ಮಂಗಳವಾರ, ಜುಲೈ 15, 2014

ಫುಟ್ಬಾಲ್​ ಲೋಕದ ವಿಭಿನ್ನ ಪಯಣಿಗ ಮೆಸ್ಸಿ

ಪ್ರತಿಯೊಬ್ಬ ಸಾಧಕನ ಹಿಂದೆ, ಒಂದು ನೋವಿನ ಕಥೆಯಿರುತ್ತೆ. ಯಶಸ್ಸು ಎಂಬುದು ಶ್ರಮ, ಶ್ರದ್ಧೆಗೆ ಸಿಗುವ ಪ್ರತಿಫಲ. ಫುಟ್ಬಾಲ್​ ಆಟಗಾರರು ಇದಕ್ಕೆ ಹೊರತಾಗಿಲ್ಲ. ಅರ್ಜೆಂಟೀನಾ ತಂಡದ ಸ್ಟಾರ್​ ಆಟಗಾರ ಬೆಂಕಿಯಲ್ಲಿ ಆರಳಿದ ಹೂ ಲಿಯೊನೆಲ್​ ಮೆಸ್ಸಿ. ದುರ್ಬಲ ದೇಹವನ್ನು ಮೆಟ್ಟಿ ನಿಂತ ಗಟ್ಟಿ ಮನಸ್ಸು ಮೆಸ್ಸಿ. ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲಿ. ಅವೆಲ್ಲ ಮೆಟ್ಟಿನಿಂತ ಕಾರಣವೇ ಇಂದು ವಿಶ್ವಶ್ರೇಷ್ಠ ಆಟಗಾರ ಎಂದೆನಿಸಿಕೊಳ್ಳಲ್ಲು ಸಾಧ್ಯವಾಗಿದ್ದು...

ಲಿಯೊನೆಲ್​ ಮೆಸ್ಸಿ ಕುಟುಂಬಸ್ಥರು ಮೂಲತಃ ಇಟಲಿಯವರು. 1880ರಲ್ಲಿ ಇವರ ಪೂರ್ವಜರು ಇಟಲಿಯಿಂದ ಅರ್ಜೆಂಟೀನಾಗೆ ಗುಳೆ ಬಂದವರು. ಮೆಸ್ಸಿ ತಂದೆ ಜಾರ್ಜ್​ ಮೆಸ್ಸಿ ಸ್ಟೀಲ್​ ಕಂಪನಿಯ ನೌಕರ, ತಾಯಿ ಪಾರ್ಟ್​ ಟೈಮ್​ ಮೆನೆಗೆಲಸ ಮಾಡಿಕೊಂಡು ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದವರು.. ಮೆಸ್ಸಿ ಮೊದಲಿನಿಂದಲೂ ಡೀಗೊ ಮೆರಡೋನಾ ಅವರ ಡೈ ಹಾರ್ಡ್​ ಫ್ಯಾನ್​, ಅವರಂತೆ ಆಗಬೇಕೆಂದು ಫುಟ್ಬಾಲ್​ಗೆ ಬಂದವರು. ಮೆರಡೋನಾ ಕನವರಿಸುತ್ತಾ, ಕಣ್ತುಂಬಿಕೊಂಡು ಆಡಿದವ ಮೆಸ್ಸಿ..

ಐದು ವರ್ಷದಿಂದಲೇ ಮಸ್ಸಿ ಫುಟ್ಬಾಲ್​ ಆಡಲು ಶುರುಮಾಡಿದ್ರು. ಮೆಸ್ಸಿಗೆ ಅವರ ತಂದೆ ಜಾರ್ಜ್ ಮೊದಲ ಕೋಚ್​. ಮೆಸ್ಸಿ ಅದ್ಭುತ ಆಟದಿಂದ ಅವರನ್ನು ‘ದ ಮಿಶಿನ್​ 87’ ಎಂದು ಕರೆಯಲಾಗುತ್ತಿತ್ತು. ಬಾಲ್​ ಅವರ ಹತ್ತಿರ ಬಂದರೆ ಸಾಕು ಗೋಲ್​ ಆಗುವ ತನಕ ಮೆಸ್ಸಿ ಬಾಲ್​ ಬೇರೆಯವರಿಗೆ ಕೊಡುತ್ತಿರಲಿಲ್ಲ. ವನ್​ಮ್ಯಾನ್​ ಆರ್ಮಿಯಂತೆ ಅವರು ಆಡುತ್ತಿದ್ರು... ಇಂತಹ ಮಹಾನ್​ ಆಟಗಾರನ ಲೈಫ್​ಗೆ ಅಡ್ಡಿಯಾಗಿದ್ದು ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿ ಎಂಬ ಕಾಯಿಲೆ...

ಹನ್ನೊಂದನೆ ವಯಸ್ಸಿನಲ್ಲೇ ಮೆಸ್ಸಿ ‘ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿ’  ಕಾಯಿಲೆಗೆ ತುತ್ತಾದ್ರು. ಈ ಕಾಯಿಲೆಯಿಂದ ಮೆಸ್ಸಿ ಬೆಳವಣಿಗೆ ಸಂಪೂರ್ಣವಾಗಿ ನಿಂತುಹೋಯ್ತು. ತಿರುಗಾಡಲಿಕ್ಕು ಅವರಿಂದ ಅಸಾಧ್ಯವಾಗಿತ್ತು. ಇದರ ಚಿಕಿತ್ಸೆ ಕೂಡ ಅತ್ಯಂತ ದುಭಾರಿಯಾಗಿತ್ತು. ಆಗಿನ ಕಾಲದಲ್ಲೇ ತಿಂಗಳಿಗೆ 900 ಡಾಲರ್​ ಖರ್ಚು ಮಾಡಬೇಕಿತ್ತು. ಬಡ ತಂದೆಗೆ ಇದು ಸಾಧ್ಯವಿರಲಿಲ್ಲ. ಆಗ ಮೆಸ್ಸಿ ನೆರವಿಗೆ ಬಂದಿದ್ದು, ಬಾರ್ಸಿಲೋನಾ ಕ್ಲಬ್​ನ ನಿರ್ದೇಶಕ ಕಾರ್ಲ್​ಸ್ ರೆಕ್ಸಾಚ್​. ಮೆಸ್ಸಿ ಚಿಕಿತ್ಸೆ ಕೂಡಿಸುವ ಜವಾಬ್ದಾರಿ ಹೊತ್ತಿಕೊಳ್ಳುವ ಮೂಲಕ ಕ್ಲಬ್​​ ಅವರಿಗೆ ಕ್ಲಬ್​ ಸದಸ್ಯತ್ವ ನೀಡಿದ್ರು. ಆದರೆ ಅದಕ್ಕೊಂದು ಷರತ್ತು ಕೂಡ ಇಟ್ಟಿದ್ರು. ಅವರ ಸಂಪೂರ್ಣ ಕುಟುಂಬ ಸ್ಪೇನ್​ಗೆ ಸ್ಥಳಾಂತರಗೊಳ್ಳಬೇಕೆಂದು. ಮಗನ ಚಿಕಿತ್ಸೆ ಆಗುತ್ತೆ ಎಂಬ ಒಂದೆ ಕಾರಣಕ್ಕೆ ಅವರ ತಂದೆ ತಾಯಿ ಸ್ಪೇನ್​ಗೆ ಸ್ಥಳಾಂತರಗೊಂಡ್ರು..

ಗ್ರೋತ್​​ ಹಾರ್ಮೋನ್​ ಡಿಫೆಸಿಯೆನ್ಸಿಯಿಂದ ಮೆಸ್ಸಿ ಬೆಳವಣಿಗೆ ಸಂಪೂರ್ಣ ನಿಂತು ಹೊಗಿತ್ತು.  15 ದಿನ ಬಲಗಾಲಲ್ಲಿ, 15 ದಿನ ಎಡಗಳಲ್ಲಿ ಮೆಸ್ಸಿ ತಿರುಗಾಡಬೇಕಿತು. ಅಷ್ಟು ತೀವ್ರತರವಾದ ಖಾಯಿಲೆ ಇದಾಗಿತ್ತು. ಚಿಕಿತ್ಸೆ ಸಿಗುತ್ತಿದ್ರು ಮೆಸ್ಸಿ ಓಂಟಿಗಾಲಲ್ಲಿ ನಿಲ್ಲುವಂತ ಪರಿಸ್ಥಿತಿ ಇತ್ತು. ಕೊನೆಗೆ ಕಠಿಣ ವ್ಯಾಯಾಮ ನಡೆಸುವ ಮೂಲಕ ಅವರು ಸಾಮಾನ್ಯರಂತೆ ಫುಟ್ಬಾಲ್​ ಆಡಲು ಶುರುಮಾಡಿದ್ರು.. ಬಾರ್ಸಿಲೋನ ಕಿರಿಯರ ಎ. ಬಿ ತಂಡದಲ್ಲಿ ಮಿಂಚಿದ್ರು..

 14ನೇ ವರ್ಷದಲ್ಲಿ ಮೆಸ್ಸಿ ಮುಂದೆ ಮತ್ತೊಂದು ದೊಡ್ಡ ಸವಾಲು ಎದುರಾಯ್ತು. ಕ್ಲಬ್​ಗೆ ಆಡುವುದೋ ಅಥವಾ ದೇಶಕ್ಕೆ ಮರಳುವುದೋ ಎಂದು ಗೊದಲದಲ್ಲಿದ್ರು.. ಆದರೆ ಮೆಸ್ಸಿ ಇಷ್ಟೇಲ್ಲಾ ಮಾಡಿದ ತಮ್ಮ ಕ್ಲಬ್​ಗೆ, ಚೀರಋನಿಯಾಗಿರಬೇಕು. ಕ್ಲಬ್​ನ ಋಣ ತೀರಿಸಲು  ಸೂಕ್ತ ಸಮವಿದು ಎಂಬ ನಿರ್ಧಾರದೊಂದಿಗೆ ಕ್ಲಬ್​ಗೆ ಆಡಿದ್ರು....

ಮೆಸ್ಸಿ ಕುಳ್ಳ ಎಂಬ ಕಾರಣ ಅವರಿಗೆ, ತಂಡದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿರಲಿಲ್ಲ. ಅವರು ಫಾಸ್ಟ್​ ಆಟಗಾರನಾಗಿದ್ರು, ಕುಳ್ಳ ಹೆಡರ್​ ಎಲ್ಲ ಅವರಿಂದ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗುತ್ತಿತ್ತು. ಸಿಕ್ಕ ಅವಕಾಶಗಳಲ್ಲಿ ಮೆಸ್ಸಿ ತಮ್ಮ ಸಾಮರ್ಥ್ಯ ಸಾಭಿತು ಪಡಿಸುವಲ್ಲಿ ವಿಫಲವಾದ್ರು. ಆದರೆ ಮಹತ್ವದ ಪಂದ್ಯದಲ್ಲಿ ಲಿಯೊನಲ್​ಗೆ ಆಡುವ ಅವಕಾಶ ಸಿಕ್ತು. ದುರದೃಷ್ಟವಶಾತ್​ ಅಂದು ಮೆಸ್ಸಿ ತಮ್ಮನ್ನು ತಾವು ಬಚ್ಚಲುಮನೆಯಲ್ಲಿ ಲಾಕ್​ ಮಾಡಿಕೊಂಡಿದ್ರು. ಹಾಫ್​ ಟೈಮ್​ ಆಗುವದೊರಳಗೆ ಅವರ ತಂಡ 0-1ರಿಂದ ಹಿನ್ನಡೆ ಅನುಭವಿಸಿತು. ಕೊನೆಗೆ ಕಿಟಕಿ ಹೊಡೆದು ಬಂದ ಮೆಸ್ಸಿ ಮೈದಾನಕ್ಕಿಳಿದ್ರು, ಅವರ ತಂಡ 3-1 ಗೋಲ್​ನಿಂದ ಜಯ ದಾಖಲಿಸಿತು. ಆ ಪಂದ್ಯದಲ್ಲಿ ಆ ಮೂರು ಗೋಲ್​ ಮೆಸ್ಸಿ ಹೊಡೆದಿದ್ರು...

2004ರಲ್ಲಿ ಮೆಸ್ಸಿ ಮತ್ತೊಂದು ದಾಖಲೆ ಬರೆದ್ರು, ಲಾ ಲೀಗ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಅವರ ಪಾಲಾಯ್ತು. ಸ್ಪೇನ್​ ಪರ ಆಡುವಂತೆ ಮೆಸ್ಸಿಗೆ ಅವಕಾಶ ಜೊತೆಗೆ ಒತ್ತಡ ಕೂಡ ಹೆಚ್ಚಿತು. ಆದರೆ ಲಿಯೊನೆಲ್​ ತಮ್ಮ ರಾಷ್ಟ್ರಕ್ಕೆ ಆಡುವುದಾಗಿ ಸ್ಪಷ್ಟಪಡಿಸಿದ್ರು. ಅರ್ಜೆಂಟೀನಾ ಪರವೇ ಆಡಿದ್ರು. ಜೂನಿಯರ್​ ಫಿಫಾ ವಿಶ್ವಕಪ್​ನಲ್ಲಿ ಗೋಲ್ಡನ್​ ಬೂಟ್​ ಸಹ ಪಡೆದ್ರು. ಅಲ್ಲಿಂದ ಮೆಸ್ಸಿ ತಿರುಗಿ ನೋಡಿದ್ದೇ ಇಲ್ಲ. ಇವತ್ತು ಜಗತ್ತು ಕಂಡ ಅದ್ಭುತ ಆಟಗಾರನಾಗಿ ಮಿಂಚಿದ್ರು...

ಬರ್ಸಿಲೋನಾ ಫುಟ್ಬಾಲ್​ ಕ್ಲಬ್​ ಸಾವಿರಾರು ಆಟಗಾರರಿಗೆ ಆಸರೆಯಾಗಿರಬಹುದು. ಆದರೆ ಇಂದು ಮೆಸ್ಸಿ ಎಂದರೆ ಬಾರ್ಸಿಲೋನಾ ಕ್ಲಬ್​ ಎನ್ನುವಷ್ಟು ಎತ್ತರಕ್ಕೆ ಮೆಸ್ಸಿ ಬೆಳೆದಿದ್ದಾರೆ. ತಮ್ಮ  ವೀಕ್ನೆಸ್​ ಅನ್ನು ತಮ್ಮ ಶಕ್ತಿಯಾಗಿ ಬಳಸಿಕೊಂಡ ಅವರು,  ಶ್ರದ್ಧೆ, ಶ್ರಮದಿಂದ ಇಂದು ಫುಟ್ಬಾಲ್​ ಲೋಕದ ಅನಭಿಷಕ್ತ ದೊರೆಯಾಗಿ ಮೆರೆಯುತ್ತಿದ್ದಾರೆ. ಅಂದು ಖಾಯಿಲೆ ಚಿಕಿತ್ಸೆಗೂ ಹಣವಿಲ್ಲದೆ ಪರಿತಪಿಸುತ್ತಿದ್ದ ಬಾಲಕ, ಇಂದು ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್​ ಆಟಗಾರನ್ನಾಗಿರುವುದು ಮೆಸ್ಸಿ
ಯಶೋಗಾಥೆಯನ್ನು ಹೇಳುತ್ತದೆ...

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ