ಮಂಗಳವಾರ, ಜುಲೈ 15, 2014

ಈ ಐಪಿಎಲ್​ನಲ್ಲಿ ಹಲವು ಅದ್ಭುತ ಪ್ರದರ್ಶನಗಳು ಮೂಡಿ ಬಂದಿವೆ. ಆದರೆ ಆದರಲ್ಲಿ ಕೆಲವೆ ಕೆಲವು ಕೊನೆತನಕ ನೆನಪಿಡಲು ಸಾಧ್ಯ. ಅಂತಹದ್ರಲ್ಲಿ ಹೆಚ್ಚು ಗಮನೆಸೆಳೆಯುವವು ಯುವರಾಜ್​ ಸಿಂಗ್​, ಎಬಿ ಡಿವಿಲಿಯರ್ಸ್​ ಮತ್ತು ಕೋರೆ ಅಂಡರಸ್​ನ್​ ಎಂದಿಗೂ ಮರೆಯಲು ಸಾಧ್ಯವಿಲ್ಲ...

 ಹೌದು ಈ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಆರ್​ಸಿಬಿ ತಂಡ ವಿಫಲವಾಗಿದೆ. ಆದರೆ ಆರ್​ಸಿಬಿ ತಂಡದ ಇಬ್ಬರು ಬ್ಯಾಟ್ಸ್​ಮನ್​ಗಳು ಅಬ್ಬರದ ಆಟವಾಡುವ ಮೂಲಕ ತಂಡದ ಗೆಲುವಿಗೆ ಕಾರಣವಾದ್ರು. ಸೋಲಿನ ಸುಳಿಯಲ್ಲಿದ್ದ ಆರ್​ಸಿಬಿಗೆ ಗೆಲುವಿನ ರುಚಿ ತೋರಿಸುವಲ್ಲಿ ಈ ಬೆಸ್ಟ್​ ಇನ್ನಿಂಗ್ಸ್​ ಸಹಾಯವಾಯ್ತು...

 ಸನ್​ರೈಸರ್ಸ್​ ವಿರುದ್ಧ ಎಬಿ ಡಿವಿಲಿಯರ್ಸ್ ಶೈನ್
ಹೈದ್ರಾಬಾದ್​ ತಂಡದ ವಿರುದ್ಧ ಡಿವಿಲಿಯರ್ಸ್​ ಆಟ ಈ ಐಪಿಎಲ್​ನ ಅತ್ಯಂತ ಬೆಸ್ಟ್​ ಇ್ನನಿಂಗ್ಸ್​ಗಳಲ್ಲೊಂದು. ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಸನ್​ರೈಸರ್ಸ್​, ಆರ್​ಸಿಬಿಗೆ 155 ರನ್​ ಟಾರ್ಗೆಟ್​ ನೀಡ್ತು. ಆರ್​ಸಿಬಿ ಆರಂಭದಲ್ಲೇ ಮುಗ್ಗರಿಸಿತು. 59 ರನ್​ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಆರ್​ಸಿಬಿ ಪಾಲಿಗೆ ಆಶಾಕಿರಣವಾಗಿ ಬಂದದ್ದು ಎಬಿಡಿ...
ಸಂಪೂರ್ಣ ತಂಡದಲ್ಲಿದ್ದ ಪ್ರಮುಖ ಆಟಗಾರರೆಲ್ಲ ಪೇವಿಲಿಯನ್​ ಸೇರಿದ್ರು. ಆದರೆ ಎಬಿಡಿ ಮಾತ್ರ ಒಂದೇಡೆ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಹೈದ್ರಾಬಾದ್​ಗೆ ಶಾಕ್​ ನೀಡಿದ್ರು. ಡೇಲ್​ ಸ್ಟೈನ್​ ಒಂದೇ ಓವರ್​ನಲ್ಲಿ 24 ರನ್​ಗಳಿಸುವ ಮೂಲಕ ಸನ್​​ರೈಸರ್ಸ್ ಗೆಲುವಿನ ಕನಸಿಗೆ ಬ್ರೇಕ್​ ಹಾಕಿದ್ರು.. ಸೋಲಿನ ಸುಳಿಯಲ್ಲಿದ್ದ ಆರ್​ಸಿಬಿ ಭರ್ಜರಿ ಜಯ ತಂದುಕೊಟ್ರು...

 ಅಮೋಘ ಆಟವಾಡಿದ ಎಬಿಡಿ ಅಜೇಯ 89 ರನ್​ಗಳಿಸುವ ಮೂಲಕ ಮಿಂಚಿದ್ರು. 217 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜೊತೆ-ಜೊತೆಗೆ ಒಂದು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ನೀಡಿದ್ರು....

ದೆಹಲಿ ವಿರುದ್ಧ ಯುವರಾಜ್​ ಘರ್ಜನೆ

 ಬೆಂಗಳೂರಿನಲ್ಲಿ ನಡೆದ ದೆಹಲಿ ಡೇರ್​ಡೇವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದು ಬ್ಯಾಟಿಂಗ್​ ಆರಿಸಿಕೊಳ್ತು. ಆದರೆಸ ಅಂದುಕೊಂಡಂತೆ ಆರ್​ಸಿಬಿ ಆಟಗಾರರು ಸಿಡಿಯಲಿಲ್ಲ. 107ರನ್​ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿ ಸಿಲುಕಿತು. ನಿಧಾನ ರನ್​ಗತಿಯಲ್ಲಿ ಆಟಸಾಗಿತ್ತು. ಮಂದಗತಿಯಿಂದ ಸಾಗುತ್ತಿದ ಆರ್​ಸಿಬಿಗೆ ಭರ್ಜರಿ ಆಟದ ಝಲಕ್​ ತೋರಿಸಿದ್ದೆ ಯುವರಾಜ್​ ಸಿಂಗ್​.
ಬೃಹತ್​ ಟಾರ್ಗೆಟ್​ ನೀಡುವ ಪ್ರಯತ್ನದಲ್ಲಿದ ಆರ್​ಸಿಬಿಗೆ ಆಸರೆಯಾದವರು ಯುವರಾಜ್​ ಸಿಂಗ್​. ಸಿಡಿಲಬ್ಬರದ ಆಟವಾಡಿದ ಅವರು ಮೈದಾನದ ತುಂಬೆಲ್ಲಾ ಅಮೋಘ ಹೊಡೆತಗಳಿಂದ ಮಿಂಚಿದ್ರು. ಕೇವಲ 29 ಬೌಲ್​ನಲ್ಲಿ ಅಜೇಯ 68 ರನ್​ ದಾಖಲಿಸಿದ ಯುವರಾಜ್​ ಸಿಂಗ್​ ಕೊನೆಯ ಓವರ್​ಗಳಲ್ಲಿ ಪ್ರತಿ ಓವರ್​ಗೆ 16ರ ರನರೇಟ್​ನಲ್ಲಿ ರನ್​ ದಾಖಲಿಸಿದ್ರು. ಆರ್​ಸಿಬಿ 4 ವಿಕೆಟ್​ ನಷ್ಟಕ್ಕೆ 186 ರನ್​ಗಳಿಸುವಲ್ಲಿ  ಸಹಾಯವಾದ್ರು. ಆರ್​ಸಿಬಿ 16 ರನ್​ಗಳಿಂದ  ಆ ಪಂದ್ಯವನ್ನು ಗೆಲ್ಲಲ್ಲು ಯುವಿ ಬ್ಯಾಟಿಂಗ್​ ಕಾರಣವಾಯ್ತು...

 ರಾಜಸ್ಥಾನ್​ ವಿರುದ್ಧ ರಾಯಲ್​ ಆಟವಾಡಿದ ಅಂಡರ್​ಸನ್​

ಈ ಐಪಿಎಲ್​ನ ಅತ್ಯಂತ ಕುತೂಹಲ ಕೆರಳಿಸಿದ ಆಟಗಾರ ನ್ಯೂಜಿಲೆಂಡ್​ನ ಆಲ್​ ರೌಂಡರ್​ ಕೋರೆ ಅಂಡರಸನ್​. ನಾಲ್ಕುವರೆ ಕೋಟಿಗೆ ಮುಂಬೈ ತಂಡದ ಪಾಲಾದ ಅಂಡರ್​ಸನ್​ ತಮ್ಮ ನಿಜವಾದ ಆಟವನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದ್ರು. ಸಂಪೂರ್ಣ ಲೀಗ್​ ಪಂದ್ಯಗಳಲ್ಲಿ ಅಂಡರಸನ್​ ಆಟ ಹೇಳಿಕೊಳ್ಳುವಂತಿರಲಿಲ್ಲ. ಅವರ ಸಾಮರ್ಥ್ಯ ತಕ್ಕಂತೆ ಅಬ್ಬರಿಸುವಲ್ಲಿ ವಿಫಲವಾಗಿದ್ದ ಅವರು, ರಾಜಸ್ಥಾನ್ ವಿರುದ್ದ ತಮ್ಮ ನೈಜ ಆಟ ಪ್ರದರ್ಶಿಸುವ ಮೂಲಕ, ತಾವೊಬ್ಬ ಮ್ಯಾಚ್​ವಿನ್ನರ್​ ಎಂಬುವುದನ್ನು ತೋರಿಸಿಕೊಟ್ರು...
ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್​ ರಾಯಲ್ಸ್ 190 ರನ್​ಗಳ ಟಾರ್ಗೆಟ್​ ನೀಡಿತ್ತು. ವಿಶೇಷ ಎಂದರೆ ಈ ಎಲಿಮಿನೇಟರ್​ ರೌಂಡ್​ನಿಂದ ಕ್ವಾಲಿಫೈಯರ್​ಗ ಅರ್ಹತೆ ಪಡೆಯಬೇಕಾದ್ರೆ,  ಮುಂಬೈ ಕೇವಲ 14.3 ಓವರ್​ನಲ್ಲಿ 190 ರನ್​ಗಳಿಸಬೇಕಿತ್ತು. ಅಸಾಧ್ಯವಾದ ಗುರಿಯ್ನು ಬೆನ್ನತ್ತಿದ್ದ ಮುಂಬೈ 61 ರನ್​ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಆದರೆ ಒಂದೇಡೆ ಅಬ್ಬರದ ಆಟವಾಡುತ್ತಿದ್ದ ಅಂಡರ್​ಸನ್​ ಮುಂಬೈ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ರು...
 ರಾಜಸ್ಥಾನ್​ ರಾಯಲ್ಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಅಂಡರ್​ಸನ್ ತಮ್ಮ ಅತ್ಯದ್ಭುತ ಆಟದಿಂದ ಎಲ್ಲರ ಗಮನಸೆಳೆದ್ರು. ರಾಜಸ್ಥಾನ್​ ರಾಯಲ್ಸ್ ಬೌಲರ್​ಗಳ ಪಾಲಿಗೆ ಯಮನಂತೆ ಕಾಡಿದ್ರು. ಮೈದಾನದ ತುಂಬೆಲ್ಲಾ ಬೌಂಡರಿಗಳ ಸುರಿಮಳೆಗೈದ್ರು. ಕೇವಲ 44 ಬೌಲ್​ಗಳಲ್ಲಿ ಆಕರ್ಷಕ ಅಜೇಯ 95 ರನ್​ಗಳಿಸುವ ಮೂಲಕ ಮುಂಬೈಗೆ ಜಯ ತಂದು ಕೊಟ್ರು.. ರಾಜಸ್ಥಾನ್​​ ಕ್ವಾಲಿಫೈಯರ್​ ಆಸೆಗೆ ತಣ್ಣಿರು ಹಾಕಿದ್ರು.. ನಿರ್ಣಾಯಕ ಪಂದ್ಯವನ್ನು ಗೆಲ್ಲಿಸಿಕೊಡುವ ಮೂಲಕ, ಮುಂಬೈ ತಂಡದ ಕ್ವಾಲಿಫೈಯರ್​ಗೆ ಏರುವ ಹಗಲುಗನಸನ್ನು ನನಸಾಗಿಸಿದ್ರು...

ಕ್ರಿಕೆಟ್​ನಲ್ಲಿ ಯಾವುದು ಅಸಾಧ್ಯವಲ್ಲ ಎಂಬುದನ್ನು ಕೋರೆ ಅಂಡರಸನ್​ ತಮ್ಮ ಬ್ಯಾಟಿಂಗ್​ನಿಂದ ತೋರಿಸಿಕೊಟ್ರು. ಮನಮೋಹಕ ಆಟ, ಗೆಲ್ಲುವ ವಿಶ್ವಾಸದಿಂದಲೇ ಮೈದಾನಕ್ಕೀಳಿದ ಅವರು, ಗೆಲುವು ತಂದುಕೊಡುವಲ್ಲಿ ಸಫಲವಾದ್ರು. ಮುಂಬೈ ಅವರನ್ನು ಖರೀದಿಸಿದ್ದು ಉತ್ತಮ ನಿರ್ಧಾರ ಎಂಬುದನ್ನು ಅವರ ಆಟ ಸಾಭಿತುಗೊಳಿಸಿತು..

ಕೆಲ ಅತ್ಯದ್ಭುತ ಇನ್ನಿಂಗ್ಸ್​ಗಳಿಂದ  ತಮ್ಮ ತಂಡಗಳಿಗೆ ಅಮೋಘ ಜಯ ತಂದು ಕೊಟ್ಟ ಪ್ರಮುಖ ಬೆಸ್ಟ್​ ಇನ್ನಿಂಗ್ಸ್​ಗಳಿವು. ಬೆಸ್ಟ್ ಇನ್ನಿಂಗ್ಸ್​ ಗುಡ್​ ಮ್ಯಾಚ್​​ ಫಿನಿಶರ್​ ಎಂದು ಖ್ಯಾತಿಗಳಿಸಿರುವ ಈ ಆಟಗಾರರು ತಮ್ಮ ಮನಮೋಹಕ ಆಟದಿಂದ ಅಸಾಧ್ಯವಾದದನ್ನು ಸಾಧ್ಯವಾಗಿಸಿ ತೋರಿಸಿದ ಕೆಲ ಉದಾಹರಣೆಗಳು ಬೆಸ್ಟ್ ಇನ್ನಿಂಗ್ಸ್​ಗಳು ಇವಾಗಿವೆ...

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ