ಮಂಗಳವಾರ, ಜುಲೈ 15, 2014

Costly ಮ್ಯಾನೇಜರ್ಸ್

ಫಿಫಾ ವಿಶ್ವಕಪ್​ ಹಲವು ರೋಚಕ ಸಂಗತಿಗಳಿಗೆ ಕಾರಣವಾಗಿದೆ. ಫುಟ್ಬಾಲ್​ನ ಮಹಾನ್​ ಹಬ್ಬದಲ್ಲಿ ನಿಮ್ಮಗೆ ತಿಳಿದಿರದ ಅನೇಕ ಅಚ್ಚರಿಯ ಕಥೆಗಳಿವೆ. ಅತಿಹೆಚ್ಚು ಸಂಭಾವನೆ ಪಡೆಯುವ ಮ್ಯಾನೇಜರ್​ ಹೊಂದಿರುವ ಟಾಪ್​-3 ತಂಡಗಳು ವಿಶ್ವಕಪ್​ನಿಂದ ನಿರ್ಗಮಿಸಿವೆ. ಆ ತಂಡಗಳು ಯಾವು ಅಂತೀರಾ ಇಲ್ಲಿದೆ ನೋಡಿ ಆ ರೋಚಕ ವರದಿ....

ವಿಶ್ವಕಪ್​ನಲ್ಲಿ ಎಲ್ಲವೂ ಅದ್ಧೂರಿಯಾಗಿರುತ್ತೆ. ಹಾಗಾಗಿ ಇಲ್ಲಿ ಕೆಲಸ ಮಾಡುವ ಸಹ ಸಿಬ್ಬಂದಿಗಳಿಗೂ ಕೋಟಿ-ಕೋಟಿ ಹಣ ನೀಡುತ್ತಾರೆ. ಪ್ರತಿ ತಂಡದಲ್ಲೂ ಹೆಚ್ಚು ಆದ್ಯತೆ ನೀಡುವುದು ಮ್ಯಾನೇಜರ್​ಗಳಿಗೆ. ಭಾರತದಲ್ಲಿ ಒಬ್ಬ ಸ್ಟಾರ್​ ಕ್ರಿಕೆಟರ್​ಗೆ ನೀಡುವ ಸಂಭಾವನೆಗಿಂತ,  ನಾಲ್ಕೈದು ಪಟ್ಟು ಹೆಚ್ಚು ಹಣವನ್ನು  ಫುಟ್ಬಾಲ್​ ತಂಡದ ಮ್ಯಾನೇಜರ್​ಗಳು ಪಡೆಯುತ್ತಿದ್ದಾರೆ.....

ಅಯ್ಯೋ ಇದೇನಪ್ಪ ಭಾರತದ ಸ್ಟಾರ್​ ಕ್ರಿಕೆಟರ್​ಗಳಿಗಿಂತ ಫುಟ್ಬಾಲ್​ ತಂಡದ ಮ್ಯಾನೇಜರ್​​ಗಳಿಗೆ ಅಧಿಕ ಸಂಭಾವನೆ ಸಿಗುತ್ತೆ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸುವವರಿದ್ದಾರೆ. ಆದರೆ ಈ ಮಾತು ಸತ್ಯ. ಈ ವಿಶ್ವಕಪ್​ ಟಾಪ್​-3   ಕಾಸ್ಟ್ಲೀ ಮ್ಯಾನೇಜರ್​ಗಳಲ್ಲಿ ಅಗ್ರಸ್ಥಾನದಲ್ಲಿರುವುದು ರಷ್ಯಾದ ಮ್ಯಾನೇಜರ್​​. ಮೂಲತ ಇಟಲಿಯವರಾಗಿರುವ ಫ್ಯಾಬಿಯೋ ಕ್ಯಾಪೆಲ್ಲೊ, ರಷ್ಯಾ ರಾಷ್ಟ್ರೀಯ ಫುಟ್ಬಾಲ್​ ತಂಡದ ಕೋಚ್​. ಸದ್ಯ ಒಂದು ವರ್ಷಕ್ಕೆ ಇವರು 64 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ... ಫುಟ್ಬಾಲ್​ ಇತಿಹಾಸದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಮ್ಯಾನೇಜರ್​ ಎಂಬ ದಾಖಲೆ ಇವರ ಹೆಸರಲ್ಲಿದೆ...
 ಇನ್ನೂ ಅತಿಹೆಚ್ಚು ಸಂಭಾವನೆ ಪಡೆಯುವ ಎರಡನೇ ಮ್ಯಾನೇಜರ್​ ಇಂಗ್ಲೆಂಡ್​ ತಂಡದವರು. ರಾಯ್​​ ಹಾಡ್ಜ್​ಸನ್​ ಮೂಲತಃ ಇಂಗ್ಲೆಂಡ್​ನವರು. ಇಂಗ್ಲೆಂಡ್​ನ ಮ್ಯಾನೇಜರ್​ ಆಗಿರುವ ಇವರು ಒಂದು ವರ್ಷಕ್ಕೆ  36 ಕೋಟಿ ರೂಪಾಯಿ ಸಂಭಾವನೆ  ಪಡೆಯುತ್ತಾರೆ...

ಇಟಲಿಯ ಮಾಜಿ ಮಿಡ್​ ಫೀಲ್ಡರ್​ ಸೆಸಾರೆ ಪ್ರಾಂಡೇಲಿ ಸದ್ಯ ಇಟಲಿ ತಂಡದ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮ್ಯಾನೇಜರ್​ ಆಗಿರುವುದಕ್ಕೆ ಪ್ರತಿ ವರ್ಷಕ್ಕೆ ಇಟಲಿ ತಂಡ ಇವರಿಗೆ 26 ಕೋಟಿ ರೂಪಾಯಿ ಸಂಭಾವಣೆ ನೀಡುತ್ತದೆ.. ಫಿಫಾ ವಿಶ್ವಕಪ್​ನಲ್ಲಿ ಹೆಚ್ಚು ಹಣ ಪಡೆಯುವ ಮೂರನೇದುಭಾರಿ  ಮ್ಯಾನೇಜರ್​ ಇವರಾಗಿದ್ದಾರೆ...

 ಐಪಿಎಲ್​ನಲ್ಲಿ ಸ್ಟಾರ್​ ಕ್ರಿಕೆಟರ್​ ಪಡೆಯುವ ಸಂಭಾವನೆಗಿಂತ ಹೆಚ್ಚು ಮೂರು ತಂಡದ ಮ್ಯಾನೇಜರ್​​ಗಳು ಪಡೆಯುತ್ತಾರೆ. ಫಿಫಾ ವಿಶ್ವಕಪ್​ನ ಅತ್ಯಂತ ದುಭಾರಿ ಮ್ಯಾನೇಜರ್​ಗಳು ಇವರು. ಇಷ್ಟಾದ್ರು ಈ ಮೂರು ತಂಡಗಳು ಪ್ರಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆಯುವಲ್ಲಿ ವಿಫಲವಾದ್ವು. ಅನ್ನೋದು ಅಷ್ಟೇ ಗಮನಾರ್ಹ..
ಇನ್ನೂ ಈ ವಿಶ್ವಕಪ್​ನಲ್ಲಿ ಅತಿ ಕಮ್ಮಿ ಸಂಭಾವನೆ ಪಡೆಯುವ ಮ್ಯಾನೇಜರ್​ ಮೆಕ್ಸಿಕೊ ತಂಡದವರು. ಫಿಫಾ ವಿಶ್ವಕಪ್​ನಲ್ಲಿ ಅತಿಹೆಚ್ಚು ಆಕ್ಟಿವ್​ ಆಗಿರುವ ಮಿಗ್ವುಲ್​ ಹೆರೆರಾ, ಮೆಕ್ಸಿಕೊ ತಂಡದ ಮ್ಯಾನೇಜರ್​ ಆಗಿರುವುದಕ್ಕೆ ಅವರು ಪಡೆಯುವ ಸಂಭಾವನೆ, ವರ್ಷಕ್ಕೆ 1 ಕೋಟಿ 20 ಲಕ್ಷ. ಸದ್ಯ ವಿಶ್ವಕಪ್​ನಲ್ಲಿ ಭಾಗವಹಿಸಿರುವ 32 ತಂಡಗಳಲ್ಲಿ, ಅತಿಕಡಿಮೆ ಸಂಭಾವನೆ ಪಡೆಯುವ ಮ್ಯಾನೇಜರ್​ ಇವರಾಗಿದ್ದಾರೆ...
ತಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಆಯಾ ರಾಷ್ಟ್ರಗಳು ಕೋಟಿ-ಕೋಟಿ ಕೊಟ್ಟು ಮ್ಯಾನೇಜರ್​ಗಳನ್ನು ನೇಮಿಸಿದ್ರು. ಆ ತಂಡಗಳು 16ರ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿವೆ. ಕಡಿಮೆ ಸಂಭಾವನೆ ಪಡೆಯುವ ಮ್ಯಾನೇಜರ್​ಗಳನ್ನು ಹೊಂದಿರುವ  ತಂಡಗಳು ಪ್ರಿ ಕ್ವಾರ್ಟರ್​ಗೆ ಪ್ರವೇಶ ಪಡೆಯುವ ಮೂಲಕ ಈ ವಿಶ್ವಕಪ್​ನಲ್ಲಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿವೆ...

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ