ಮಂಗಳವಾರ, ಜುಲೈ 22, 2014

ಆಂಗ್ಲರಿಗೆ ಓವಲ್​ ಪಿಚ್ ಶಾಪ

ವಿಶ್ವದ ಎಲ್ಲ ಕ್ರಿಕೆಟಿಗರು ಪಿಚ್​ ಎಂದರೆ ಗರ್ಭಗುಡಿಯಂತೆ ಪೂಜಿಸುತ್ತಾರೆ. ಅನೇಕ ಆಟಗಾರರು ಬ್ಯಾಟಿಂಗ್​ ಮುನ್ನ ಪಿಚ್​ನ ನಮಸ್ಕರಿಸುತ್ತಾರೆ. ಯಶಸ್ಸಿನ ನಂತರ ಪಿಚ್​ನ ಸ್ಪರ್ಶಿಸಿ ಥ್ಯಾಂಕ್ಸ್​ ಹೇಳುವ ಪರಿಪಾಟ ಎಲ್ಲೆಡೆ ಕಾಣಬಹುದು. ಆದರೆ ಇಂಗ್ಲೆಂಡ್​ ಆಟಗಾರರು ಮಾಡಿದ ಒಂದು ತಪ್ಪು ಅವರಿಗೆ ಮಾರಕವಾಗಿದೆ. ಪಿಚ್​ಗೆ ಅವಮಾನಿಸಿದ ಇಂಗ್ಲೆಂಡ್​ ಲಾರ್ಡ್ಸ್​ ಟೆಸ್ಟ್​ ಸೋತಿದೆ.......

ಕಳೆದ  9 ಟೆಸ್ಟ್​ಗಳಿಗಿಂತ ಮುಂಚೆ ಇಂಗ್ಲೆಂಡ್​ ತಂಡ ವಿಶ್ವ ಟೆಸ್ಟ್​ ಱಂಕಿಂಗ್​ನಲ್ಲಿ ನಂಬರ್​ ವನ್​ ಸ್ಥಾನದಲ್ಲಿತ್ತು. ಯಾವಾಗ ಇಂಗ್ಲೆಂಡ್​ ಆಟಗಾರರು ದಿ ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೋ ಅಲ್ಲಿಂದ ಅವರ ಹಣಬರಹವೇ ಬದಲಾಗಿ ಹೋಯ್ತು. ಅಗ್ರಸ್ಥಾನದಲ್ಲಿದ್ದ ತಂಡ, ಆ ಘಟನೆ ನಂತರ ಒಂದು ಜಯ ದಾಖಲಿಸಿಲ್ಲ. ಈಗ್ಲೂ ಗೆಲುವು ಎಂಬುವುದು ಆಂಗ್ಲರಿಗೆ ಗಗನ ಕುಸುಮವಾಗಿದೆ.

 ವಿಶ್ವದ ಯಾವುದೇ ಶ್ರೇಷ್ಠ ಆಟಗಾರನಿರಲಿ, ಅವರಿಗೆ ಕೋಚ್ ಕಲಿಸುವ ಮೊದಲ ಪಾಠ, ಪಿಚ್​ನ ಗೌರವಿಸುವುದು. ಇಂತಹ ವಿಷಯದಲ್ಲಿ ಏಷ್ಯಾ ಉಪಮಹಾದ್ವೀಪದ ಎಲ್ಲ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರು ಪಿಚ್​ನ ದೇವರಂತೆ ಪೂಜಿಸುತ್ತಾರೆ. ಭಾರತೀಯರು, ಲಂಕನ್ನರು, ಆಡುವ ಮುಂಚೆ ಪಿಚ್​ನ ನಮಸ್ಕರಿಸಿದ್ರೆ, ಬಾಂಗ್ಲಾ ಮತ್ತು ಪಾಕ್​ ಆಟಗಾರರು ಪಿಚ್​ನಲ್ಲಿ ನಮಾಜ್​ ಬಿದ್ದು ಮುತ್ತಿಕ್ಕಿ ಖುಷಿ ಪಡ್ತಾರೆ.

 ಸನತ್​ ಜಯಸೂರ್ಯ, ರಾಹುಲ್​ ದ್ರಾವಿಡ್​, ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ಶೇನ್​ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್​ ಎಲ್ಲ ಆಟಗಾರರು ಪಿಚ್​ನ ದೇವರಂತೆ ಪೂಜಿಸಿದವರು. ಪಾಕ್​ನ ಆಟಗಾರರು ಇದಕ್ಕೆ ಹೊರತಾಗಿಲ್ಲ. ವಿದೇಶಿ ಆಟಗಾರರು ಕೂಡ ಅಷ್ಟೇ ಪ್ರತಿ ಯಶಸ್ಸಿನ ನಂತರ ಪಿಚ್​ಗೆ ಅವರದೇಯಾದ ರೀತಿಯಲ್ಲಿ ಒಂದು ಥ್ಯಾಂಕ್ಸ್​ ಹೇಳುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಅದು ಆಟಗಾರರು ಪಿಚ್​ಗೆ ತೂರುವ ಗೌರವ. ಇದು  ಸಭ್ಯರ ಆಟದ ಸಭ್ಯತೆ ಕೂಡ ಹೌದು.

 ಸಚಿನ್​ ತಮ್ಮ ವಿದಾಯದ ಟೆಸ್ಟ್​ನ ಆರಂಭದಲ್ಲಿ ಪಿಚ್​ ಮುಟ್ಟಿ ನಮಸ್ಕರಿಸಿದ್ರು. ಭಾರತ ಗೆದ್ದ ಕೂಡಲೇ ಅದೇ ಪಿಚ್​ನಲ್ಲಿ ಅಡ್ಡ ಬಿದ್ದು ನಮಸ್ಕರಿಸಿದ್ರು. ನಾನು ಈ ಪರಿ ಬೆಳೆಯುವುದಕ್ಕೆ ಕಾರಣ ಈ ಪಿಚ್​ಗಳು. ಪಿಚ್ ನನ್ನ ಮೇಲೆ ಹೆಚ್ಚು ಹಾರೈಸಿದವು, ಕೃಪೆ ತೋರಿದ್ವು. ಹಾಗಾಗಿ ನಾನು ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ಸಹಕಾರಿ ಆಯ್ತು. ಎನ್ನುವ ಮೂಲಕ ಪಿಚ್​ಗಳ ಬಗ್ಗೆ ಅವರಿಗಿರುವ ಗೌರವವನ್ನು ಹೊರಹಾಕಿದ್ರು.

2013ರ ತವರಿನಲ್ಲಿ ನಡೆದ ಆ್ಯಶಸ್​ ಸರಣಿಯನ್ನು ಇಂಗ್ಲೆಂಡ್​  3-0ಯಿಂದ ಗೆದ್ದು ಕೊಳ್ತು. ಆಂಗ್ಲರು ಓವಲ್​ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ರು. ಟೆಸ್ಟ್​​ನ ನಂಬರ್​ ವನ್​ ತಂಡವಾಗಿ ಮೆರೆದ್ರು. ಅದೇ ಹುಮ್ಮಸ್ಸಿನಲ್ಲಿ ಆಟಗಾರರು ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಂಭ್ರಮಿಸಿದ್ರು. ಅದೇ ಕೊನೆ ಆದಾದ ನಂತರ ಇಂಗ್ಲೆಂಡ್​ ತಂಡ ಇದುವರೆಗೂ ಒಂದು ಟೆಸ್ಟ್​ ಗೆಲಲ್ಲು ಸಾಧ್ಯವಾಗಿಲ್ಲ.

 ಓವಲ್​ ಘಟನೆಯ ನಂತರ ಇಂಗ್ಲೆಂಡ್​ ಪ್ರದರ್ಶನ ತುಂಬಾ ಕೆಟ್ಟದಾಗಿದೆ. ಆಡಿದ 9 ಟೆಸ್ಟ್​ನಲ್ಲಿ ಆಂಗ್ಲರು ಒಂದರಲ್ಲೂ ಗೆದ್ದಿಲ್ಲ. ಏಳರಲ್ಲಿ ಸೋತಿದ್ದು, 2 ಡ್ರಾ ಮಾಡಿಕೊಂಡಿದೆ.

 ಕಳೆದ ವರ್ಷ ಟೆಸ್ಟ್​ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್,​ ಇಂದು ಐದನೇ ಸ್ಥಾನ್ಕಕೆ ಕುಸಿದಿದೆ. ಇದು ಓವಲ್​ ಪಿಚ್​ನ ಶಾಪ ಅನ್ನೋದು ಕೆಲವರ ವಾದ. ಆದರೆ ಒಂದಂತೂ ಸತ್ಯ ಯಾರು ಪಿಚ್​ನ ಗೌರವಿಸುವುದಿಲ್ಲವೋ ಅವರಿಗೆ ಶ್ರೇಯ ದೊರೆಯುವುದಿಲ್ಲ. ಪಿಚ್​ ಒಲುಮೆಯಿಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂಬ ಮಾತು ಇಂಗ್ಲೆಂಡ್​ನ ಸದ್ಯದ ಪರಿಸ್ಥಿತಿಯಿಂದ ತಿಳಿಯುತ್ತೆ. ಇದು ಲಾಜಿಕ್ಕೋ, ಮ್ಯಾಜಿಕ್ಕೋ ಗೊತ್ತಿಲ್ಲ. ಆದರೆ ಆಂಗ್ಲರಿಗೆ ಮಾತ್ರ ಆಘಾತ ಆಗುವಂತ ಶಾಪ ಇದಾಗಿದೆ.

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ