ಮಂಗಳವಾರ, ಜುಲೈ 15, 2014


ಜರ್ಮನಿ ವಿಶ್ವಕಪ್​ ಗೆದ್ದಿದ್ದು ಈಗ ಹಳೆಯ ಸುದ್ದಿ. ಅದ್ಭುತ ಪ್ರದರ್ಶನದ ಮೂಲಕ ಜರ್ಮನ್ನರು ವಿಶ್ವ ಚಾಂಪಿಯನ್​ ಆದ್ರು. ಜರ್ಮನಿ ಚಾಂಪಿಯನ್ ಆಗಲು ಕಾರಣವಾದದ್ದು, ಲಕ್ಕಿ ನಂಬರ್​. ಹೌದು, ಜರ್ಮನಿಯ ಈ ಗೆಲುವಿನ ಲೆಕ್ಕಚಾರದಲ್ಲಿ ನಂಬರ್​ 7 ಲಕ್ಕಿಯಾಗಿ ಸಾಬೀತಾಯ್ತು.

 ಫಿಫಾ ವಿಶ್ವಕಪ್​ ಪೂರ್ತಿ ಜರ್ಮನಿಗೆ ಈ ಸಲ ನಂಬರ್​ 7ರ ಸಾಥ್​ ತುಂಬಾನೇ ಇತ್ತು. ಸಂಪೂರ್ಣ ಟೂರ್ನಿಯಲ್ಲಿ ಜರ್ಮನಿ ಆಡಿದ ಪ್ರತಿ ಪಂದ್ಯದಲ್ಲೂ, ಪ್ರತಿ ಕ್ಷಣದಲ್ಲೂ ಏಳರ ಸಾಥ್​ ಮಾತ್ರ ಜರ್ಮನಿಯ ಜೊತೆ ಬಿಡಲಿಲ್ಲ. ಹಾಗಾಗಿ ಜರ್ಮನಿ ವಿಶ್ವಚಾಂಪಿಯನ್​ ಆಗಲು ನಂಬರ್​ 7 ಲಕ್ಕಿಯಾಗಿ ಸಾಬೀತಾಯ್ತು.

 ಜರ್ಮನಿ ತಂಡದಲ್ಲಿ  ‘G’ ಫ್ಯಾಕ್ಟರ್

ಇಂಗ್ಲಿಷ್​ ವರ್ಣಮಾಲೆಯ ಪ್ರಕಾರ ‘ಜಿ’ ಅಕ್ಷರಕ್ಕೆ ಏಳನೇ ಸ್ಥಾನ ಸಿಗುತ್ತೆ. ಜರ್ಮನಿ ಎಂಬ ಹೆಸರು ಆರಂಭವಾಗುವುದು ‘ಜಿ’ಯಿಂದಲೇ.  ಈ ಸಲ ಜರ್ಮನಿ ತಂಡ ‘ಜಿ’ ಗ್ರೂಪ್​ನಲ್ಲಿ ಆಡಿತ್ತು ಎಂಬುವುದು ಮತ್ತೊಂದು ವಿಶೇಷ. ಇಲ್ಲೂ ಕೂಡ ಜರ್ಮನಿಗೆ 7 ಸಾಥ್​ ನೀಡ್ತು.

ಲೀಗ್​ನಲ್ಲಿ 7 ಗೋಲ್​ ಹೊಡೆದ ಜರ್ಮನಿ

 ಇನ್ನೂ ಗ್ರೂಪ್​ ಹಂತದಲ್ಲಿ ಜರ್ಮನಿ ಒಟ್ಟು 7 ಗೋಲ್​ ದಾಖಲಿಸಿತು. ಪೋರ್ಚುಗಲ್​ ವಿರುದ್ಧ 4, ಘಾನಾ ವಿರುದ್ಧ 2 ಗೋಲ್​ ಮತ್ತು ಯುಎಸ್​ಎ ವಿರುದ್ದ ಒಂದು ಗೋಲ್​ ದಾಖಲಿಸುವ ಮೂಲಕ ಲೀಗ್​​​ನಲ್ಲಿ ಒಟ್ಟು 7 ಗೋಲ್​ ಬಾರಿಸಿದ ಸಾಧನೆ ಮಾಡ್ತು.

 ಲೀಗ್​ನಲ್ಲಿ 7 ಅಂಕಗಳಿಸಿದ ಜರ್ಮನಿ

ವಿಶೇಷ ಎಂದರೆ ವಿಶ್ವಕಪ್​ನ ಲೀಗ್​​ನಲ್ಲಿ ಜರ್ಮನಿ ಎರಡು ಪಂದ್ಯದಲ್ಲಿ ಗೆಲುವು  ಮತ್ತು ಒಂದು ಪಂದ್ಯ ಡ್ರಾ ಮೂಲಕ ಒಟ್ಟು ಏಳು ಅಂಕಗಳಿಸಿತು. ಇದು ಕೂಡ ಜರ್ಮನಿಗೆ ಪ್ಲಸ್​ ಪಾಯಿಂಟ್​ ಆಯ್ತು.

 ಬ್ರೆಜಿಲ್​ ವಿರುದ್ದ 7 ಗೋಲ್

ಏಳರ ನಂಟು ಜರ್ಮನಿ ಜೊತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಬ್ರೆಜಿಲ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಜರ್ಮನಿ ದಾಖಲಿಸಿದ ಗೋಲಿನ ಸಂಖ್ಯೆ 7. ಇದು ಈ ವಿಶ್ವಕಪ್​ನ ಹೊಸ ಇತಿಹಾಸಕ್ಕೆ ಕಾರಣವಾದ ಪಂದ್ಯವಾಯ್ತು. ಆತಿಥೇಯ ಬ್ರೆಜಿಲ್​ ಅನ್ನು 7-1 ಗೋಲ್​ಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆಯಿತು. ವಿಶೇಷ ಎಂದರೆ ಬ್ರೆಜಿಲ್​ ವಿರುದ್ಧ ಜರ್ಮನಿ ಕೇವಲ 7 ನಿಮಿಷದಲ್ಲಿ 4 ಗೋಲ್​ ಹೊಡೆಯುವ ಮೂಲಕ ಬ್ರೆಜಿಲ್​ನ ಸೋಲಿಗೆ ಕಾರಣವಾಯ್ತು.

7ನೇ ತಿಂಗಳು ಮತ್ತು ಲಕ್ಕಿ ವರ್ಷ 2+0+1+4=7

ಹೌದು, ಜರ್ಮನಿ ವಿಶ್ವಕಪ್​ ಎತ್ತಿ ಹಿಡಿದಿದ್ದು ಜುಲೈ ತಿಂಗಳಲ್ಲಿ. ಇಂಗ್ಲೀಷ್​ ಕ್ಯಾಲೆಂಡರ್​ ಪ್ರಕಾರ ಜುಲೈ ಏಳನೇ ತಿಂಗಳು. ಇಷ್ಟೇ ಅಲ್ಲ 2014 ವರ್ಷ ಕೂಡ ಜರ್ಮನಿಗೆ ಲಕ್ಕಿ. 2+0+1+4 ಇವೆಲ್ಲವನ್ನು ಕೂಡಿದ್ರೆ ಬರುವ ಸಂಖ್ಯೆ ಏಳು. ಹಾಗಾಗಿ ಜರ್ಮನಿಗೆ ಈ ಸಂಖ್ಯೆ ಇನ್ನಿಲ್ಲದಂತೆ ಸಾಥ್​ ನೀಡ್ತು.

ವಿಶೇಷ ಎಂದರೆ ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಜರ್ಮನಿ ವಿನ್ನಿಂಗ್​ ಗೋಲ್​ ಗಳಿಸಿದ್ದು 113ನೇ ನಿಮಿಷದಲ್ಲಿ. ಹೆಚ್ಚುವರಿ ಸಮಯ ಮುಗಿಯುವ ಏಳು ನಿಮಿಷ ಮುಂಚೆ ಮಾರಿಯೋ ಗೋಟ್ಜ್​ ಗೋಲ್​ ದಾಖಲಿಸಿದ್ರು. ಒಟ್ಟಿನಲ್ಲಿ ಜರ್ಮನಿ ಪ್ರತಿ ಯಶಸ್ಸಿನಲ್ಲೂ ನಂಬರ್​-7 ಸಾಥ್​ ನೀಡ್ತು.

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ