ಮಂಗಳವಾರ, ಜುಲೈ 29, 2014

ಸಾಮ್ಯತೆಯ ಲಾರ್ಡ್ಸ್ ಟೆಸ್ಟ್

ಲಾರ್ಡ್ಸ್​ನಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಗೆದ್ದಿದ್ದು ಹಲವು ರೋಚಕಗಳಿಗೆ ಕಾರಣವಾಗಿದೆ. ಕಪಿಲ್​ ದೇವ್​ ನಂತರ ಇಂತಹ ಸಾಹಸ ಮಾಡಿದ್ದು ಮಹಿ. ಈ ಮೂಲಕ ಹಲವು ಅಚ್ಚರಿಯ ಘಟನೆಗಳಿಗೆ ಕಾರಣರಾಗಿದ್ದಾರೆ. ಈ ದಾಖಲೆಯಲ್ಲಿ ಟೀಮ್​ನ ಅನೇಕ ಸದಸ್ಯರು ಪಾತ್ರರಾಗಿದ್ದು. ಹಲವು ರೀತಿಯಲ್ಲಿ ಈ ಗೆಲುವು ಭಾರತೀಯರಿಗೆ ರೋಮಾಂಚನವುಂಟು ಮಾಡುವಲ್ಲಿ ಯಶಸ್ವಿಯಾಗಿದೆ....

ಭಾರತ ತಂಡ ಐತಿಹಾಸಿಕ ಲಾರ್ಡ್ಸ್​ ಟೆಸ್ಟ್​ ಗೆದ್ದಿರುವುದು ಈಗ ಹೊಸ ಸಂತಸಕ್ಕೆ ಕಾರಣವಾಗಿದೆ. ಅದು ಗೆಲುವಿನ ಖುಷಿಯಿಂದಷ್ಟೆ ಅಲ್ಲ. ಎರಡು ಪಂದ್ಯಗಳಿಗಿರುವ ಸಾಮ್ಯತೆಯಿಂದಾಗಿ. 1986ರ ಪಂದ್ಯಕ್ಕೂ 2014ರ ಪಂದ್ಯಕ್ಕೂ ಅನೇಕ ಸಾಮ್ಯತೆಗಳನ್ನು ನಾವು ಕಾಣಬಹುದು. ಹೀಗಾಗಿ ಈ ಪಂದ್ಯ ಕಪಿಲ್​ ಡೆವಿಲ್ಸ್ ಮತ್ತು ಧೋನಿ ಬ್ರಿಗೇಡ್​ಗೆ ವಿಶೇಷ ಟೆಸ್ಟ್​ ಆಗಿದೆ.

ವಿಶ್ವಕಪ್​ ಗೆದ್ದ ನಾಯಕರು ಕಪಿಲ್​-ಧೋನಿ

1986 ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಗೆದ್ದ ನಾಯಕ ಕಪಿಲ್​ದೇವ್​. ವಿಶೇಷ ಎಂದರೆ ಕಪಿಲ್​ ಭಾರತಕ್ಕೆ ಮೊದಲ ವಿಶ್ವಕಪ್​ ಗೆದ್ದ ನಾಯಕ. 2014ರಲ್ಲಿ ಮಹಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ನಾಯಕ ಎಂದೆನಿಸಿಕೊಂಡ್ರು ವಿಶೇಷ ಎಂದರೆ ಧೋನಿ ಕೂಡ ವಿಶ್ವಕಪ್​ ಗೆದ್ದಿರುವ ಭಾರತದ ಎರಡನೇ ನಾಯಕ. ಸೋಜಿಗ ಅಂದರೆ ಇಬ್ಬರು ವಿಶ್ವಕಪ್​ ಗೆದ್ದ ಮೂರು ವರ್ಷದ ನಂತರ ಲಾರ್ಡ್ಸ್​ನಲ್ಲಿ ಟೆಸ್ಟ್​ ಜಯದ ರುಚಿ ಅನುಭವಿಸಿದ್ರು.

ಮೊದಲ ಇನ್ನಿಂಗ್ಸ್​ 9 ರನ್​ ಗಳಿಸಿದ ಬಿನ್ನಿ

ಈ ಟೆಸ್ಟ್​ನಲ್ಲಿ ಇನ್ನೊಂದು ಸಾಮ್ಯತೆಯಂದರೆ, ರೋಜರ್​ ಬಿನ್ನಿ-ಸ್ಟುವರ್ಟ್​ ಬಿನ್ನಿ ಅಪ್ಪ ಮಕ್ಕಳ ಆಟ. 1986ರಲ್ಲಿ ಲಾರ್ಡ್ಸ್​ನಲ್ಲಿ ಚೊಚ್ಚಲ ಟೆಸ್ಟ್​ ಆಡಿದ ರೋಜರ್​ ಬಿನ್ನಿ, ಮೊದಲ ಇನ್ನಿಂಗ್ಸ್​​​ನಲ್ಲಿ 19 ಬಾಲ್​ಗೆ 9 ರನ್​ಗಳಿಸಿದ್ರು. ಲಾರ್ಡ್ಸ್​ನಲ್ಲಿ ಮೊದಲ ಪಂದ್ಯವಾಡಿದ ಬಿನ್ನಿ ಕೂಡ ಪ್ರಥಮ ಇನ್ನಿಂಗ್ಸ್​ನಲ್ಲಿ 19 ಬಾಲ್​ಗೆ 9 ರನ್​ಗಳಿಸುವ ಮೂಲಕ ಅಚ್ಚರಿಗೆ ಕಾರಣರಾದ್ರು. ಅಪ್ಪನ ಹಾದಿಯಲ್ಲೇ ಮಗ ಸಾಗಿದ್ರು.

ಲಾರ್ಡ್ಸ್​ನಲ್ಲಿ ಮುಂಬೈ ಆಟಗಾರರ ಶತಕ

ಲಾರ್ಡ್ಸ್​ನಲ್ಲಿ ನಡೆದ  1986ರ ಟೆಸ್ಟ್​ ಹಾಗೂ 2014ರ ಟೆಸ್ಟ್​ನಲ್ಲಿ  ಶತಕ ದಾಖಲಿಸಿದ ಇಬ್ಬರು ಆಟಗಾರರು ಮುಂಬೈನವರು. 86ರಲ್ಲಿ ದಿಲೀಪ್​ ವೆಂಗ್​​ಸರ್ಕಾರ್​ ಶತಕ ದಾಖಲಿಸಿದ್ರೆ, 2014ರಲ್ಲಿ ಅಜಿಂಕ್ಯ ರಹಾನೆ ಶತಕ ದಾಖಲಿಸಿದ್ರು. ವಿಶೇಷವೆಂದ್ರೆ ಎರಡು ಶತಕ ಮೊದಲ ಇನ್ನಿಂಗ್ಸ್​ನಲ್ಲಿ ದಾಖಲಾಗಿದ್ವು.

5 ವಿಕೆಟ್​ ಪಡೆದ ‘ಶರ್ಮಾ’

V/O: ಅಷ್ಟೇ ಅಲ್ಲ 2014ರಲ್ಲಿ  ಇಶಾಂತ್​ ಶರ್ಮಾ ಐದು ಪ್ಲಸ್​ ವಿಕೆಟ್​ ಪಡೆದು ಭಾರತದ ಜಯದ ರೂವಾರಿಯಾದ್ರು. 86ರಲ್ಲಿ ಚೇತನ್​ ಶರ್ಮಾ ಐದು ವಿಕೆಟ್​ ಉರುಳಿಸಿ  ಇಂಗ್ಲೆಂಡ್​ ಗೆಲುವಿಗೆ ಅಡ್ಡಿಯಾಗಿದ್ರು. ವಿಶೇಷ ಎಂದರೆ ಇಬ್ಬರ  ಸರ್​ ನೇಮ್​  ಶರ್ಮಾ.

 86ರ ಫಿಫಾ ಫೈನಲ್​ನಲ್ಲಿ ಸೆಣಸಿದ್ದ ಜರ್ಮನಿ-ಅರ್ಜೆಂಟೀನಾ
ಎಲ್ಲದಕ್ಕಿಂತ ಸೋಜಿಗದ ಸಂಗತಿಯೆಂದರೆ, 1986ರಲ್ಲಿ ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಸೆಣಸಿದ್ದು ಇದೇ ಜರ್ಮನಿ-ಅರ್ಜೆಂಟೀನಾ, ಈ ಸಲ ಫಿಫಾ ಫೈನಲ್​ನಲ್ಲಿ ಸೆಣಸಿದ ಟೀಮ್​ ಕೂಡ ಇವೇ ಆಗಿದ್ವು. ವಿಶೇಷ ಎಂದರೆ ಎರಡು ಸಲ ಭಾರತ ಲಾರ್ಡ್ಸ್​ ಟೆಸ್ಟ್​ ಗೆಲ್ಲುವ ಮೊದಲೇ ಫಿಫಾ ವಿಶ್ವಕಪ್​ ಮುಗಿದು ಹೋಗಿತ್ತು.

ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಭಾರತದ ಗೆಲುವು ಅದ್ಭುತ ಎಂದೆನಿಸಲು ಕೇವಲ ಗೆಲುವೊಂದೇ ಕಾರಣವಲ್ಲ. ಗೆದ್ದ ಸಮಯದಲ್ಲಿ ಅನೇಕ ಸಂಗತಿ, ಸನ್ನಿವೇಶಗಳು ಒಂದೇ ರೀತಿಯಾಗಿದ್ವು. ಕಾಲವು ಕೂಡ ಭಾರತದ ಜೊತೆಗಿತ್ತು ಎಂಬುವುದು ಅಷ್ಟೇ ಸತ್ಯ.

ರವಿ.ಎಸ್​, ಸ್ಪೋರ್ಟ್ಸ್​ ಬ್ಯೂರೋ ಸುವರ್ಣ ನ್ಯೂಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ