುತ್ತೆ. ಫುಟ್ಬಾಲ್ನಲ್ಲಿ ಗೋಲ್ ಹೊಡೆಯುವವರಿಗಿಂತ, ಗೋಲ್ ಮಾಡಲು ನೆರವಾದವರಿಗೆ ಹೆಚ್ಚು ಮಹತ್ವ ಇಂತಹ ಪಾಸಿಂಗ್ನಲ್ಲಿ ಹೆಚ್ಚು ಸಹಕರಿಸಿದ ಆಟಗಾರರು ಕೂಡ ಬೈರನ್ ಮುನಿಚ್ ನವರಾಗಿದ್ದಾರೆ...
ಗೋಲ್ಗೆ ಸಹಕರಿಸಿದ ಆಟಗಾರರು. ಈ ಸಲ ಹೆಚ್ಚು ಗೋಲ್ ಹೊಡೆಯಲು ನೆರವಾದ ಆಟಗಾರರು ಸಹ ಬೈರನ್ ಮುನಿಚ್ ಕ್ಲಬ್ಗೆ ಸೇರಿದವರು. ಒಟ್ಟು ಬೈರೆನ್ ಮುನಿಚ್ ಕ್ಲಬ್ನ ಆಟಗಾರರು 14 ಗೋಲ್ ಹೊಡೆಯಲು ನೆರವಾಗಿದ್ದಾರೆ. ವೂಲ್ಫ್ಬರ್ಗ್ ಕ್ಲಬ್ನ ಆಟಗಾರರು 10 ಗೋಲ್ಗೆ ನೇರವಾದ್ರೆ, ವೇಲೆನ್ಸಿಯಾ ಕ್ಲಬ್ ಸದಸ್ಯರು 8 ಗೋಲ್ಗೆ ಪಾಸ್ ನೀಡಿದ್ದಾರೆ. ಬಾರ್ಸಿಲೋನಾ 6 ಮತ್ತು ಚೆಲ್ಸಿಯಾ ಕ್ಲಬ್ನವನರು 5 ಗೋಲ್ಗೆ ನೇರವಾಗಿದ್ದಾರೆ...
ಅತಿಹೆಚ್ಚು ಸಮಯ ಆಟವಾಡುವಲ್ಲು ಬೈರನ್ ಕ್ಲಬ್ ಆಟಗಾರರು ಸಫಲವಾಗಿದ್ದಾರೆ. ಈ ಫುಟ್ಬಾಲ್ ವಿಶ್ವಕಪ್ನಲ್ಲಿ ಹೆಚ್ಚು ಸಮಯ ಯಾವ ಕ್ಲಬ್ ಆಟಗಾರರು ಆಡಿದ್ರು ಎಂಬ ಅಂಕಿಅಂಶ ಕೂಡ ಇಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತೆ. ಆದರೆ ಈ ಸಲ ವಿಶ್ವಕಪ್ನಲ್ಲಿ ಇಂತಹವೊಂದು ಕೀರ್ತಿಗೆ ಭಾಜನವಾಗಿದ್ದು ಕೂಡ ಬೈರನ್ ಕ್ಲಬ್ನ ಆಟಗಾರರು...
ಹೆಚ್ಚು ಕಾಲ ಆಡಿದ ಕ್ಲಬ್ ಇಂತಿವೆ. ಬೈರನ್ ಮುನಿಚ್ ಕ್ಲಬ್ನ ಆಟಗಾರರು ಒಟ್ಟು 3742 ನಿಮಿಷ ಚೆಂಡನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಜುವೆಂಟುಸ್ ಕ್ಲಬ್ನ ಸದದಸ್ಯರು 3207 ನಿಮಿಷ ಚೆಂಡನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ರು. ಬಾರ್ಸಿಲೋನ ಕ್ಲಬ್ ಸದಸ್ಯರು ಒಟ್ಟು 3059 ನಿಮಿಷಗಳ ಕಾಲ ಚೆಂಡನ್ನು ಆಡುವ ಮೂಲಕ ಹೆಚ್ಚು ಕಾಲ ಚೆಂಡನ್ನು ತಮ್ಮ ಬಳಿಯಿಟ್ಟುಕೊಂಡ ಕೀರ್ತಿಗೆ ಪಾತ್ರರಾಗಿದ್ದಾರೆ...
ಕೇವಲ ಉತ್ತಮ ಪ್ರದರ್ಶನ ಮಾತ್ರ ಇಲ್ಲಿ ಕೌಂಟ್ ಆಗಲ್ಲ. ಯಾವ ಕ್ಲಬ್ನ ಆಟಗಾರರು ಹೆಚ್ಚು ಕಾರ್ಡ್ ಪಾತ್ರರಾದ್ರು ಎಂಬುದು ಇಲ್ಲಿ ಲೆಕ್ಕಕ್ಕೆ ಬರುತ್ತೆ. ಈ ಮೂಲಕ ಆಯಾ ಫ್ರಾಂಚೈಸಿಗಳ ಮಾನ ಕೂಡ ಹೋಗುತ್ತೆ ಹಾಗಾಗಿ ಈ ಅಂಶವೂ ಕೂಡ ವಿಶ್ವಕಪ್ನಲ್ಲಿ ಗಮನಸೆಳೆಯುತ್ತೆ, ರಿಯಲ್ ಮ್ಯಾಡ್ರಿಡ್ನ ಡಿಫೆಂಡರ್ಗಳು ಸ್ವಲ್ಪ ಉದ್ರೇಕರಾಗಿರುವುದರಿಂದ, ಈ ಸಲ ವಿಶ್ವಕಪ್ನಲ್ಲಿ ರಿಯಲ್ ಮ್ಯಾಡ್ರಿಡ್ನ ಆಟಗಾರರು ಹೆಚ್ಚು ಕಾರ್ಡ್ಗೆ ಗುರಿಯಾಗುವ ಮೂಲಕ ಕುಖ್ಯಾತಿಗೆ ಕಾರಣರಾದ್ರು...
ಹೆಚ್ಚು ಕಾರ್ಡ್ಗಳಿಗೆ ಪಾತ್ರವಾದ ಕ್ಲಬ್ ಆಟಗಾರರ ಪಟ್ಟಿಯಿಂತಿದೆ. ರಿಯಲ್ ಮ್ಯಾಡ್ರಿಡ್ ಕ್ಲಬ್ 14 ಕಾರ್ಡ್, ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರರಿಗೆ 10 ಕಾರ್ಡ್ ಮತ್ತು ಎಸಿ ಮಿಲಾನ್ ಕ್ಲಬ್ನವರಿಗೆ ಒಟ್ಟು ಎಂಟು ಕಾರ್ಡ್ ತೋರಿಸಲಾಗಿದೆ...
ಇವು ಈ ವಿಶ್ವಕಪ್ನ ಕೇಲ ಕ್ಲಬ್ ಲೆಕ್ಕಚಾರಗಳು. ಅನೇಕ ಆಟಗಾರರ ಪ್ರದರ್ಶನ ಆಯಾ ಕ್ಲಬ್ನ ಹಣೆಬರಹ ಮತ್ತು ಆಟಗಾರನ ಭವಿಷ್ಯ ನಿರ್ಧಸಿರುತ್ತದೆ ಹಾಗಾಗಿ ಯಾವ್ ತಂಡ ವಿಶ್ವಕಪ್ ಗೆಲ್ಲಲ್ಲಿ ಬಿಡಲಿ ಆಯಾ ಕ್ಲಬ್ಗಳ ಮಾತ್ರ ಇದರತ್ತ ಗಮನಹರಿಸುವುದಿಲ್ಲ. ತ್ಮಮ ಕ್ಲಬ್ನವರು ಮಿಂಚಲಿ ಎಂದಷ್ಟೇ ಅವರು ಬಯಸುತ್ತಾರೆ....
ರವಿ,ಎಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ