ಮಂಗಳವಾರ, ಜುಲೈ 15, 2014

ಅಂಕಿಅಂಶ ಲೆಕ್ಕಚಾರ

ವಿಶ್ವಕಪ್​ ಗ್ರೂಪ್​ ಸ್ಟೇಜ್​ ಪಂದ್ಯ ಮುಗಿದ್ರು ಆ ನೆನಪುಗಳು ಇನ್ನೂ ಹಲವರ ಮನಸ್ಸಲ್ಲಿ ಮನೆಮಾಡಿವೆ. ಕೆಲ ಅಂಕಿಅಂಶಗಳ ಪ್ರಕಾರ ಕೆಲ ತಂಡಗಳು ಮಿಂಚುತ್ತಿವೆ. ನಾಕೌಟ್​ ಹಂತಕ್ಕೆ ಪ್ರವೇಶ ಪಡೆಯದ ಅನೇಕ ತಂಡಗಳು ಮಿಂಚಿವೆ. ಲೀಗ್​ ಹಂತದಲ್ಲಿ ದಾಖಲಾದ ಕೆಲ ರೋಚಕ ಅಂಕಿ ಅಂಶಗಳ ವಿವರ ಇಲ್ಲಿದೆ ನೋಡಿ..
ಫಿಫಾ ವಿಶ್ವಕಪ್​ ಲೀಗ್​ ಹಂತದ ಪಂದ್ಯಗಳಲ್ಲಿ ದಾಳಿ ನಡೆಸಿದ ಕುರಿತ ಅಂಕಿಅಂಶಗಳು ತುಂಬಾ ಅಚ್ಚರಿಕರವಾಗಿವೆ. ಬಲಿಷ್ಠ ತಂಡಗಳಿಗಿಂದ ಸಣ್ಣ-ಸಣ್ಣ ತಂಡಗಳೇ ಗಮನಸೆಳೆಯುವ ಪ್ರದರ್ಶನ ನೀಡಿವೆ. ಹೆಚ್ಚು ಅಕ್ರಮಣಕಾರಿ ಆಟವಾಡುವಲ್ಲಿ ಇವು ಯಶಸ್ವಿಯಾಗಿದೆ....

 ಲೀಗ್​ ಹಂತದ  ಅಟ್ಯಾಕಿಂಗ್​ ಅಂಕಿಅಂಶ ಈ ರೀತಿ ಇದೆ. ಒಟ್ಟು 1247 ಶಾಟ್​ಗಳು ಈ ಲೀಗ್​ನಲ್ಲಿ ಕಾಣಸಿಕ್ವು. ಅದರಲ್ಲಿ ಒಟ್ಟು 136 ಗೋಲ್​ಗಳು ದಾಖಲಾಗಿವೆ. 2.83 ಸರಾಸರಿಯಲ್ಲಿ ಗೋಲ್​ ದಾಖಲಾಗಿವೆ. ಇದರಲ್ಲಿ ಒಟ್ಟು ನಾಲ್ಕು ಸೆಲ್ಫ್​ ಗೋಲ್​ ದಾಖಲಾಗಿವೆ. ನಾಲ್ಕು ಗೋಲ್​ ಗಳಿಸುವ ಮೂಲಕ ಮೆಸ್ಸಿ, ನೇಯ್ಮರ್​ ಗೋಲ್ಡನ್​ ಬೂಟ್​ ರೇಸ್​ನಲ್ಲಿದ್ರು. ಇದರಲ್ಲಿ ಒಟ್ಟು 10 ಪೆನಾಲ್ಟಿ ಕಿಕ್​ ಸಿಕ್ಕಿದ್ದು, 9 ಗೋಲ್​​ ಆಗಿದ್ರೆ, 1 ಮಿಸ್​ ಆಗಿದೆ.. 62 ಶಾಟ್​ ಹೊಡೆಯುವ ಮೂಲಕ ಅತಿಹೆಚ್ಚು ಶಾಟ್ ಹೊಡೆದ ತಂಡ ಎಂಬ ಕೀರ್ತಿ ಫ್ರಾನ್ಸ್ಗೆ ಸಲ್ಲುತ್ತದೆ. ಅದೇ ಇರಾನ್​ ಅತಿ ಕಡಿಮೆ 2 ಶಾಟ್​ ಪ್ರಯತ್ನಿಸಿದೆ. 10 ಗೋಲ್​ ಹೊಡೆದಿರುವ ನೆದರ್​ಲ್ಯಾಂಡ್​ ಅತಿಹೆಚ್ಚು ಗೋಲ್​ ಹೊಡೆದ ತಂಡ ಎಂಬ ಕೀರ್ತಿಗೆ ಪಾತ್ರವಾಯ್ತು. ಮತ್ತೊಂದೆಡೆ ಒಂದು ಗೋಲ್​ ಗಳಿಸುವ ಮೂಲಕ ಲೀಗ್​ನಲ್ಲಿ ಕಡಿಮೆ ಗೋಲ್​ಗಳಿಸಿದ ತಂಡ ಎಂಬ ಕಾರಣಕ್ಕೆ ಇರಾಟ್​, ಹೊಂಡುರಾಸ್​ ಮತ್ತು ಕ್ಯಾಮರೂನ್​ ಕಾರಣವಾದ್ವು...

ಇನ್ನೂ ಗೌರವಯುತವಾಗಿ ಆಟವಾಡಿದ ತಂಡಗಳ ಸಾಲಿಗೆ ಹಲವು ಸಣ್ಣ-ಸಣ್ಣ ತಂಡಗಳೇ ಅಗ್ರಸ್ಥಾನದಲ್ಲಿವೆ. ಕಾರ್ಡ್​ ಪಡೆಯುವ ದೃಷ್ಟಿಯಲ್ಲಿ ಕೆಲ ರೋಚಕ ಮಾಹಿತಿ, ಈ ವಿಶ್ವಕಪ್​ನ್ನು ಮತ್ತಷ್ಟು ವಿಭಿನ್ನವಾಗಿಸುತ್ತದೆ...

 ಲೀಗ್​ ಹಂತದ  ಫೇರ್​  ಪ್ಲೇ ಆಟ ಈ ರೀತಿಯಿದೆ. ಪ್ರತಿ ಪಂದ್ಯದಲ್ಲಿ ಸರಾಸರಿ 0.19 ಪ್ರಮಾಣದಲ್ಲಿ ರೆಡ್​ ಕಾರ್ಡ್​ ತೋರಿಸಲಾಗಿದೆ. ಒಟ್ಟು 9 ಆಟಗಾರರಿಗೆ ರೆಡ್​ ಕಾರ್ಡ್​ ತೋರಿಸಲಾಯ್ತು. 128 ಸಲ ಹಳದಿ ಕಾರ್ಡ್​ ಬಳಸಲಾಗಿದ್ದು, ಸರಾಸರಿ ಪ್ರತಿ ಪಂದ್ಯಕ್ಕೆ 2.67 ಸಲ ಹಳದಿ ಕಾರ್ಡ್​ ಬಳಸಲಾಗಿದೆ. ವಿಶೇಷ ಎಂದರೆ ಫ್ರಾನ್ಸ್ ಮತ್ತು ಹೊಂಡುರಾಸ್​ ನಡುವಿನ ಪಂದ್ಯದಲ್ಲಿ 8 ಸಲ ಕಾರ್ಡ್​ಬಳಸಲಾಗಿದ್ದು, ಅತಿಹೆಚ್ಚು ಸಲ ಕಾರ್ಡ್​ ಬಳಸಿದ ಪಂದ್ಯ ಇದಾಗಿದೆ...

ಇನ್ನೂ ಲೀಗ್​ನಲ್ಲಿ ಅತ್ಯಂತ ರಕ್ಷಣಾತ್ಮವಾಗಿ ಆಟವಾಡಿದ ತಂಡ ಯಾವುದು ಎಂಬ ಕುತೂಹಲ ಎಲ್ಲರಲ್ಲಿರುತ್ತೆ. ಫಿಫಾ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ರಕ್ಷಣಾತ್ಮಕವಾಗಿ ಆಡಿದ ತಂಡ, ಚೆಂಡನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದವು ಮತ್ತು ಹೆಚ್ಚು ಗೋಲ್​ ತಡೆದ ಕೀರ್ತಿಗೆ ಪಾತ್ರವಾಗಿರುವುದು ಕೂಡ ಸಣ್ಣ ತಂಡಗಳು...
 ಫಿಫಾ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ರಕ್ಷಣಾತ್ಮಕ ಆಟದ ವಿವರ ಹೀಗಿದೆ. ಒಟ್ಟು 1561 ಸಲ ಚೆಂಡನ್ನು ಟ್ಯಾಕಲ್​ ಮಾಡಲಾಗಿದೆ. ಅದರಲ್ಲಿ ಅತಿಹೆಚ್ಚು 72 ಸಲ ಇರಾನ್​ ತಂಡ ಟ್ಯಾಕಲ್​ ಮಾಡಿದೆ. ಕಡಿಮೆ ಟ್ಯಾಕಲ್​ ಮಾಡಿರುವುದು ಬೆಲ್ಜಿಯಂ ತಂಡ. ಒಟ್ಟು 325 ಗೋಲ್​ ತಡೆಯಲಾಗಿದೆ. ಅದರಲ್ಲಿ 18 ಗೋಲ್​ಗಳನ್ನು ಈಕ್ವಾಡರ್​ ತಂಡವೊಂದೆ ರಕ್ಷಿಸಿದ್ದು ಹೆಚ್ಚು ಗೋಲ್​ ರಕ್ಷಿಸಿದ ಕೀರ್ತಿಗೆ ಪಾತ್ರವಾಗಿದೆ.  ಆದರೆ ಕಡಿಮೆ ಗೋಲ್​ ರಕ್ಷಿಸಿದ ತಂಡ ಬ್ರೆಜಿಲ್​,  ಮತ್ತು ಕ್ರೋಷಿಯಾ ಒಟ್ಟು 5 ಗೋಲ್​ಗಳನ್ನು ಈ ತಂಡಗಳು ರಕ್ಷಿಸಿವೆ...

 ಇವು ಈ ವಿಶ್ವಕಪ್​ ಲೀಗ್​ ಹಂತದ ಪಂದ್ಯಗಳಲ್ಲಿ ನೋಡ ಸಿಕ್ಕ ಕೆಲ ರೋಚಕ ಅಂಕಿ ಅಂಶಗಳು. ರಕ್ಷಣಾತ್ಮಕವಾಗಿ, ಫೇರ್​ ಪ್ಲೇ ಆಟವಾಡುವಲ್ಲಿ ಬಲಿಷ್ಠ ತಂಡಗಳು ವಿಫಲವಾದ್ವು. ಲೀಗ್​ ಹಂತದ ಕೆಲ ಸಣ್ಣ-ಸಣ್ಣ ತಂಡಗಳು ಹೊರಬಿದ್ರು. ಅವರ ವಿಶೇಷ ರಕ್ಷಣಾತ್ಮಕ ಆಟದಿಂದ ಗಮನಸೆಳೆದ್ವು...

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ